ಮನೆ Latest News ಬೆಂಗಳೂರು; ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಬೆಂಗಳೂರು; ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

0

ಬೆಂಗಳೂರು; ಬ್ರಹ್ಮಲೀನ ಜಗದ್ಗುರು ಶ್ರೀ ವೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಯವರ 19ನೇ ವರ್ಷದ ಪುಣ್ಯಾರಾಧನೆ ಸ್ಮರಣಾರ್ಥವಾಗಿ ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಬೆಂಗಳೂರಿನ ಕೇತೋಹಳ್ಳಿಯಲ್ಲಿ  ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ಮಾಜಿ‌ ಸಚಿವ ಬಂಡೆಪ್ಪ ಕಾಂಶಪೂರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ, ಎಂಎಲ್ ಸಿ ಹೆಚ್.ವಿಶ್ವನಾಥ್, ಕಾಗಿನೆಲೆಯ ನಿರಂಜನನಾಂದಪುರಿ ಸ್ವಾಮೀಜಿ, ಶಾಂತವೀರ ಮಹಾಸ್ವಾಮಿ, ಸಿದ್ದರಾಮೇಶ್ವರ ಮಹಾಸ್ವಾಮಿ, ಈಶ್ವರನಾಂದಪುರಿ ಸ್ವಾಮೀಜಿ‌ , ಮಾಜಿ ಸಚಿವ ಆರ್. ಶಂಕರ್, ಕರ್ನಾಟಕ ರಾಜ್ಯ ಮಹಿಳಾ‌ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸೇರಿದಂತೆ ಹಿಂದುಳಿದ ಸಮುದಾಯಗಳ  ಸ್ವಾಮೀಜಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ನಿರಂಜನಪುರಿ ಸ್ವಾಮೀಜಿ 1992ರಲ್ಲಿ ನಮ್ಮ ಈ ಮಠ ಸ್ಥಾಪನೆ ಆಯ್ತು. ಇದು ಭಕ್ತರ ಕಾಣಿಕೆಯಲ್ಲಿ ನಿರ್ಮಾಣವಾದ ಮಠ. ಮಠ ಸ್ಥಾಪನೆಗೆ ಕಾಣದ ಕೈಗಳು ಕೆಲಸ ಮಾಡಿದ್ವು. ಹರಿಹರಿ ಮಠ, ಬೆಂಗಳೂರು ಮಠ ಮಾಡುವಾಗಲೂ ಅಡೆತಡೆ ಆಯ್ತು. ಭಕ್ತರ ದೇಣಿಗೆಯಿಂದ ಈ ಮಠ ನಿರ್ಮಾಣವಾಗಿದೆ. ಸಚಿವ ಬೈರತಿ ಸುರೇಶ್ 50 ಲಕ್ಷ ರೂ. ಶಾಮನೂರು ಶಿವಶಂಕರಪ್ಪ 25 ಲಕ್ಷ, ಮಾಜಿ‌ ಸಿಎಂ ಬೊಮ್ಮಾಯಿ 25 ಲಕ್ಷ, ಪ್ರಿಯಾಕೃಷ್ಣಾ 25 ಲಕ್ಷ ಕೊಟ್ಟಿದ್ದಾರೆ. ಒಟ್ಟು 4 ಕೋಟಿ 73 ಲಕ್ಷ ರೂ.ನನ್ನ ಅಕೌಂಟ್ ಗೆ ತಲುಪಿದೆ. ಕೆಲವರು ಹೀಯಾಳಿಸುತ್ತಿದ್ದಾರೆ ಅಂತ ಸಿದ್ದರಾಮಯ್ಯರನ್ನ ಭೇಟಿ ಮಾಡಿದೆ. ನೀವು ಉನ್ನತ ಸ್ಥಾನದಲ್ಲಿದ್ದೀರಿ, ತಲೆ ಕೆಡಿಸಿಕೊಳ್ಳಬೇಡಿ ಅಂದ್ರು.ಈಗ ಜೀನ್ ಕುದುರೆ ರೀತಿ ಓಡುತ್ತಾ ಇದ್ದೇನೆ. ಮಠ ಕಟ್ಟಬೇಕಾದರೆ ಸರ್ಕಾರದ ಅನುದಾನವನ್ನ ನಾವು ತೆಗೆದುಕೊಳ್ಳುವುದಿಲ್ಲ.ಸರ್ಕಾರದ ಮಠ ಆಗಬಾರದು, ಭಕ್ತರ ಮಠ ಆಗ್ಬೇಕು ಅಂತ ಸರ್ಕಾರದ ಅನುದಾನ ತೆಗೆದುಕೊಂಡಿಲ್ಲ. ಹಾಸ್ಟೆಲ್ ಕಟ್ಟಲು ಸರ್ಕಾರದ ಸಹ ತೆಗೆದುಕೊಂಡಿದ್ದೇವೆ.ಭಕ್ತಾದಿಗಳಾದ ನಿಮ್ಮ ಭಿಕ್ಷೆ ಸ್ವೀಕರಿಸಿ ಮಠ ಕಟ್ಟಿದ್ದೇವೆ. ದಲಿತ, ಲಿಂಗಾಯತ, ಒಕ್ಕಲಿಗ ಸಮುದಾಯದ ಭಕ್ತರೂ ಮಠಕ್ಕೆ‌ ಸಹಾಯ ಮಾಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ ನಾನೇ ಈ ಮಠಕ್ಕೆ ಶಂಕು ಸ್ಥಾಪನೆ ಮಾಡಿದ್ದು. ನಾನೇ ಅಡಿಗಲ್ಲು ಹಾಕಿ, ಉದ್ಘಾಟನೆ ಮಾಡಿದ್ದು ಸಂತೋಷದ ವಿಷಯ. ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಶಾಖಾ ಮಠ ಇರಲಿಲ್ಲ. ಬನಶಂಕರಿಯ ಶ್ರೀನಿವಾಸನಗರ ಬಳಿ ಕಟ್ಟಡ ನಿರ್ಮಾಣ ಮಾಡಿದ್ವಿ. ಸ್ವಾಮೀಜಿಗಳು ಬಂದರೆ ಉಳಿದುಕೊಳ್ಳೋಕೆ ಜಾಗ ಬೇಕು ಅಂತ ಭವನ ನಿರ್ಮಾಣ ಮಾಡಿದ್ವಿ. ಅದು ಯೋಗ್ಯ ಅಂತ ಕಾಣಲಿಲ್ಲ. ಬೆಂಗಳೂರಿನಲ್ಲಿ ಒಂದು ಮಠ ಬೇಕಿತ್ತು. ಒಂದು ಎಕರೆ ಜಾಗವನ್ನ ಮಹೇಶ್ ಎಂಬವರು ಮಠಕ್ಕೆ ಕೊಟ್ಟಿದ್ದಾರೆ. ಇದರ ಬೆಲೆ‌ ೧೦ ಕೋಟಿ ರೂ. ಹೆಚ್ಚು ಆಗುತ್ತೆ. ನಿರಂಜನಾನಂದಪುರಿ ಸ್ವಾಮೀಜಿ ಬಹಳ ಬೇಗ ಕಟ್ಟದ ಕಟ್ಟುತ್ತಾರೆ. ನಾನು ಸಿಎಂ ಆದ್ಮೇಲೆ ಅಡಿಗಲ್ಲು ಹಾಕಿದ್ದು. ಇದು ಕಾಗಿನೆಲೆ ಗುರು ಪೀಠದ ಶಾಖಾ ಮಠ. ಮಠ ಬೆಳೆಯಬೇಕು, ಜನರಿಂದಲೇ ಮಠ ಬೆಳೆಯುವುದು. ಯಾವುದೇ ಮಠ ಮಾನ್ಯಗಳು ಬೆಳೆಯಲು ಜನರ ಸಹಾಯ ಬೇಕು.ಸರ್ಕಾರದ ಮೇಲೆ ಅವಲಂಬನೆ ಆಗಿ ಬೆಳೆಯಲು ಸಾಧ್ಯವಾಗುವುದಿಲ್ಲ. 1992ರಲ್ಲಿ ಮಠ ಪ್ರಾರಂಭ ಆಗಿದ್ದು. ಆಗ ನಾನು ಸೋತಿದ್ದೆ, ಬಂಗಾರಪ್ಪ ಸಿಎಂ ಆಗಿದ್ರು  ಎಂದರು.

ಮಠ ಮಾಡೋಕೆ ಹೋದಾಗ ಬಂಗಾರಪ್ಪರನ್ನ ಕರೆಯಲು ಹೋದಾಗ ದುಡ್ಡು ಕೊಡೋಕೆ ಬಂದ್ರು. ಆಗ ಕುರುಬರಲ್ಲಿ ಅಷ್ಟು ಬಡವರಿಲ್ಲ ಅಂತ ವಾಪಾಸ್ ಕೊಟ್ವಿ. ಯಾರಿಗೆ ಮಠ ಇಲ್ವೋ ಅವರಿಗೆಲ್ಲ ಈ ಮಠ ಅಂತ ಘೋಷಣೆ ಮಾಡಿದ್ವಿ.ಮಠಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಠಗಳು ಆಗದಿದ್ದರೆ ಶಿಕ್ಷಣ, ಆರೋಗ್ಯ ಸಂಘಟನೆ ಆಗಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿಯನ್ನ ಗುರುತಿಸಬೇಕು, ಜಾತಿಯನ್ನ ನಾಶ ಮಾಡಬೇಕು ಅಂತ ಕುವೆಂಪು ಹೇಳಿದ್ರು. ಎಲ್ಲರ ಸರ್ವೋದಯ ಆಗಬೇಕು ಅಂತ ಮಹಾತ್ಮ ಗಾಂಧೀಜಿ ಹೇಳಿದ್ರು. ಕುವೆಂಪು ಅವರು ಸಮಪಾಲು, ಸಮಬಾಳು ಆಗ್ಬೇಕು ಅಂದ್ರು. ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆ ಆಗ್ಬೇಕು. ಸಮ ಸಮಾಜ ನಿರ್ಮಾಣ ಆಗ್ಬೇಕು ಅಂತ ಹೇಳಿದ್ದಾರೆ. ಕುವೆಂಪು, ಅಂಬೇಡ್ಕರ್, ಬಸವಾದಿ ಶರಣರು, ಗಾಂಧೀಜಿ ಎಲ್ಲರೂ ಇದ್ದನ್ನೇ ಹೇಳಿದ್ದರು ಎಂದು ತಿಳಿಸಿದ್ರು.