ಮನೆ ಪ್ರಸ್ತುತ ವಿದ್ಯಮಾನ ಅಕ್ರಮ ಗಣಿಗಾರಿಕೆಗಳ ಕುರಿತ ಪ್ರಕರಣಗಳನ್ನು ಸಿಬಿಐ 10 ವರ್ಷವಾದ್ರೂ ತನಿಖೆ ನಡೆಸದೇ ಇದ್ರೆ ರಾಜ್ಯಕ್ಕೆ ಹಸ್ತಾಂತರಿಸಬೇಕು:...

ಅಕ್ರಮ ಗಣಿಗಾರಿಕೆಗಳ ಕುರಿತ ಪ್ರಕರಣಗಳನ್ನು ಸಿಬಿಐ 10 ವರ್ಷವಾದ್ರೂ ತನಿಖೆ ನಡೆಸದೇ ಇದ್ರೆ ರಾಜ್ಯಕ್ಕೆ ಹಸ್ತಾಂತರಿಸಬೇಕು: ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು : ವಿಧಾನಸಭೆಯಲ್ಲಿ ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ 2025 ರ ಮೇಲೆ ಎಚ್ ಕೆ ಪಾಟೀಲ್ ಚರ್ಚೆ ಮಾಡಿದ್ರು. ಈ ವೇಳೆ ಮಾತಾಡಿದ ಅವರು ನಮ್ಮ ದೇಶದಿಂದ ಚೈನಾ ಪಾಕಿಸ್ತಾನ ಸೇರಿ ಹಲವಾರು ರಾಷ್ಟ್ರ ಗಳಿಗೆ ಅದಿರು ರಫ್ತು ಆಯ್ತು. ಅಕ್ರಮವಾಗಿ ಕಬ್ಬಿಣದ ಅದಿರು ಲೂಟಿ ರೀತಿ ವಿದೇಶಗಳಿಗೆ ಕಳಿಸಲಾಯಿತು.

ನಮ್ಮ ರಾಜ್ಯಕ್ಕೆ ಬಹುದೊಡ್ಡ ಹಾನಿ ಉಂಟಾಯಿತು.
ಸುಮಾರು ದಿನಗಳಿಂದ ಇದರ ಬಗ್ಗೆ ಚರ್ಚೆ ನಡೆದಿದೆ.ನಮ್ಮ ಲೂಟಿಯಾದ ಆಸ್ತಿ ಹಾನಿಯಾದ ಆಸ್ತಿ ವಾಪಸ್ ಪಡೆಯುವ ಸಲುವಾಗಿ ಸರ್ಕಾರ ವಿಧೇಯಕ ತಂದಿದೆ. ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಬ್ ಕಮಿಟಿ ಕೂಡ ಮಾಡಿದ್ರು. ಇದಕ್ಕಾಗಿ ವಸೂಲಾತಿ ಆಯುಕ್ತರ ನೇಮಕಾತಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದೆ. ಈ ವಿಧೇಯಕವನ್ನು ನಾವು ತಂದಿದ್ದೇವೆ.ರಾಜ್ಯದ ಆಸ್ತಿ ಅಕ್ರಮವಾಗಿ ಲೂಟಿ ಆಗಿ ಹೋಗಿದೆ. ಅದನ್ನು ರಾಜ್ಯ ಸರ್ಕಾರ ವಶಪಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.

ಕಬ್ಬಿಣದ ಅದಿರನ್ನು ಯಾರೋ ಅಕ್ರಮವಾಗಿ ಯಾರಿಗೋ ಮಾರಾಡ ಮಾಡಿರ್ತಾರೆ. ಅದರಿಂದ ದುಡ್ಡು ಬಂದಿರುತ್ತದೆ ಅದು ರಾಜ್ಯದ ಸ್ವತ್ತು. ಇದರಲ್ಲಿ ಆಗಿರುವ ಕ್ರೈಂ ಪ್ರೊಸೀಡ್ಸ್ ನಿಂದ ಹಣ ಬಂದಿರುತ್ತದೆ.ಇದನ್ನು ವಸೂಲಾತಿ ಮಾಡುವುದಕ್ಕೆ ಆಯುಕ್ತರ ನೇಮಕ ಅಗತ್ಯ. ಹರ್ಷದ್ ಮೆಹ್ತಾ ಸ್ಟಾಕ್ ಮಾರ್ಕೆಟ್ ಹಗರಣ ಎಲ್ಲರಿಗೂ ಗೊತ್ತಿದೆ. ೧೫-೨೦ ಸಾವಿರ ಕೋಟಿ ಪ್ರಕರಣ ಅದು. ಅದರಲ್ಲೂ ಕೂಡ ಇದೇ ರೀತಿ ವಸೂಲಾತಿ ಪ್ರಕ್ರಿಯೆ ನಡೆಯಿತು ಎಂದು ತಿಳಿಸಿದರು.

ನಿವೃತ್ತ ಲೋಕಾಯುಕ್ತ ನಿ. ನ್ಯಾ. ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ವರದಿ ಕೊಟ್ಟಿದ್ದರು. ಸುಮಾರು ೨೦ ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ರಫ್ತಾಗಿದೆ ಎಂದು ಅಂದಾಜು ೮೦ ಸಾವಿರ ಕೋಟಿ ಅಕ್ರಮವಾಗಿ ರಾಜ್ಯದ ಸ್ವತ್ತನ್ನು ಹಲವು ಕಂಪನಿಗಳು, ಹಲವು ವ್ಯಕ್ತಿ ಗಳು ವರ್ಗಾವಣೆ ಮಾಡಿದ್ದಾರೆ. ಪ್ರತಿ ಟನ್ ಗೆ ಅವತ್ತಿನ ಕಾಲದ ಬೆಲೆ ೪೦೧೩ ₹ ಎಂದು ಅಂದಾಜು. ಇಷ್ಟು ದೊಡ್ಡ ತೊಂದರೆ ರಾಜ್ಯಕ್ಕೆ ಆದಾಗ ಸರ್ಕಾರ ಏನು ಮಾಡಬೇಕು?.ಇದರ ವಸೂಲಾತಿಗೆ ಆಯುಕ್ತರ ನೇಮಕಾತಿ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಸಿಎಂ ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ಸಚಿವ ಸಂಪುಟ ಉಪಸಮಿತಿ ವರದಿಯ ಶಿಫಾರಸು ಬಗ್ಗೆ ತಿಳಿಸಿದ್ರು.
2006-10 ರವರೆಗಿನ ಗಣಿ ಅಕ್ರಮ ಪ್ರಕರಣಗಳ ಕುರಿತು ರಚಿಸಲಾಗಿದ್ದ ಹೆಚ್ಕೆ ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಶಿಫಾರಸುಗಳ ಜಾರಿ ಬಗ್ಗೆ ಸದನದಲ್ಲಿ ಹೇಳಿದರು. ಒಟ್ಟು 19.07 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮ ಸಾಗಣೆಯಾಗಿದೆ. ಸರ್ಕಾರಕ್ಕೆ 78,245 ಕೋಟಿ ರೂ ನಷ್ಟವಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆಯಾಗಿದೆ. ಪ್ರಕರಣಗಳ ತನಿಖೆಗೆ ಎಸ್ಐಟಿ ರಚನೆಗೆ ನಿರ್ಧಾರ ಮಾಡಲಾಗಿದೆ.ಬಿ ರಿಪೋರ್ಟ್ ಹಾಕಿರುವ 29 ಪ್ರಕರಣಗಳ ಮರು ಪರಿಶೀಲನೆಗೆ ತೀರ್ಮಾನ ಮಾಡಲಾಗಿದೆ. ಹತ್ತು ವರ್ಷಗಳ‌ ನಂತರವೂ ತನಿಖೆ ನಡೆಸದೇ ಉಳಿದ ಅಕ್ರಮ ಗಣಿಗಾರಿಕೆಗಳ ಕುರಿತ ಪ್ರಕರಣಗಳನ್ನು ಸಿಬಿಐ ತ್ವರಿತ ಗತಿಯಲ್ಲಿ ತನಿಖೆ ನಡೆಸುವಂತೆ ಕೋರಲು ತೀರ್ಮಾನ ಮಾಡಲಾಗಿದೆ. ಒಂದು ವೇಳೆ ಸಿಬಿಐ ತನಿಖೆ ನಡೆಸದಿದ್ದಲ್ಲಿ ಅವುಗಳನ್ನು ರಾಜ್ಯಕ್ಕೆ ವಾಪಸ್ ಹಸ್ತಾಂತರಿಸಬೇಕು. ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆಗೆ ಒಳಪಡಿಸಲು ಸಿಬಿಐ ಕೇಸ್ ಗಳನ್ನು ವಾಪಸ್ ಮಾಡವಂತೆ ಕೇಂದ್ರಕ್ಕೆ ಕೋರಲು‌ ನಿರ್ಧಾರ ಮಾಡಲಾಗಿದೆ ಎಂದ್ರು.