ಮನೆ ಪ್ರಸ್ತುತ ವಿದ್ಯಮಾನ ಕೇಂದ್ರ ಸರ್ಕಾರ ಜನೌಷಧಿ ಕೊಟ್ಟರೆ ಅದಕ್ಕೂ ರಾಜ್ಯ ಸರ್ಕಾರ ತಡೆ ಹಾಕುತ್ತಿದೆ.: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ...

ಕೇಂದ್ರ ಸರ್ಕಾರ ಜನೌಷಧಿ ಕೊಟ್ಟರೆ ಅದಕ್ಕೂ ರಾಜ್ಯ ಸರ್ಕಾರ ತಡೆ ಹಾಕುತ್ತಿದೆ.: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು: ಕೇಂದ್ರ ಸರ್ಕಾರ ಜನೌಷಧಿ ಕೊಟ್ಟರೆ ಅದಕ್ಕೂ ರಾಜ್ಯ ಸರ್ಕಾರ ತಡೆ ಹಾಕುತ್ತಿದೆ ಎಂದು  ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಕೋರ್ಟ್ ಜನೌಷಧಿ ಕೇಂದ್ರಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಛೀಮಾರಿ ರೀತಿ ಆದೇಶ ಕೊಟ್ಟಿದೆ. ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯ ಸರ್ಕಾರ ದುರಾಸೆಯಿಂದ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಮುಚ್ಚುವ ನಿರ್ಧಾರ ಮಾಡಿತ್ತು. ಸರ್ಕಾರಿ ಆಸ್ಪತ್ರೆಗಳ ಮುಂದೆ ಹತ್ತಾರು ಮೆಡಿಕಲ್ ಶಾಪ್ ಗಳು ನಾಯಿಕೊಡೆಗಳಂತೆ ಇದ್ದವು. ಕೋರ್ಟ್ ಆದೇಶ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಇನ್ನಾದರೂ ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಬುದ್ದಿ ಕಲಿಯಬೇಕು. ರಾಜ್ಯಾದ್ಯಂತ ಹೃದಯಾಘಾತದ ಮರಣ ಮೃದಂಗ ಆಗುತ್ತಿದೆ. ಇಡೀ ಹಾಸನ ಜಿಲ್ಲೆಗೆ ಒಬ್ಬನೇ ಕಾರ್ಡಿಯಾಕ್ ಡಾಕ್ಟರ್ ಇದ್ದಾರೆ, ಸರ್ಜನ್ ಇಲ್ಲ. ಬೇರೆ ಜಿಲ್ಲೆಗಳಲ್ಲಿ ಹೃದಯಕ್ಕೆ ಸಂಬಂಧಿತ ವೈದ್ಯರು, ಸಲಕರಣೆಗಳ ಕೊರತೆ ಇದೆ. ಕೇಂದ್ರ ಸರ್ಕಾರ ಜನೌಷಧಿ ಕೊಟ್ಟರೆ ಅದಕ್ಕೂ ರಾಜ್ಯ ಸರ್ಕಾರ ತಡೆ ಹಾಕುತ್ತಿದೆ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲೇ ಎನ್ ಐಎ ದಾಳಿ ಮಾಡಿ ಮೂವರನ್ನು ಅರೆಸ್ಟ್ ಮಾಡಿರುವ ಬಗ್ಗೆ ಮಾತನಾಡಿದ ಅವರು ಗೃಹ ಇಲಾಖೆ ದಿಕ್ಕು ದೆಸೆ ಇಲ್ಲದ ಇಲಾಖೆ ಆಗಿದೆ. ರಾಜ್ಯ ಸರ್ಕಾರ ಕೂಡಲೇ ಪಾಕಿಸ್ತಾನಿಯರು, ಬಾಂಗ್ಲಾದೇಶಿಯರನ್ನು ಹೊರ ಹಾಕಬೇಕು. ರಾಜ್ಯ ಸರಕಾರ ಮತ ಬ್ಯಾಂಕ್ ಪಾಲಿಟಿಕ್ಸ್ ಮಾಡದೇ ತನಿಖಾ ತಂಡಕ್ಕೆ ಸಹಕಾರ ಮಾಡಬೇಕು. ಈ ಸಂಬಂಧಿಸಿದಂತೆ ಕ್ಷಿಪ್ರ ಪಡೆ ರಚಿಸಬೇಕು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಜಾಸ್ತಿಯಾಗುತ್ತಿವೆ ಎಂದರು.

ಗ್ಯಾರಂಟಿ ಯೋಜನೆ ಬಗ್ಗೆ ರಂಭಾಪುರಿ ಜಗದ್ಗುರು ಅವರ ಭಾವನೆ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಅವರ ಭಾವನೆ ಹೇಳುವ ಅವಕಾಶ ಇದೆ. ಅವರ ಭಕ್ತರು ಬಂದು ಹೇಳಿರುವುದನ್ನು ಸ್ವಾಮೀಜಿ ಹೇಳಿದ್ದಾರೆ ಎಂಬುದು ನನ್ನ ಭಾವನೆ.  ಸ್ವಾಮೀಜಿ ಹೇಳಿದ್ದು ಜನರಿಗೆ ತೊಂದರೆಯಾಗುತ್ತದೆ ಎಂಬ ಭಾವನೆಯಿಂದ.ಜನರು ದುಡಿಮೆ ಮಾಡಬೇಕು, ಸೋಮಾರಿಗಳಾಗಬಾರದು ಎಂಬುದು ಸ್ವಾಮೀಜಿ ಬಯಕೆ ಇರಬಹುದು. ಇದರಲ್ಲಿ ಏನೂ ತಪ್ಪು ಇದೆ ಅಂತಾ ನನಗೆ ಅನ್ನಿಸಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಈಗಾಗಲೇ ಬೋರ್ಡಿಂಗ್ ಪಾಸ್ ತೆಗೆದುಕೊಂಡಿದ್ದಾರೆ, ಫ್ಲೈಟ್ ಹತ್ತೋದು ಒಂದೇ ಬಾಕಿ. ಇದು ಈಗಾಗಲೇ ನಿರ್ಧರಿತ. ನಾನು ಜಾತಕ ಹೇಳುತ್ತಿಲ್ಲ. ಸುರ್ಜೇವಾಲಾ ಬೆಳಗ್ಗೆ ಬ್ರೇಕ್ ಫಾಸ್ಟ್ ಬೆಂಗಳೂರು, ಡಿನ್ನರ್ ದೆಹಲಿಯಲ್ಲಿ ಎಂಬಂತಾಗಿದೆ. ಈ ನಾಟಕ ಎಲ್ಲಾ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ಅರ್ಧನಾರೀಶ್ವರ ಹೇಳಿ ಒಂದು ವರ್ಗಕ್ಕೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ವಂಶ ಪಾರಂಪರ್ಯವಾಗಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡುವ ಪದ್ದತಿ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಎಂಬುದೇ ಗೊತ್ತಿಲ್ಲ. ಪಕ್ಷದ ಸಂವಿಧಾನದ ಪ್ರಕಾರ ರಾಜ್ಯಗಳ ನೇಮಕ ಆದ ಮೇಲೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗುತ್ತದೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾಜಿ ಸಂಸದ ಸಿದ್ದೇಶ್ವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಇನ್ನೂ ಹೇಳಿಕೆಗಳನ್ನು ನೋಡಿಲ್ಲ. ಹುಟ್ಟುಹಬ್ಬ ಆಚರಣೆ ಅವರ ವೈಯಕ್ತಿಕ .ವೈಯಕ್ತಿಕವಾಗಿ ಅವರು ಯಾರನ್ನು ಕರೆಯುತ್ತಾರೆ ಗೊತ್ತಿಲ್ಲ. ನನ್ನ ಅಂತೂ ಕರೆದಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಪ್ರತಿಕ್ರಿಯಿಸಲ್ಲ.

ಮಾಹಿತಿ ತೆಗೆದುಕೊಂಡು ಮಾತಾಡುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರ ನಾನು ದೆಹಲಿಗೆ ಹೋದಾಗ ಏನೂ ಚರ್ಚೆ ಆಗಿಲ್ಲ.ಇನ್ನೂ ಆ ವಿಷಯ ನಮ್ಮ ಟೇಬಲ್ ಗೆ ಬಂದಿಲ್ಲ.ಯಾರನ್ನು ನೇಮಕ ಮಾಡುತ್ತಾರೋ ಅದಕ್ಕೆ ಬದ್ಧರಿದ್ದೇವೆ ಎಂದು ಹೇಳಿದ್ದಾರೆ,