ಮನೆ Latest News ಆರ್.ಅಶೋಕ್, ವಿಜಯೇಂದ್ರ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ : ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್...

ಆರ್.ಅಶೋಕ್, ವಿಜಯೇಂದ್ರ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ : ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿಕೆ

0

ಬೆಂಗಳೂರು; ಆರ್.ಅಶೋಕ್, ವಿಜಯೇಂದ್ರ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ ಎಂದು ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

 

ಜುಲೈ 15ರಂದು ಒಬಿಸಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ದೇಶದ ಹಿಂದುಳಿದ ಸಮುದಾಯ ನಾಯಕರು ಒಂದೇ ವೇದಿಕೆಯಲ್ಲಿ ಸೇರ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಮುಖ್ಯಮಂತ್ರಿ ಇರುವುದರಿಂದ ಆಲ್ ಇಂಡಿಯಾ ಕಾಂಗ್ರೆಸ್ ನ ಹಿಂದುಳಿದ ಕಮಿಟಿ ಅಧ್ಯಕ್ಷ ಅನಿಲ್‌ ಜೈಹಿಂದ್ ಇಲ್ಲೇ ಸಭೆ ಮಾಡಲು ತೀರ್ಮಾನ ಮಾಡಿದ್ದಾರೆ.ಅನಿಲ್ ಜೈ ಹಿಂದ್ ನೇತೃತ್ವದಲ್ಲಿ ಇಲ್ಲಿ 15 ರಂದು ಸಭೆ ನಡೆಯಲಿದೆ. ಇದೇ ಸಭೆಯಲ್ಲಿ ಬಹಳಷ್ಟು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಹಿಂದುಳಿದ ವರ್ಗ ಹಾಗೂ ಜಾತಿ ಜನಗಣತಿ ಬಗ್ಗೆ ಬಹಳಷ್ಟು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಇನ್ನು  ಆರ್.ಅಶೋಕ್, ಬಿ.ವೈ ವಿಜಯೇಂದ್ರ ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಬಿ.ಕೆ ಹರಿಪ್ರಸಾದ್ ಕೌಂಟರ್ ಕೊಟ್ಟಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ. ಬಿಜೆಪಿಯವರು ಎರಡೂ ವರ್ಷ ಆದರೂ ಕೇಂದ್ರದಲ್ಲಿ ಅಧ್ಯಕ್ಷರನ್ನು ಮಾಡಿಲ್ಲ. ಮಹಿಳೆಯರನ್ನು ಹುಡುಕುತ್ತಿದ್ದಾರೆ. ಅರ್ಧನಾರೇಶ್ವರರನ್ನು ಹುಡುಕಿದರು ಬಹಳ ಸಂತೋಷ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು  ಸಿಎಂ ಸೀಟಿನ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಗೊಂದಲ ಆಗ್ತಿರೋದು ಮಾಧ್ಯಮಗಳು, ಟಿವಿಯಲ್ಲಿ ಮಾತ್ರ. ಸಿಎಂ, ಡಿಸಿಎಂ ನಡುವೆ ಯಾವುದೇ ಗೊಂದಲಗಳು ಇಲ್ಲ. ಪೆಹಲ್ಗಾಮ್ ಘಟನೆ ಆದ ಮೇಲೆ ಯಾವ ರೀತಿ ಟಿವಿಗಲ್ಲಿ ಕರಾಚಿ, ಲಾಹೋರ್ ಅಕ್ರಮಿಸಿಕೊಂಡಿದ್ರು ಅಂತ ಅಮೇಲೆ ರಾತ್ರಿ ಹೊತ್ತು ಸುಖವಾಗಿ ಮಲಗಿದ್ರು ಅಂತ ಅಷ್ಟೇ ಎಂದ ಅವರು ಸಿಎಂ ಸೀಟು ಗೊಂದಲ ಮಾಧ್ಯಮಗಳು ಸೃಷ್ಟಿ ಎಂದಿದ್ದಾರೆ.

ಸಿಎಸ್ ಶಾಲಿ‌ನಿ ರಜನೀಶ್ ಬಗ್ಗೆ MLC ರವಿಕುಮಾರ್ ಅವಹೇಳನ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ರವಿಕುಮಾರ್ ಹೀಗೆ ಮಾತಾಡಿರೋದು ಹೊಸದೇನು ಅಲ್ಲ. ಬಿಜೆಪಿ ಸಂಸ್ಕೃತಿಯೆ ಹೆಣ್ಣುಮಕ್ಕಳಿಗೆ ಅವಹೇಳನವಾಗಿ ಮಾತಾಡೋದು. ನರೇಂದ್ರ ಮೋದಿ ಅವರೇ ಶಶಿ ತರೂರ್ ಪತ್ನಿಗೆ 50 ಕೋಟಿ ಗರ್ಲ್ಸ್ ಫ್ರೆಂಡ್ ಅಂತ ಹೇಳಿದ್ರು. ಬಿಜೆಪಿ ಅವರಿಂದ ಇದನ್ನ ಬಿಟ್ಟು ಬೇರೆ ಏನು ನಿರೀಕ್ಷೆ ಮಾಡಲು ಆಗೊಲ್ಲ. ರವಿಕುಮಾರ್ ಕೇಸ್ ನಲ್ಲಿ ಕೋರ್ಟ್ FIR ರದ್ದು ಮಾಡಿಲ್ಲ, ಅದೇ ಸಂತೋಷದ ಸುದ್ದಿ. ಕೋರ್ಟ್ ಗಳು ಕಠಿಣ ಕ್ರಮ ತೆಗೆದುಕೊಂಡಾಗ ಇಂತಹ ಮಾತುಗಳಿಗೆ ಕಡಿವಾಣ ಬೀಳುತ್ತವೆ. FIR ರದ್ದು ಮಾಡೋದು, ಕೇಸ್ ರದ್ದು ಮಾಡೋದು ಕೋರ್ಟ್ ಮಾಡಿದ್ರೆ ದೇಶದಲ್ಲಿ ಇವರನ್ನ ಯಾರು ಕೇಳೊಲ್ಲ ಅಂದುಕೊಳ್ತಾರೆ. ಈಗ ಜಾಮೀನು ಮೇಲೆ ಅವರು ಹೊರಗೆ ಇದ್ದಾರೆ. ಈಗ ಅವರ ನಾಲಿಗೆಗೆ ಕಡಿವಾಣ ಬೀಳುತ್ತೆ ಅನ್ನಿಸುತ್ತೆ. ಸಭಾಪತಿಗಳಿಗೆ ನಾವು ದೂರು ಕೊಟ್ಟಿದ್ದೇವೆ. ಸದನಕ್ಕೆ ಅಗೌರವ ತಂದಿದ್ದಾರೆ ಅವರನ್ನು ವಜಾ ಮಾಡಿ ಅಂತ. ಇಂತಹ ಭಾಷೆ ಪ್ರಯೋಗ ಸರಿಯಲ್ಲ ಅಧ್ಯಕ್ಷರಿಗೆ ಹೇಳಿದ್ದೇವೆ. ಸಭಾಪತಿಗಳು ಏನ್ ಕ್ರಮ ತೆಗೆದುಕೊಳ್ತಾರೆ ನೋಡೊಣ. ಸದನ ಪ್ರಾರಂಭವಾದಗ ಈ ವಿಷಯ ಪ್ರಸ್ತಾಪ ಮಾಡ್ತೀವಿ ಎಂದಿದ್ದಾರೆ.

ಬಿಜೆಪಿಯಿಂದ ರವಿಕುಮಾರ್ ಸಮರ್ಥನೆ ವಿಚಾರದ ಬಗ್ಗೆ ಮಾತನಾಡಿ ಸಮರ್ಥನೆ ಮಾಡಿಕೊಳ್ಳೋದ್ರಲ್ಲಿ ಬಿಜೆಪಿ ಅವರು ನಿಸ್ಸೀಮರು. ಮೋದಿ ಅವರು ಸೋನಿಯಾ ಗಾಂಧಿಗೆ ಜಸ್ಸಿ ಕೌ ಅಂತ ಹೇಳಿದ್ರು. ಶಶಿ ತರೂರು ಪತ್ನಿಗೆ 50 ಗರ್ಲ್ ಫ್ರೆಂಡ್ ಅಂತ ಹೇಳಿದ್ರು. ಇವೆಲ್ಲ ಕೀಳು ಮಟ್ಟದ ಭಾಷೆಗಳು‌. ಇಂತಹ ಕೀಳು ಭಾಷೆ ಬಳಸೋದ್ರಲ್ಲಿ ಈ ನಾಗಪುರದ ಗೋಬರ್ ಯುನಿವರ್ಸಿಟಿಗಳು ಡಾಕ್ಟರೇಟ್ ತೆಗೆದುಕೊಂಡಿದ್ದಾರೆ. ಇಲ್ಲಿವರೆಗೂ ಗೋಬರ್ ಯುನಿವರ್ಸಿಟಿ, ನಾಗಪುರ ಯುನಿವರ್ಸಿಟಿ ನಾವು ಡಿಸಾಲ್ ಮಾಡೋದಿಲ್ಲವೋ ಅಲ್ಲಿವರೆಗೂ ಇದು ಹೀಗೆ ಇರುತ್ತದೆ ಎಂದು ಹೇಳಿದ್ದಾರೆ.