ಬೆಂಗಳೂರು; ನಾನು ಪ್ರೀತಿಗೆ ತಲೆ ಬಾಗುತ್ತೇನೆ, ಯಾವುದೋ ಗೊಡ್ಡು ಬೆದರಿಕೆಗೆ ಬಗ್ಗಲ್ಲ ಎಂದು ಕುಣಿಗಲ್ ರಂಗನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಯಾವುದೋ ಗೊಡ್ಡು ಬೆದರಿಕೆಗೆ ಬಗ್ಗಲ್ಲ. ನಾನು ಪ್ರೀತಿಗೆ ತಲೆ ಬಾಗುತ್ತೇನೆ. ಕೃಷ್ಣಪ್ಪ , ಸುರೇಶ್ ಗೌಡ ಅವರು ರಾಜಕೀಯ ಮಾಡೋದು ಸರಿಯಲ್ಲ. ಡಿ ಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರು. ಪರಮೇಶ್ವರ್ ಅವರು ಉಸ್ತುವಾರಿ ಸಚಿವರಾಗಿ ನಮ್ಮ ಜಿಲ್ಲೆಯಲ್ಲಿ ಯಾವುದೇ ಅನ್ಯಾಯ ಆಗೋದಕ್ಕೆ ಬಿಡಲ್ಲ. ತುಮಕೂರು ಜಿಲ್ಲೆ ಒಂದು ಕುಟುಂಬ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಇರಬೇಕು ಎಂದಿದ್ದಾರೆ.
ಯಾರೇ ಬಂದು ಎಲ್ಲಿಗೆ ಕರೆದರೂ ಸಹ ನಾನು ಹೋಗುತ್ತೇನೆ. ರಾಜಕೀಯದ ಉದ್ದೇಶ ಬಿಟ್ಟರೆ ಬೇರೆನೂ ಇಲ್ಲ. ಸುರೇಶ್ ಗೌಡರಿಗೂ ಈ ವಿಚಾರ ಗೊತ್ತಿದೆ. ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು. ಒಬ್ಬ ಜಿಲ್ಲೆಯ ಮಗನ್ನಾಗಿ ಮೊದಲು ನಮ್ಮಜಿಲ್ಲೆಯ ಜನರಿಗೆ ಪ್ರಾಮುಖ್ಯತೆ ನೀಡುತ್ತೇನೆ. ನನ್ನ ಮೇಲೆ ಯಾರಿಗೂ ದ್ವೇಷ ಇಲ್ಲ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಆಗುತ್ತಿದೆ. ಮೊದಲಿಗೆ ಪ್ರೀತಿಯಿಂದ ಹೇಳುತ್ತೇನೆ. ಆಗಲಿಲ್ವ ಈ ರೀತಿಯ ಉಗ್ರ ಹೋರಾಟ ಮಾಡುತ್ತೇನೆ.ಮಠಾಧೀಶರ ಮೇಲೆ ಎಫ್ ಐ ಆರ್ ಆಗಿಲ್ಲ. ಏನೇ ಇದ್ದರೂ ಹೋರಾಟ ಮಾಡಬೇಕು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡರೆ ಆಗಲ್ಲ. ರಾಜಣ್ಣ, ಪರಮೇಶ್ವರ್ ಅವರು ಹಿರಿಯರು. ಅವರ ಜೊತೆಯೂ ನಾನು ಮಾತನಾಡುತ್ತೇನೆ. ರೈತರ ಮೇಲಿನ ಎಫ್ ಐ ಆರ್ ವಾಪಸ್ ತೆಗೆದುಕೊಳ್ಳೊದು ಮಾತನಾಡುತ್ತೇನೆ ಎಂದರು.
ನನ್ನ ಮೇಲೆ ಯಾವುದೇ ವೈಯಕ್ತಿಕ ಜಿದ್ದು ಇಲ್ಲ. ಅವರವರ ಅಸ್ತಿತ್ವಕ್ಕೆ ಹೀಗೆ ಮಾಡ್ತಾ ಇದ್ದಾರೆ ಅಷ್ಟೆ. ನಾವು ನಮಗೆ ಬರಬೇಕಾದ ನೀರು ಕೊಳ್ತಾ ಇದ್ದೀನಿ. ಪ್ರೀತಿಯಿಂದ ಕೇಳ್ತಾ ಇದ್ದೀನಿ ನಾನು.ಕೊಡಲಿಲ್ವಾ ಉಗ್ರ ಹೋರಾಟ ಮಾಡಲು ಸಿದ್ದ. ಅದು ಉಪವಾಸ ಸತ್ಯಾಗ್ರಹ ಮಾಡೋದಕ್ಕೂ ರೆಡಿ.ನಾವು ಯಾವುದಕ್ಕೂ ಹೆದರೋದಿಲ್ಲ. ನಾನು ಸ್ವಾಮೀಜಿಗಳನ್ನ ಭೇಟಿ ಮಾಡ್ತೀನಿ. ಮಠಾಧೀಶರ ಮೇಲೆ ಎಫ್ ಐಆರ್ ಆಗಿಲ್ಲ. ಆ ರೈತರು ನನ್ನ ಅಣ್ಣ ತಮ್ಮಂದಿರು. ಅವರಿಗೆ ಸಮಸ್ಯೆ ಮಾಡುವ ಕೆಲಸ ಮಾಡಲ್ಲ. ಪರಮೇಶ್ವರ್ ಹಾಗೂ ರಾಜಣ್ಣ ಅವರು ನಮ್ಮ ಹಿರಿಕರು. ಪರಮೇಶ್ವರ್ ನಮಗೆ ಆಶಿರ್ವಾದ ಮಾಡಿದ್ದಾರೆ.ತೆರೆ ಮೆರೆ ಹಿಂದೆ ವಿರೋಧ ಅನ್ನೋದೆಲ್ಲ ಸುಳ್ಳು ಎಂದು ತಿಳಿಸಿದರು.