ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ನಡೆದಿರುವ ಕಾಂಗ್ರೆಸ್ ಒಬಿಸಿ ಸಭೆ ದೇಶಾದ್ಯಂತ ಸುದ್ದಿಯಾಗಿದೆ.ಸಭೆಯಲ್ಲಿ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಮುನ್ನಡೆಸುವ ಜವಾಬ್ದಾರಿ ಈ ಸಮಿತಿಗೆ ಇದೆ ಅಂತಾ ಸಿಎಂ ಮಾತನಾಡಿದ್ದಾರೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಅಭಿವೃದ್ಧಿ ಆಗದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಅಂತಾ ಸಿಎಂ ಹೇಳಿದ್ದಾರೆ.ಬಿಜೆಪಿ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ ಎಂಬ ಆರೋಪ ಸಿದ್ದರಾಮಯ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಒಬಿಸಿ, ಪರಿಶಿಷ್ಟ, ಅಲ್ಪಸಂಖ್ಯಾತರ ಬಗ್ಗೆ ನಿಜವಾದ ಕಾಳಜಿ ಇದ್ಯಾ?. ಹಿಂದುಳಿದ ವರ್ಷಗಳ ಚಾಂಪಿಯನ್ ಅಂತ ಕರೆದುಕೊಳ್ಳುವ ಸಿದ್ದರಾಮಯ್ಯ ಕಾಂತರಾಜ್ ವರದಿ ಮಂಡನೆ ಮಾಡುತ್ತೇವೆ ಅಂತಾ ಬೊಗಳೆ ಹೊಡೆಯುತ್ತಿದ್ದರು. ರಾಹುಲ್ ಗಾಂಧಿ ಕರೆ ಮಾಡಿದರು ಅಂತಾ ಕಾಂತರಾಜ್ ವರದಿಯನ್ನು ಕಸದ ಬುಟ್ಟಿಗೆ ಹಾಕಿದಾಗ ಸಿದ್ದರಾಮಯ್ಯನವರ ಹಿಂದುಳಿದ ವರ್ಗಗಳ ಕಾಳಜಿ ಎಲ್ಲಿ ಹೋಗಿತ್ತು?. ಕಾಲೇಕರ್ ವರದಿಯನ್ನು ನೆಹರು ಕಸದ ಬುಟ್ಟಿಗೆ ಹಾಕಿದ ಮಾಹಿತಿ ಸಿದ್ಧರಾಮಯ್ಯನವರಿಗೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ದುಳಿದ ವರ್ಗಗಳನ್ನು ತಮ್ಮ ಮನೆಯಾಳುಗಳಂತೆ ನೆಹರು, ಗಾಂಧಿ ಕುಟುಂಬ ನಡೆಸಿಕೊಂಡಿತ್ತು. ಬಿಹಾರ ಚುನಾವಣೆ ಬಂದಿರುವ ಕಾರಣ ಕಾಂಗ್ರೆಸ್ ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದೆ. ಇಂದು ಹಿಂದುಳಿದ ವರ್ಗಗಳಿಗೆ ಅನ್ಯಾಯ ಅಗಿರುವುದಕ್ಕೆ ಬಿಜೆಪಿ ಹೊಣೆ ಅಲ್ಲ ಕಾಂಗ್ರೆಸ್ ಜವಾಬ್ದಾರಿ. ತಾವೇ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಇಂದು ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿ ಸಿದ್ದರಾಮಯ್ಯ ತರಹ ಅದೃಷ್ಟದ, ಲಾಟರಿ ಸಿಎಂ ಅಲ್ಲ. ನಿಮ್ಮ ಹಾಗೆ ಅವರು ಒಬಿಸಿ ವರ್ಗ ಅಂತಾ ಹೇಳಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡಿಲ್ಲ. ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ, ಪರಿಶಿಷ್ಟರ ಬಗ್ಗೆ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ನೋಡೋಣ. ನಾನು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಇವರ ಯೋಗ್ಯತೆಗೆ ಅದು ಸಾಧ್ಯವೂ ಇಲ್ಲ .ಗಾಂಧಿ ಕುಟುಂಬ ಇದನ್ನು ಒಪ್ಪುವುದೂ ಇಲ್ಲ ಎಂದು ಲೇವಡಿ ಮಾಡಿದ್ದಾರೆಯ
ಮುಸಲ್ಮಾನರ ಬಗ್ಗೆ ಕಾಂಗ್ರೆಸ್ ಪಕ್ಷ ಬಹಳಷ್ಟು ಮಾತನಾಡುತ್ತಾರೆ. ಹಿಂದುಳಿದ ವರ್ಗ, ಪರಿಶಿಷ್ಟರ ಬಗ್ಗೆ ಮಾತಾಡುವ ಯೋಗ್ಯತೆ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಇಲ್ಲ.ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಅವರಿಂದ ಬಿಜೆಪಿ ಮತ್ತು ಮೋದಿ ಪಾಠ ಕಲಿಯುವ ಅಗತ್ಯ ಇಲ್ಲ. ಕಾಂಗ್ರೆಸ್ ರೀತಿ ಜಾತಿ ಒಡೆಯುವ ಕೆಲಸ ಬಿಜೆಪಿ ಮಾಡಿಲ್ಲ.ಕಾಂಗ್ರೆಸ್ ಪಕ್ಷದ ಸಭೆ ಬಗ್ಗೆ ಬಿಜೆಪಿಗೆ ಯಾವುದೇ ಆತಂಕ ಇಲ್ಲ. ಬೂಟಾಟಿಕೆ, ನಾಟಕ ನಡೆಯಲು ಸಾಧ್ಯವಿಲ್ಲ. ನಾವು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಬಿಜೆಪಿ ಆತಂಕ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಳ ಬೇಗುದಿ ನಡೆಯುತ್ತಿದೆ. ಯಾರ ಪರ ವಕಾಲತ್ತು ವಹಿಸಬೇಕು ಅಂತಾ ಶಾಸಕರು ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಕಲ್ಬುರ್ಗಿಯಲ್ಲಿ ಡ್ರಗ್ಸ್ ಕೇಸ್ ನಲ್ಲಿ ಬಂಧಿತ ಪ್ರಿಯಾಂಕ್ ಖರ್ಗೆಗೆ ಅತ್ಯಾಪ್ತ. ಡ್ರಗ್ಸ್ ಮಾಫಿಯಾವನ್ನು ಗಂಭೀರವಾಗಿ ಮಟ್ಟ ಹಾಕಬೇಕಾದ ಅಗತ್ಯವಿದೆ. ಸಿದ್ದರಾಮಯ್ಯ ಭೂಸ್ವಾಧೀನ ವಿಚಾರದಲ್ಲಿ ಇನ್ನೂ ಗೊಂದಲದಲ್ಲಿದ್ದಾರೆ ಎನ್ನಿಸುತ್ತಿದೆ. ಸಿದ್ದರಾಮಯ್ಯ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಸುರ್ಜೇವಾಲಾ ಪದೇ ಪದೇ ಬೆಂಗಳೂರಿಗೆ ಬಂದು ಶಾಸಕರ ಸಭೆ ಮಾಡುತ್ತಿರುವ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.
ಶಾಸಕ ಭೈರತಿ ಬಸವರಾಜ ವಿರುದ್ಧ ಎಫ್ ಐಆರ್ ವಿಚಾರದ ಬಗ್ಗೆ ಮಾತನಾಡಿ ಇದರಲ್ಲಿ ಯಾವುದೇ ಪಾತ್ರ ಇಲ್ಲ ಅಂತಾ ಈಗಾಗಲೇ ಬಸವರಾಜ ಸ್ಪಷ್ಟೀಕರಣ ಕೊಟ್ಟಿದ್ದಾರೆ.ಫೋಟೋಗಳು ಇವೆ ಎಂಬ ಕಾರಣಕ್ಕೆ ತೇಜೋವಧೆ ಮಾಡುತ್ತಿರಬಹುದು.ಕಾಂಗ್ರೆಸ್ ನಾಯಕರ ಜೊತೆ ಯಾರ್ಯಾರ ಫೋಟೋಗಳು ಇವೆ ಅಂತಾ ಕೂಡಾ ಮಾತನಾಡೋಣ ಎಂದು ಆಂಧ್ರಪ್ರದೇಶದಿಂದ ಏರೋಸ್ಪೇಸ್ ಉದ್ಯಮಿಗಳಿಗೆ ಆಹ್ವಾನ ವಿಚಾರದ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಎಷ್ಟು ಬಂಡವಾಳ ಹೂಡಿಕೆ ಆಗಿದೆ ಅಂತಾ ಸಿದ್ದರಾಮಯ್ಯ ಮಾಹಿತಿ ಕೊಡಬೇಕು. ಸಿಗಂದೂರು ಸೇತುವೆ ವಿಚಾರದಲ್ಲಿ ಶಿಷ್ಟಾಚಾರದ ಬಗ್ಗೆ ಮಾತಾಡುವ ಸಿಎಂಗೆ ದೆಹಲಿಯಲ್ಲಿ ನೀತಿ ಆಯೋಗದ ಸಭೆಗೆ ಶಿಷ್ಟಾಚಾರದಂತೆ ಪಾಲ್ಗೊಳ್ಳಬೇಕು ಎಂದು ಯಾಕೆ ಅನ್ನಿಸಲಿಲ್ಲ?. ಬಿ.ವೈ. ರಾಘವೇಂದ್ರ ಸಂಸದರಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಸಿಎಂಗೆ ಆಹ್ವಾನ ಇರಲಿಲ್ಲ ಎಂಬುದು ಸುಳ್ಳು. ಕೇಂದ್ರ ಸಚಿವರಿಗೆ ಸನ್ಮಾನ ಮಾಡಲು ತಂದಿದ್ದ ಹಾರ, ಶಾಲುಗಳನ್ನು ಅಧಿಕಾರಿಗಳು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯ ಸರ್ಕಾರ ಇಷ್ಟು ಸಣ್ಣತನ ತೋರಿಸಿದೆ. ದಿನ ಕಳೆದರೆ ಲಾಂಚ್ ಸೇತುವೆ ಅಡಿಯಲ್ಲಿ ಸಾಗಲು ಸಾಧ್ಯವಾಗಲ್ಲ ಎಂಬ ಕಾರಣಕ್ಕೆ ಗಡ್ಕರಿ ಅವರನ್ನು ಕರೆಸಿ ಉದ್ಘಾಟನೆ ಮಾಡಲಾಗಿದೆ. ಸಿಎಂ ಕರೆಯದೇ ಅಪಮಾನ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಜಿಲ್ಲೆಯ ಶಾಸಕರು ಕೂಡಾ ಸಂಸದರ ರೀತಿ ಅನುದಾನ ತಂದು ಅಭಿವೃದ್ಧಿ ಮಾಡಲಿ.ಈ ರೀತಿ ರಾಜಕೀಯದಿಂದ ಜಿಲ್ಲೆ ಅಭಿವೃದ್ಧಿ ಆಗಲ್ಲ ಎಂದಿದ್ದಾರೆ.
ಬೆಂಗಳೂರು ಟನಲ್ ರೋಡ್ ಗೆ ಜಾಗತಿಕ ಟೆಂಡರ್ ಕರೆದಿರುವ ವಿಚಾರದ ಬಗ್ಗೆ ಮಾತನಾಡಿ ಡಿ.ಕೆ. ಶಿವಕುಮಾರ್ ಅವರಿಗೆ ಯಾಕೆ ಅಷ್ಟು ಅರ್ಜೆಂಟ್ ಇದೆಯೋ ಗೊತ್ತಿಲ್ಲ. ಇದನ್ನು ಸೂಕ್ತ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಬಹಳ ತರಾತುರಿಯಲ್ಲಿ ಮಾಡಲಾಗುತ್ತಿದೆ. ತೇಜಸ್ವಿ ಸೂರ್ಯ, ಅಶೋಕ್ ಎಲ್ಲರ ಜೊತೆ ಚರ್ಚೆ ಮಾಡಿ ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.











