ಬೆಂಗಳೂರು; ಸಿಂಹ ಘರ್ಜಿಸಬೇಕು, ಯಾಕೋ ಪೇಪರ್ ತಿಮ್ಮಾ ಮಾತಾಡ್ತಿದೆ ಎಂದು ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಂಹ ಘರ್ಜಿಸಬೇಕು, ಯಾಕೋ ಪೇಪರ್ ತಿಮ್ಮಾ ಮಾತಾಡ್ತಿದೆ. ಪ್ರಿಯಾಂಕ್ ಖರ್ಗೆ, ಸಂತೋಷ್‌ಲಾಡ್ ಬಗ್ಗೆ ಅನಗತ್ಯವಾಗಿ ಮಾತಾಡ್ತಿದಾರೆ. ಇವರಿಗೆ ಕಳೆದ ಚುನಾವಣೆಯಲ್ಲಿ ಯಾಕೆ ಟಿಕೆಟ್ ಸಿಗಲಿಲ್ಲ. ಟಿಕೆಟ್ ಸಿಗದೆ ಏನೇನೋ ಮಾತಾಡ್ತಿದಾರೆ.ಇವರನ್ನ ವಿಜಯೇಂದ್ರ, ಅಶೋಕ್ ಹತ್ತಿರಕ್ಕೂ ಬಿಟ್ಕೊಳ್ಳುತ್ತಿಲ್ಲ. ಇವರ ಬಗ್ಗೆ ಬಿಚ್ಚಿಡೋದು ನಮಗೂ ದೊಡ್ಡ ವಿಚಾರ ಏನಲ್ಲ. ಸಿಎಂ ಬಿರಿಯಾನಿ ತಿನ್ನಲು ಬರ್ತಾರೆ ಸಿಗಂಧೂರ್ ಸೇತುವೆ ಉದ್ಘಾಟನೆಗೆ ಬರೋದಿಲ್ಲ ಅಂತಾರೆ. ಕೆಲಸ ಕಾರ್ಯ ಇಲ್ಲದೆ ನಿಮ್ಮ ರೀತಿ ಅವರು ಹೋಗೋದಿಲ್ಲ. ಆಹ್ವಾನ ಇಲ್ಲದೆ ಹೋಗಲು ನಾವು ಬಿಜೆಪಿಯವರು ಅಲ್ಲ. ನಾವು ಸ್ವಾಭಿಮಾನಿಗಳು, ನಿಮ್ಮ ರೀತಿ ಓಡಾಡಿಕೊಂಡು ಇರೋದಿಲ್ಲ. ಪೇಪರ್ ತಿಮ್ಮ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು.ನಮ್ಮ ಲಾಯರ್ ಗೂ ರೆಡಿಯಾಗಿರಲು ಹೇಳಿದ್ದೇನೆ. ಪೇಪರ್ ತಿಮ್ಮ ಎರಡು ಬಾರಿ ನೋಟಿಸ್ ಕಳಿಸಿದ್ದಾರೆ.ಏನಾದರೂ ಮಾತಾಡಿದ್ರೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಪೇಪರ್ ಸಿಂಹನೋ, ನೋ.. ಪೇಪರ್ ಇಲಿನೋ..ಪ್ರತಾಪ ನರಿನೋ ಒಂದು ಮಾತನಾಡ್ತಾ ಇದೆ. ಅವರ ಹೆಸರು ಗೊತ್ತಿಲ್ಲ. ಅವರ ಮಾರ್ಕ್ ಕಾರ್ಡ್ ನಲ್ಲಿ ಪ್ರತಾಪ ಸಿಂಹ ಅಂತಾ ಇದೆ. ಆದ್ರೆ ಘರ್ಜಿಸಬೇಕು ಬಾಯಿ ಬಡೆದುಕೊಳ್ಳಬಾರದು. ಕಳೆದ ಕೆಲ ತಿಂಗಳುಗಳಿಂದ ಪ್ರತಾಪ್ ತಿಮ್ಮ ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಸಚಿವ ಸಂತೋಷ ಲಾಡ್, ಪ್ರೀಯಾಂಕ ಖರ್ಗೆ ಬಗ್ಗೆ ಅವರು ಎನೋ ಬಿಚ್ಚಿಡುತ್ತಾರಂತೆ. ಪ್ರತಾಪ ಸಿಂಹ್ ಅವರಿಗೆ ಯಾಕೆ ಟಿಕೆಟ್ ಕೊಡಲಿಲ್ಲ. ದೇಶದ್ರೊಹಿಗಳಿಗೆ ಯಾಕೆ ಸಂಸತಗೆ ಹೋಗಲು ಪಾಸ್ ಕೊಟ್ರೀ. ಮೋದಿಯವರ ಬಗ್ಗೆ ಯಾರು ತುಳಿಯದ ಹಾದಿ ಅಂತಾ ಪುಸ್ತಕ ಬರೆದು ಬಕೀಟು ಹಿಡಿದು ಟಿಕೇಟ್ ಪಡೆದಿದ್ರೀ. ಈಗ ಯಾಕೆ ಮೋದಿ ಅವರು ನಿಮ್ಮನ್ನ ಹತ್ತಿರನೂ ಬಿಟ್ಟುಕೊಳ್ಳುತ್ತಿಲ್ಲ.ಮೋದಿ ಅವರು ಪ್ರತಾಪ ಸಿಂಹ. ತೇಜಸ್ವಿ ಸೂರ್ಯ ಅವರಿಗೆ ಯುವ ಪ್ರತಿಭೆ ಅಂತಾ ಇದ್ರು. ತೇಜಸ್ವಿ ಸೂರ್ಯ ಟ್ರಂಪ್ ಕಡೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದಿದ್ದಾರೆ. ತೇಜಸ್ವಿ ಸೂರ್ಯ ಅವರ ಹೈಕಮಾಂಡ್ ಕರೆದು ಬೆಂಡತ್ತಿರಬೇಕು. ಅದ್ಕೆ ಆಚೇ ಬರತಾ ಇಲ್ಲ. ಪ್ರತಾಪ ಸಿಂಹ್ ಗೆ ವಿಜಯೇಂದ್ರಣ್ಣ ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ. ಅಶೋಕ ಅಣ್ಣಗೆ ನಿಮ್ಮನ್ನ ಕಂಡ್ರೆ ಆಗಲ್ಲ. ಯತ್ನಾಳ ಅವರಿಗೆ ನಿಮ್ಮನ್ನ ಕಂಡ್ರೆ ಆಗಲ್ಲ. ಆದ್ರು ಹತ್ತಿರ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
ಪ್ರತಾಪ್ ಸಿಂಹ್ ನಿಮ್ನದೂ ನೀವೂ ಬಿಚ್ಚಿಕೊಳ್ಳಿ. ಬಿಚ್ಚಡ್ತೇನಿ ಅಂದ್ರೆ ನಿಮ್ಮದೂ ನಾವೂ ಬಿಚ್ಚಿಡುತ್ತೇವೆ. ಸಚಿವರಾದ ಲಾಡ್. ಖರ್ಗೆ ಅವರ ಸಾಧನೆ ನಿಮ್ಮಗೆ ಗೊತ್ತೇನ್ರಿ..?. ಬಿರಿಯಾನಿ ತಿನ್ನೋಕೆ ಸಿಎಂ ಬರತಾರೆ. ಸಿಂಗದೂರ್ ಬಿಡ್ರ್ಜ್ ಓಪನಿಂಗ್ ಬರಲ್ಲ ಅಂತಾರೆ. ಕೆಲಸ ಕಾರ್ಯ ಇಲ್ಲದೇ ನಿಮ್ಮ ತರಹ ಕರೆಯದೇ ಇದ್ರು ಹೋಗ್ತಾರೆ. ಸರ್ವಜ್ಞ ಒಂದು ಮಾತು ಹೇಳ್ತಾರೆ ಕರಯದೇ ಬಂದವನು.ಕರೆದು ಬರದವನು, ಕರೆದು ಕರೆದಲ್ಲಿ ಹೊಡೆದ್ರು ಅಂತಾ ಹೇಳ್ತಾರೆ .ಆಹ್ವಾನ ಇಲ್ಲದೇ ಹೋಗೋಕೆ ನಾವೂ ಬಿಜೆಪಿಯವರಲ್ಲ. ಸ್ವಾಭಿಮಾನಿ ಕಾಂಗ್ರೆಸ್ ನವರು ನಾವೂ. ಸಿದ್ದರಾಮಯ್ಯ ಸರ್ಕಾರ ನಡೆಸುತ್ತಾರೆ. ಅವರಿಗೆ ಒಂದು ಗತ್ತು ಇದೆ. ಕೇಂದ್ರದವರು ಒಂದು ಆಹ್ವಾನ ಕೊಡಬೇಕಿತ್ತು,. ಹಿಂದಿನ ದಿನ ಕರೆದು ಬಂದೂಬಿಡಿ ಅನ್ನೋಕ್ಕೆ ಒಂದು ಶಿಷ್ಟಾಚಾರ ಇರುತ್ತೆ. ನಿಮ್ಮನ್ನ ಬಹಿರಂಗ ಚರ್ಚೆಗೂ ಕರೆಯೋಕೆ ನಿಮ್ನಗೆ ಈಗ ಆ ಸ್ಟೇಟಸ್ ಇಲ್ಲ. ನಮ್ಮ ಬ್ಲಾಕ್ ಅಧ್ಯಕ್ಷರ ಜೊತೆ ಚರ್ಚೆಗೆ ಬನ್ನಿ ಉತ್ತರ ಕೊಡ್ತಾರೆ. ಪ್ರತಾಪ ಈಗಾಗಲೇ ನನ್ನ ಮೇಲೆ ೨ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ನಾಳೆನೂ ಒಂದು ಹಾಕ್ತಾರೆ. ಅದಕ್ಕೆ ನಮ್ಮ ವಕೀಲರು ಉತ್ತರ ಕೊಡ್ತಾರೆ. ಪ್ರತಾಪ ಸಿಂಹ್ ನನಗೆ ಬೈದ್ರು ನಾನು ಕೇಸ ಹಾಕಿಲ್ಲ. ರಾಜಕೀಯದಲ್ಲಿ ಸಹಿಸಿಕೊಳ್ಳುವ ಆಗದಿದ್ದರೆ, ರಾಜಕಾರಣಕ್ಕೆ ಬರಬಾರದು. ಪ್ರತಾಪ ಸಿಂಹ್ ಗೆ ಯಾಕೆ ಟಿಕೇಟ್ ಮಿಸ್ ಆಯ್ತು ಅಂತಾ ಅವರು ಹೇಳಲಿ. ಬಿಜೆಪಿ ಅವರು ಕ್ರೇಡಿಟ್ ತಗೆದುಕೊಳ್ಳಲು ವಾರ್ ಗೆ ಬಿದ್ರು. ಸೌಜನ್ಯಕಾದ್ರು ಮುಂಚಿತವಾಗಿ ಕರೆಯಬೇಕು ಅಲ್ವಾ. ಯತ್ನಾಳ ಅವರು ಹೊಸ ಪಕ್ಷ ಕಟ್ಟಾರಂತೆ. ಅವರಿಗೆ ಒಳ್ಳೆಯದಾಗಲಿ. ಆದ್ರೆ ಬಿಜೆಪಿ ಈಗಾಗಲೇ ಮೂರು ಭಾಗ ಆಗಿದೆ. ಮುಂದೆ ನಾಲ್ಕು ಭಾಗ ಆಗುತ್ತೆ ಎಂದಿದ್ದಾರೆ.