ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ವೀರ ಶೈವ ಲಿಂಗಾಯತ ನಾಯಕರ ಸಭೆ ನಡೆಯಿತು. ಸಚಿವರು, ಸರ್ವ ಪಕ್ಷದ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸಭೆ ಆಯೋಜನೆ ಮಾಡಲಾಗಿತ್ತು. ಕಾಂಗ್ರೆಸ್ ಬಿಜೆಪಿ ಜೆಡಿ ಎಸ್ ಮೂರು ಪಕ್ಷದ ಲಿಂಗಾಯತ ಶಾಸಕರು ಸಭೆ ಯಲ್ಲಿ ಭಾಗಿಯಾಗಿದ್ದರು.
ಒಟ್ಟೂ ೫೪ ಕ್ಕೂ ಹೆಚ್ಚು ಮಂದಿ ವೀರಶೈವ ಲಿಂಗಾಯತ ಶಾಸಕರು, ಸಚಿವ ಈಶ್ವರ್ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಿಸಿ ಪಾಟೀಲ್ ಎಂಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಬಿ ಆರ್ ಪಾಟೀಲ್, ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಸೇರಿ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಜಾತಿ ಜನಗಣತಿಗೆ ಸಂಬಂಧಿಸಿ ಮಹತ್ವದ ಸಮಾಲೋಚನೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಇದು ಪಕ್ಷಾತೀತವಾದ ಸಭೆ ಎಲ್ಲ ಪಕ್ಷದ ನಾಯಕರು ಕೂಡ ಭಾಗಿಯಾಗಿದ್ದರು.೪೬ ಮಂದಿ ಶಾಸಕರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಶೈಕ್ಷಣಿಕ ಜನಗಣತಿ ಮಾಡ್ತಿದ್ದೇವೆ.ನಿಖರವಾದ ವಾಸ್ತವಾಂಶ ಆಧಾರದ ಮೇಲೆ ಸಂಖ್ಯೆ ಬರಬೇಕು. ಸಮುದಾಯದಲ್ಲಿ ೧೦೦ ಒಳ ಪಂಗಡಗಳು ಇವೆ. ಮೀಸಲಾತಿ ಸಲುವಾಗಿ ಕೆಲವರು ಬೇರೆ ಬೇರೆ ಉಪ ಪಂಗಡ ಮಾತ್ರ ಬರೆಸಿದ್ದಾರೆ. ಜಾತಿ ಪ್ರಮಾಣ ಪತ್ರಕ್ಕೆ ಈ ಸಮೀಕ್ಷೆಗೆ ಸಂಬಂಧ ಇಲ್ಲ. ಧರ್ಮದ ಕಾಲಂ ಜಾತಿ ಕಾಲಂನಲ್ಲಿ ಒಂದೇ ಹೆಸರು ಬರೆಸಬೇಕು.ಇದಕ್ಕೆ ಮಠಾಧೀಶರ ಜೊತೆಗೂ ಕೂಡ ಚರ್ಚೆ ಮಾಡ್ತೇವೆ.ಕೋಡ್ ಗೆ ಸಂಬಂಧಿಸಿ ಸಿಎಂ ಗಮನಕ್ಕೂ ಕೂಡ ತರುತ್ತೇವೆ ಎಂದರು.











