ಬೆಂಗಳೂರು: ಅನುದಾನ ಪಾಲಿಟಿಕ್ಸ್ ಆರೋಪಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಹಿಂದೆ ಅವರೇ ಮಾಡಿಕೊಟ್ಟಿರೋದು. ಆಡಳಿತ ಪಕ್ಷದ ಶಾಸಕರಿಗೆ ಒಂದು, ವಿಪಕ್ಷದವರಿಗೆ ಒಂದು ಕೊಟ್ಟಿದ್ರು. ಅವರ ಶಾಸಕರಿಗೆ 50 ಕೋಟಿ ಕೊಟ್ಟಿದ್ರು. ನಮಗೆಲ್ಲಾ ಆಗ 25 ಕೋಟಿ, 15, 10 ಕೋಟಿ ಕೊಟ್ಟಿದ್ರು.. ಅದನ್ನೇ ನಾವು ಫಾಲೋ ಮಾಡ್ತಿದೇವೆ. ಮೌಖಿಕ ಅಂತಾ ಅಲ್ಲ.. ಸಿಎಂ ಡೆವಲಪ್ಮೆಂಟ್ ನೋಡ್ಕೊಂಡು ಕೊಡ್ತಾರೆ. ಈ ರೀತಿ ಮಾನದಂಡ ನೊಡ್ಕೋಂಡು ಕೊಡ್ತಾರೆ. ರಿವೇಂಜ್ ಮಾಡಲ್ಲ.. ಎಂದು ಪರಮೇಶ್ವರ್ ಹೇಳಿದ್ದಾರೆ.
ಶಾಸಕ ಬೈರತಿ ಬಸವರಾಜ್ ವಿರುದ್ಧ ಎಫ್ ಐ ಆರ್ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಸ್ಟೇಟ್‌ಮೆಂಟ್ ರೆಕಾರ್ಡ್ ಮಾಡ್ಕೋತಾರೆ. ಈ ವಿಚಾರದಲ್ಲಿ ಅವರ ಅನುಯಾಯಿಗಳ ಜೊತೆ ಸಂಪರ್ಕ ಇದ್ಯೋ ಇಲ್ವೋ ನೋಡ್ತಾರೆ. ನಮ್ಮ ಸರ್ಕಾರ ಬಂದು ಎರಡೂವರೆ ವರ್ಷಗಳಾಗಿದೆ.. ಈ ಅವಧಿಯಲ್ಲಿ ಎಷ್ಟಾಗಿವೆ ರಾಜಕೀಯ ಪ್ರೇರಿತ? ಎಂದು ವಿಪಕ್ಷದವರಿಗೆ ಟಾಂಗ್ ಕೊಟ್ಟಿದ್ದಾರೆ. ಆ ಮಹಿಳೆ ಬಂದು ಹೇಳಿದಾರೆ.. ಹಾಗಿದ್ರೆ ಅದರಲ್ಲಿ ಯಾವ ರಾಜಕೀಯ ಪ್ರೇರಿತ ಇದೆ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸಮಾವೇಶ ಆಯೋಜನೆ ಬಗ್ಗೆ ಮಾತನಾಡಿ ನಮ್ಮ ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ.ಅನೇಕ ಕಾರ್ಯಕ್ರಮ,ಯೋಜನೆಗಳನ್ನ ಸಿಎಂ ಕೊಟ್ಟಿದಾರೆ. ಅದೆಲ್ಲಾ ಜನರಿಗೆ ಗೊತ್ತಾಗಬೇಕಿದೆ.. ನಾವು ಏನೆಲ್ಲಾ ಕೊಟ್ಟಿದೇವೆ ಅಂತಾ.. ಹೀಗಾಗಿ ಸಮಾವೇಶಗಳನ್ನ ಮಾಡಿ ಏನೆಲ್ಲಾ ಮಾಡಿದೇವೆ ಅಂಥಾ ಹೇಳ್ತೇವೆ. ಜೊತೆಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಏನ್ ಮಾಡ್ತೇವೆ ಅಂತಾ ಹೇಳ್ತೇವೆ ಎಂದಿದ್ದಾರೆ.