ಮನೆ Latest News ಬೆಂಗಳೂರು; ಹೆಬ್ಬಾಳ ಹೊಸ ಮೇಲ್ಸೇತುವೆ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಹೆಬ್ಬಾಳ ಹೊಸ ಮೇಲ್ಸೇತುವೆ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; ಹೆಬ್ಬಾಳ ಹೊಸ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಮಾಜಿ ಸಂಸದೆ ರಮ್ಯಾ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೆ ಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ವಾಹನಗಳ ಸರಾಗ ಸಂಚಾರಕ್ಕೆ ಅನುವಾಗುವಂತೆ ಹೆಬ್ಬಾಳ ಜಂಕ್ಷನ್ ನಲ್ಲಿ ಬಿಡಿಎ ನಿರ್ಮಿಸಿರುವ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಟೇಪ್ ಕಟ್ ಮಾಡಿ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಕಾಲೇಜು ದಿನಗಳ ಎಜ್ಡಿ ಬೈಕ್ ಚಾಲನೆಗೆ ಹಸಿರು ಬಾವುಟ ತೋರಿಸುವ ಮೂಲಕ ಸೋಮವಾರ ಉದ್ಘಾಟನೆ ಮಾಡಿದರು. ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಡಿಸಿಎಂ ಅವರು ಮಾಧ್ಯಮದವರ ಜತೆ ಮಾತನಾಡಿದರು

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಇವತ್ತು ಹೆಬ್ಬಾಳ ಜಂಕ್ಷನ್ ನಲ್ಲಿ ಹೊಸ ಫ್ಲೈಓವರ್ ಲೋಕಾರ್ಪಣೆ ಆಗಿದೆ. ಟ್ರಾಫಿಕ್ ಕಡಿಮೆ ಮಾಡಬೇಕು ಅಂತಲೇ ಇದನ್ನ ಮಾಡಿದ್ದೀವಿ. ನಾವು ಹಿಂದೆಯೇ ಇದನ್ನ ಮಾಡಿದ್ವಿ. ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ್ಮೇಲೆ ಹಣ ಕೊಟ್ಟು ಸ್ಯಾಂಕ್ಷನ್ ಮಾಡಿದ್ದೀವಿ. ಇದು 3೦೦ ಕೋಟಿ ಯೋಜನೆ. ಈಗ ಆಗಿರೋದು 150 ಕೋಟಿ.ಇನ್ನೂ ಹೊಸ ಲೂಪ್ ರೆಡಿ ಆಗುತ್ತದೆ. ಇದಲ್ಲದೇ ಮಾಲ್ ನಿಂದ ಡೈರಿ ಫಾರ್ಮ್ ವರೆಗೂ ಒಂದೂವರೆ ಕಿಮೀ ಟನಲ್ ಬರುತ್ತದೆ. ಕ್ಯಾಬಿನೆಟ್ ಗೂ ಇದು ಬರುತ್ತದೆ. ಎಮರ್ಜೆನ್ಸ್ ಭಾಗದಲ್ಲಿ ತೊಂದರೆ ಆಗುತ್ತಿದೆ ಅಂತ‌ ಟೆಂಡರ್ ಕರೀತಾ ಇದ್ದೀವಿ. ಟ್ರಾಫಿಕ್ ಹೆಚ್ಚಾಗ್ತಿದೆ, ಇದು ಅರಿವಿದೆ. ಅದಕ್ಕಾಗಿ ಬಿಡಿಎ ವತಿಯಿಂದ ವ್ಯವಸ್ಥೆ ಮಾಡಿದ್ದೀವಿ. ಇದು ಟೆಕ್ನಿಕಲ್ ವರ್ಕ್, ಒಂದು ಮೆಟ್ರೋ, ರೈಲ್ವೇ ಇದೆ. ಮೂರು ತಿಂಗಳಲ್ಕಿ ಇನ್ನೊಂದಕ್ಕೆ ಲೂಪ್ ಬರುತ್ತದೆ. ಮುಂದಿನ ಪ್ಲ್ಯಾನ್ ಬಗ್ಗೆ ಸಿಎಂ ಅವರಿಗೆ ವಿವರಣೆ ನೀಡಿದ್ದೀವಿ. ಯಾರ್ಯಾರು ಏನು ಮಾತಾಡ್ತಾರೆ, ಅದಕ್ಕೆ ಉತ್ತರ ಕೋಡೋಕೆ ಆಗಲ್ಲ. ನಾವು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು , ಅದಕ್ಕಾಗಿ ಹೊಸ ಟೆಂಡರ್ ಕರೆಯುತ್ತೇವೆ ಎಂದರು.

ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ತಾಕೀತು ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಈಗೇನು ಹೇಳೋದಿಲ್ಲ. ಸಪರೇಟ್ ಸುದ್ದಿಗೋಷ್ಟಿ ಮಾಡಿ ಹೇಳುತ್ತೇವೆ ಎಂದರು. ಇನ್ನು ಬೈಕ್ ಪ್ರೇಮಾಗಿರುವ ಡಿ.ಕೆ. ಶಿವಕುಮಾರ್ ಅವರು ಕಾಲೇಜು ದಿನಗಳಲ್ಲಿ ಅಂದರೆ ಪದವಿ ವ್ಯಾಸಂಗ ಮಾಡುವಾಗ 10,400 ರೂ. ಗೆ ಸಿಎಇ 7684 ಸಂಖ್ಯೆಯ ಯಡ್ಜಿ ಬೈಕ್ ಖರೀದಿಸಿದ್ದರು. ಕಾಲೇಜು ದಿನಗಳಲ್ಲಿ ಬಳಸಿದ್ದ ಈ ಬೈಕ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಬೆಂಗಳೂರಿನ ಹಳೆಯ ಬೈಕ್‌ ನವೀಕರಣ ಮಾಡುವ ಯುವಕ ಸುಪ್ರೀತ್ ಅವರು ರೀ ಕಂಡೀಷನಿಂಗ್ ಮಾಡಿದ್ದರು. ಈಗ ತಮ್ಮ ನೆಚ್ಚಿನ ಬೈಕ್ ಅನ್ನು ಹೆಬ್ಬಾಳ ಮೇಲ್ಸೇತುವೆ ಮೇಲೆ ಸೋಮವಾರ ಓಡಿಸಿದರು. ಅವರ ಅಭಿಮಾನಿಗಳು ಜೋರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದರು.

ಹೆಬ್ಬಾಳ ಮೇಲ್ಸೇತುವೆ 700 ಮೀ. ಉದ್ದದ ಲೂಪ್ ರಸ್ತೆಯಾಗಿದ್ದು, 2023ರಲ್ಲಿ ಇದರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ರೂ.80 ಕೋಟಿ ವೆಚ್ಚದಲ್ಲಿ ಈ ಮೇಲ್ಸೆತುವೆ ನಿರ್ಮಾಣ ಮಾಡಲಾಗಿದ್ದು, ಇದರಿಂದ ಶೇ. 30 ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾಯೋಗಿಕ ಸಂಚಾರ ಮಾಡುವ ಮೂಲಕ ಪರೀಕ್ಷೆ ಮಾಡಿದ್ದರು.