ಬೆಂಗಳೂರು; ಕಬ್ಬನ್ ಪಾರ್ಕ್ ಬಳಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಕುವೆಂಪು ವಿಚಾರ ಕ್ರಾಂತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಿಎಂ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿದರು. ಬರಗೂರು ರಾಮಚಂದ್ರಪ್ಪ ಸಂಪಾದಕತ್ವದ ಆಯ್ದ ಲೇಖನಗಳ ಸಂಕಲನ ಪುಸ್ತಕ ಇದಾಗಿದೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜಕಾರಣಿಗಳು, ಸಾಹಿತಿಗಳು, ಎಲ್ಲಾ ರೀತಿಯ ಜನರು ಇದ್ದಾರೆ. ಬಹಳ ಸಂತೋಷದಿಂದ ಕುವೆಂಪು ವಿಚಾರ ಕ್ರಾಂತಿ ಪುಸ್ತಕ ಜನಾರ್ಪಣೆ ಮಾಡಿದ್ದೇನೆ. ಜನಾರ್ಪಣೆ ಅಂದ್ರೆ ಜನರಿಗೆ ತಲುಪಬೇಕು. ಜನರು ವೈಚಾರಿಕ ಮನೋಭಾವನೆ ಇಂದ ಕೂಡಿರಬೇಕು. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಂಡಿರಬೇಕು. ಎಲ್ಲಕ್ಕಿಂತ ಮನುಷ್ಯರಾಗಿ ಬದುಕಬೇಕು. ನಮ್ಮ ದೇಶದಲ್ಲಿ ಅನೇಕ ದಾರ್ಶನಿಕರು, ಸಮಾಜದಲ್ಲಿರೋ ಅನೇಕ ಅಂಕು ಡೊಂಕು ತಿದ್ದುವ ಕೆಲಸ ಮಾಡ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಕೂಡ ಇದಕ್ಕೆ ಹೊರತಲ್ಲ. ಬಹಳ ಜನ ವಿದ್ಯಾವಂತರು ಸಹ ಇದನ್ನ ಹೇಳ್ತಾರೆ. ಜಾತಿ ವ್ಯವಸ್ಥೆಯಲ್ಲಿ ಚಲನೆ ಇಲ್ಲ ಅಂತ ಲೋಹಿಯಾ ಅವರು ಹೇಳಿದ್ದಾರೆ
ಜಾತಿ ಹೋಗ್ತಿಲ್ಲ, ಮತ ಹೋಗ್ತಿಲ್ಲ, ಧರ್ಮ, ವರ್ಗ ಹೋಗ್ತಿಲ್ಲ. ಇವೆಲ್ಲಾ ಇನ್ನೂ ಇದಾವೆ ಅಂತ ನೋಡಲು ಸಾಧ್ಯ. ಯಾವುದೇ ವ್ಯವಸ್ಥೆಯಲ್ಲಿ ಸಾಮಾಜಿಕ ವ್ಯವಸ್ಥೆ ಜಡತ್ವದಿಂದ ಕೂಡಿದ್ರೆ ಅಲ್ಲಿ ಚಲನೆ ಸಾಧ್ಯವಿಲ್ಲ. ಚಲನೆ ಯಾವಾಗ ಸಿಗುತ್ತೆ ಅಂದ್ರೆ ಸಾಮಾಜಿಕ ವ್ಯವಸ್ಥೆ ಸರಿಹೋದಾಗ ಮಾತ್ರ. ಕುವೆಂಪು ಅವರು ಹೇಳಿದಾಗ ಚದರುತ್ತೆ, ಮತ್ತೆ ಸೇರಿಕೊಳ್ಳುತ್ತೆ. ಹಾಗಾಗಿ ಜಾತಿ ವ್ಯವಸ್ಥೆ, ಅರ್ಥ ವ್ಯವಸ್ಥೆ ಹೋಗಿಲ್ಲ. ನಮಗೆ ವೈಚಾರಿಕತೆ ಬೆಳೆದಿಲ್ಲ. ನಮ್ಮ ದೃಷ್ಟಿಕೋನ ವೈಜ್ಞಾನಿಕ ಬೆಳವಣಿಗೆ ಆಗಿಲ್ಲ.
ಇದು ನಮ್ಮಲ್ಲಿರೋ ದೋಷಗಳು. ಮೂಢನಂಬಿಕೆ ಇರುವರೆಗೂ ಕುವೆಂಪು ವೈಚಾರಿಕತೆ ಪ್ರಸ್ತುತ. ಜಾತಿ ವ್ಯವಸ್ಥೆ ಹೋದ್ರೆ ಮಾತ್ರ ವೈಚಾರಿಕತೆ ಸಾಧ್ಯ. ಮೌಢ್ಯತೆ ಹೋಗಬೇಕು. ನಿಮ್ಮಲ್ಲಿ ಎಷ್ಟು ಜನರಿಗೆ ಮೌಡ್ಯತೆ ಇದೆ ಗೊತ್ತಿಲ್ಲ. ಯಾಕಪ್ಪ ನೀನು ಬಡವ, ಮನೆ ಇಲ್ಲ ಅಂದ್ರೆ ನನ್ನ ಹಣೆಬರಹ ಅಂತಾರೆ. ಇಷ್ಟೆಲ್ಲಾ ಆದ್ರೂ ಮಾತಾಡ್ತೀವಿ, ಅನುಕರಿಸ್ತೇವೆ ಎಂದರು.
ರಾಜಕಾರಣಿಗಳಿಗೆ ಮಾತಾಡಲು ನಿರ್ಬಂಧ ಇದೆ. ಸಾಮಾನ್ಯವಾಗಿ ನಾನು ದೇವಸ್ಥಾನಕ್ಕೆ ಹೋಗಲ್ಲ.ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಂಡ್ರೆ ಅದಕ್ಕೂಒಂದು ಕಥೆ ಕಟ್ತಾರೆ. ಹಳ್ಳಿಗಳಿಗೆ ಹೋದಾಗ ಕುಂಕುಮ ಹಾಕಲೇಬೇಕು. ಇಲ್ಲದಿದ್ರೆ ನನಗೆ ಜನ ಓಟ್ ಹಾಕಲ್ಲ. ಇಲ್ಲಿರೋ ಬೇರೆಯವರಿಗೆ ಅದರ ಭಯ ಇಲ್ಲ. ಇದಕ್ಕಾಗಿ ನಾವು ಮೌಢ್ಯದ ಬಗ್ಗೆ ಕಾನೂನು ತಂದೆವು. ಸಂವಿಧಾನ ಬಹಳ ಮುಖ್ಯ.
ಅದಕ್ಕಾಗಿ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡಿದ್ದೇವೆ. ಸಂವಿಧಾನ ಪೀಠಿಕೆ ಕಡ್ಡಾಯವಾಗಿ ಓದಲೇಬೇಕು . ನಾವು ನಮ್ಮ ಹಕ್ಕುಗಳೇನು, ಭಾದ್ಯತೆಗಳೇನು ಅಂತ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸ್ವಲ್ಪ ಸ್ವಲ್ಪ ಬದಲಾವಣೆ ತರಬಹುದು. ಅಂಬೇಡ್ಕರ್ ಅವರು ಹೇಳಿದಂತೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕ ಆಗಬೇಕು ಅಂದ್ರೆ ಸಮಾನತೆ ಇರಬೇಕು ಅಂತ.
ಒಬ್ಬ ವ್ಯಕ್ತಿ ದಲಿತ ಕುಟುಂಬದಲ್ಲಿ ಹುಟ್ಟಿದ ಅಂದ್ರೆ, ಆರ್ಥಿಕವಾಗಿ ಮುಂದೆ ಬಂದ್ರೆ ಮಾತ್ರ ಮುಂದೆ ಬಂದು ಸಮಾನತೆ ಸಾಧ್ಯ.ಹಾಗಾಗಿ ನಮ್ಮ ಸರ್ಕಾರ ಆರ್ಥಿಕ ಮತ್ತು ಸಮಾನತೆ ತರಲು ಮುಂದಾಗಿದ್ದೇವೆ.ವಿಪಕ್ಷಗಳು ಗ್ಯಾರಂಟಿ ಬಗ್ಗೆ ಟೀಕೆ ಮಾಡ್ತಿವೆ ಎಂದು ಹೇಳಿದ್ರು.
ಇವತ್ತು ಕ್ರೀಮಿ ಲೆಯರ್ ಸೊಸೈಟಿ ಇಲ್ಲಿದೆ ಎಲ್ಲಾ ಬಗೆಯ ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ .ಇವತ್ತು ನಾನು ಕುವೆಂಪು ವಿಚಾರ ಕ್ರಾಂತಿ ಪುಸ್ತಕ ಜನಾರ್ಪಣೆ ಮಾಡಿದ್ದೇನೆ ಅನ್ನೋದು ಖುಷಿ ಇದೆ. ಎಲ್ಲರೂ ಕುವೆಂಪು ಅವರ ವಿಚಾರಗಳನ್ನ ನೆನೆಯಬೇಕು. ಸಮಾಜದಲ್ಲಿ ವಿಚಾರಗಳನ್ನ ಅಳವಡಿಸಿಕೊಳ್ಳಬೇಕು. ಬಸವಣ್ಣವರ ಇವನಾರವ ಇವನಾರವ ಅಂತ ಹೇಳಿ ನಮ್ಮವ್ರು ಅಂತ ಹೇಳಿದ್ರು . ಆದ್ರೆ ಈಗ ಇನ್ನೂ ಇವನ್ಯಾರವ ಅಂತಿದ್ದಾರೆ ಜನರು. ಈಗ ಇನ್ನೂ ಜಾತಿ, ಮತ, ಧರ್ಮ, ವರ್ಗ ಹೋಗ್ತಿಲ್ಲ .ಇವೆಲ್ಲವೂ ಇನ್ನೂ ಸಮಾಜದಲ್ಲಿವೆ.ಯಾವುದೇ ವ್ಯವಸ್ಥೆಯಲ್ಲಿ, ಜಡತ್ವ ದಿಂದ ಕೂಡಿದ್ರೆ ಜಗಳ ಬರೋದಕ್ಕೆ ಸದ್ಯ ಇಲ್ಲ. ನಾನು ಬಿ. ಎಸ್ಸಿ ಓದೋವಾಗ ನಮ್ಮಪ್ಪ ದನ ಕರುಗಳಿಗೆ ನೀರು ಕುಡಿಸೋ ಕೆಲಸ ಕೊಟ್ಟಿದ್ರು. ಮನೆ ಹತ್ತಿರದ ಬಾವಿಯಲ್ಲಿ ಕಸ ತುಂಬಿತ್ತು . ನಾನು ಬಿಂದಿಗೆ ಬಾಯಿಗೆ ಹಾಕಿ ಮೇಲೆ ಕೆಳಗೆ ಮಾಡ್ತಿದ್ದೆ . ಅವಾಗ ಕಸ ದೂರ ಹೋಗ್ತಿತ್ತು . ಈಗಲೂ ಈ ರೀತಿಯ ಚರ್ಚೆ ಗಳಿಂದ ಕಸ ದೂರ ಹೋಗುತ್ತೆ, ಮತ್ತೆ ಬರುತ್ತೆ. ಅದಕ್ಕೆ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ, ನಮಗೆ ವೈಚಾರಿಕತೆ ಬೆಳದಿಲ್ಲ .ನಮ್ಮ ದೃಷ್ಟಿಕೋಣದಲ್ಲಿ ವೈಜ್ಞಾನಿಕವಾಗಿ ಬೆಳದಿಲ್ಲ .ಕುವೆಂಪು ಅವರ ವಿಚಾರ ತುಂಬಾ ದೊಡ್ಡದು. ಯಾರಾದ್ರು ಪ್ರಶ್ನಿಸಿದ್ರೆ, ನೀನು ನಿಂದು ನೋಡ್ಕೋ ಅನ್ನೋ ಪ್ರಶ್ನೆ ಬರುತ್ತೆ. ಮೂಢನಂಬಿಕೆಯನ್ನ ನಂಬೋ ಜನ ಸಿಕ್ಕಾಪಟ್ಟೆ ಇದ್ದಾರೆ. ನೀನ್ಯಾಕಪ್ಪ ಹಿಂಗಾಗಿದಿಯ ಅಂದ್ರೆ, ನನ್ನಿಷ್ಟಪ್ಪ ಅಂತಾರೆ. ಇವೆಲ್ಲಾ ಇಷ್ಟೆಲ್ಲ ಆದ್ರೂ ಕೂಡ, ಮಾತಾಡ್ತೀವಿ ಪ್ರತಿಪಾದಿಸ್ತೀವಿ ಎಂದರು.
ಜಾತಿ ವ್ಯವಸ್ಥೆಗೆ ಚಲನೆ ಇಲ್ಲದಿರುವುದರಿಂದ, ಜಾತಿ ಸಮಾಜದಲ್ಲಿ ಪ್ರಗತಿ ವೇಗವಾಗಿಲ್ಲ: ನಮ್ಮ ಜಾತಿಯ ದೃಷ್ಟಿಕೋನ ವೈಜ್ಞಾನಿಕ ದೃಷ್ಟಿಕೋನ ಬೆಳೆಯಲು ಅಡ್ಡಿಯಾಗಿದೆ. ಕುವೆಂಪು ಅವರ ಪ್ರಖರ ವೈಚಾರಿಕತೆ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ. ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಷ್ಟೂ ಮೌಡ್ಯ, ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಾಗುತ್ತಿದೆ. ನಮ್ಮ ಸಂವಿಧಾನದಲ್ಲಿ ಕುವೆಂಪು, ಬಸವಣ್ಣ ಅವರ ಆಶಯಗಳೂ ಅಡಕವಾಗಿವೆ. ಆದರೆ ಸಂವಿಧಾನದ ಮೌಲ್ಯ ಮತ್ತು ಮಹತ್ವ ಅರಿಯುವ ಕೆಲಸ ಹೆಚ್ಚಾಗಬೇಕು . ಈ ಉದ್ದೇಶದಿಂದಲೇ ಸಂವಿಧಾನ ಓದು, ಸಂವಿಧಾನ ಪೀಠಿಕೆ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ .ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕಯಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ.ಈ ಕತೆಯನ್ನು ಕೆಲವು ಜನರೂ ನಂಬುವುದರಿಂದ ನಮಗೆ ಮತಗಳೇ ಬರುವುದಿಲ್ಲ. ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಡ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟರಬೇಕು. ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬನ್ನಿ. ಬಡತನದ ಬೇರುಗಳ ಬುಡ ಸಮೇತ ಕಿತ್ತು ಹಾಕಲು ಬನ್ನಿ ಎಂದು ಕುವೆಂಪು ಎಂದು ಕರೆ ನೀಡಿದ್ದಾರೆ . ಆ ಕರೆಯನ್ನು ಸಮಾಜ ಪಾಲಿಸಿದರೆ ಅಸಮಾನತೆಯ ಸಮಾಜ ಸಮಾನತೆಯ ಕಡೆ ಚಲಿಸುತ್ತದೆ. ಕುವೆಂಪು ಅವರ ಆಶಯ ಮತ್ತು ಮೌಲ್ಯಗಳು ಇಡೀ ವಿಶ್ವಕ್ಕೇ ಅನ್ವಯ ಆಗುವುದರಿಂದ ಜಗತ್ತಿನ ಇತರೆ ಭಾಷೆಗಳಿಗೂ ಈ ಕೃತಿ ಜಾರಿಯಾಗಲಿ. ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ.ನನ್ನ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ಆಗುವ, ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ
ಎಂದರು.











