ಬೆಂಗಳೂರು: ವಿಧಾನಸಭೆಯಲ್ಲಿ ಗೊಬ್ಬರದ ಗಲಾಟೆ ತಾರಕ್ಕೇರಿದ ಡಿಸಿಎಂ ಡಿಕೆಶಿ ಹಾಗೂ ಅಶ್ವಥ್ ನಾರಾಯಣ್ ಏಕವಚನದಲ್ಲಿ ಬೈದಾಡಿಕೊಂಡ ಘಟನೆ ನಡೆದಿದೆ. ಗೊಬ್ಬರದ ವಿಚಾರಕ್ಕೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ ಸಮರ ತಾರಕ್ಕೇರಿದೆ. ಈ ವೇಳೆ ಡಿಕೆಶಿ ಹಾಗೂ ಅಶ್ವಥ್ ನಾರಾಯಣ್ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.
ಸಮಸ್ಯೆ ಇರುವುದಕ್ಕೆ ನಾವು ಮಾತನಾಡುತ್ತಿರುವುದು ಸಚಿವರು ಉತ್ತರ ಕೊಡಲಿ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಗೋಲಿಬಾರ್ ಆಗಿದ್ದು ಯಾವ ಸರ್ಕಾರದಲ್ಲಿ ನಿಮ್ಮ ಸರ್ಕಾರದಲ್ಲಿ ಆಗಿದ್ದು ಚೆಲುವರಾಯಸ್ವಾಮಿ ಎಂದಿದ್ದಾರೆ. ಅಶ್ವಥ್ ನಾರಾಯಣ್ ಬೆಂಗಳೂರಿನವರು ರೈತರ ಬಗ್ಗೆ ನಿಮಗೇನು ಗೊತ್ತು ನರೇಂದ್ರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಅಲ್ಲಿ ಉತ್ತರ ಕೊಡಲು ಆಗದೆ ಓಡೋಗಿರುವವರು ನೀವು ಧಮ್ ಇಲ್ಲದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಅಶ್ವಥ್ ನಾರಾಯಣ್ ಇಡೀ ಡಿಪಾರ್ಟ್ಮೆಂಟ್ ಲೂಟಿ ಹೊಡೆದವರು ನೀವು ಎಂದು ಜಾರ್ಜ್ ಹೇಳಿದ್ದಾರೆ. ಕೊಲೆಗಡುಕ ಸರ್ಕಾರ, ಅಸಮರ್ಥರು ಭ್ರಷ್ಟಾಚಾರ ಎಂದು ಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ. ಆಗ ಭ್ರಷ್ಟಾಚಾರ ಪಿತಾಮಹ ನೀನು ಎಂದು ಡಿಕೆಶಿ ಅಶ್ವಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರನ್ನ ಕೇಳಿದರು ಗೊತ್ತಾಗುತ್ತದೆ ಯಾರಪ್ಪ ಭ್ರಷ್ಟಾಚಾರದ ಪಿತಾಮಹ ಎಂದು ಅಶ್ವಥ್ ನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ರಾಮನಗರಕ್ಕೆ ಬಂದಿದ್ದಲ್ಲಪ್ಪ ಒಂದು ಸೀಟು ಬರಲಿಲ್ಲ ನಿನಗೆ. ಒಬ್ಬ ಮೈನಾರಿಟಿ ಸಚಿವರಿಗೆ ಅಸಮಾರ್ಥರು ಎಂದು ನೀನು ಹೇಳುತ್ತಿದ್ದೆಯಾ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಡಿಸಿಎಂ ಹಾಗೂ ಅಶ್ವತ್ಥ್ ನಾರಾಯಣ್ ಗಲಾಟೆ ಬಗೆಹರಿಸಲು ಸ್ಪೀಕರ್ ಖಾದರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಡಿಸಿಎಂ ಆರ್ ಅಶೋಕ್ ಸುನಿಲ್ ಕುಮಾರ್ ಭಾಗಿಯಾಗಿದ್ದಾರೆ. ಸಭೆಯಲ್ಲಿ ಶಾಸಕ ಡಾ ಅಶ್ವತ್ಥ್ ನಾರಾಯಣ್ ಕ್ಷಮಾಪಣೆ ಕೇಳಲು ಕಾಂಗ್ರೆಸ್ ಒತ್ತಾಯಿಸಿದೆ. ಕ್ಷಮಾಪಣೆ ಕೇಳೋಲ್ಲ ಎಂದು ಅಶೋಕ್ ಹೇಳಿದ್ದಾರೆ. ಅಶ್ವಥ್ ನಾರಾಯಣ್ ಯಾವುದೇ ಅಸಂಸದೀಯ ಪದ ಬಳಸಿಲ್ಲ ಎಂದಿದ್ದಾರೆ ಅಶೋಕ್. ಮುಖ್ಯಮಂತ್ರಿಗಳೇ ನೀವೇ ತೊಡೆ ತಟ್ಟಿ ಎಲ್ಲಾ ಆಗಿದೆ ಇಲ್ಲ. ಇದು ತೀರಾ ತಾರಕಕ್ಕೇ ಹೋಗಿಲ್ಲ. ಇಂತಹ ಘಟನೆ ಸಾಕಷ್ಟಾಗಿದೆ. ಇನ್ನಷ್ಟು ಬೆಳಸದೇ ಇಲ್ಲಿಗೇ ಮುಗಿಸಿ ಎಂದು ಅಶೋಕ್ ಹೇಳಿದ್ದಾರೆ. ಯಾರದರೂ ತಪ್ಪು ಪದ ಪ್ರಯೋಗ ಆಗಿದ್ತೆ ಕಡತದಿಂದ ತೆಗಿಸಿ ಎಂದು ಅಶೋಕ್ ಹೇಳಿದ್ದಾರೆ. ಎಲ್ಲರು ಸಮ್ಮತಿಸಿ ಸಭೆ ಮುಕ್ತಾಯವಾಗಿದೆ.
ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ನೀವೆಲ್ಲ ಹಿರಿಯರು ಇದ್ದೀರಿ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಸಗೊಬ್ಬರ ಕೊರತೆ ಗಂಭೀರ ವಿಚಾರ. ಅದಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಚರ್ಚೆ ನಡೆಯಬೇಕು.ಕಳೆದೆರಡು ದಿನ ಅಧಿವೇಶನ ಚೆನ್ನಾಗಿಯೇ ನಡೆದಿದೆ.ಕೆಲವು ವಿಚಾರಕ್ಕೆ ಅನಗತ್ಯ ಮಾತು ಬೇಡ, ನಾವು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು . ಇನ್ಮುಂದೆ ಚರ್ಚೆಗೆ ಮಾತ್ರ ಸೀಮಿತರಾಗಿ ಸದಸ್ಯರಿಗೆ ಸ್ಪೀಕರ್ ಪಾಠ ಮಾಡಿದ್ದಾರೆ. ಕಲಾಪದಲ್ಲಿ ಅಸಾಂವಿಧಾನಿಕ ಪದಗಳ ಬಳಕೆ ಕಡತದಿಂದ ತೆಗೆಯಲಾಗುತ್ತೆ ಎಂದು ಸ್ಪೀಕರ್ ಹೇಳಿದ್ದಾರೆ.











