ಬೆಂಗಳೂರಿನಲ್ಲಿ ಮಳೆ ಅವಾಂತರದಿಂದ ಹಾನಿಗೊಳಗಾದ ಜಯನಗರದ ಅರಸು ಕಾಲೋನಿಗೆ ಜೆಡಿಎಸ್ ನಾಯಕರು ಭೇಟಿ ನೀಡಿದ್ರು. ಮಳೆಯಿಂದ ಜಲಾವೃತಗೊಂಡಿದ್ದ ಮನೆಗಳಿಗೆ ಜೆಡಿಎಸ್ ನಾಯಕರು ಭೇಟಿ ನೀಡಿದ್ರು. ಇನ್ನು ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಮಳೆ ಹಾನಿ ಪ್ರದೇಶವನ್ನು ಜೆಡಿಎಸ್ ನಾಯಕರು ಪರಿಶೀಲಿಸಿದರು. ಈ ವೇಳೆ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆಗೆ ನಿಖಿಲ್, ಸುರೇಶ್ ಬಾಬು ಮಾತುಕತೆ ನಡೆಸಿದ್ರು.
ಅಲ್ಲದೇ ಸಾಯಿ ಲೇಔಟ್ ಗೆ ಜೆಡಿಎಸ್ ನಾಯಕರು ಭೇಟಿ ನೀಡಿದರು. ಮಳೆಯಿಂದ ಜಲಾವೃತವಾಗಿದ್ದ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಜನರ ಸಮಸ್ಯೆಗಳನ್ನು ಜೆಡಿಎಸ್ ನಾಯಕರು ಆಲಿಸಿದ್ರು. ಈ ವೇಳೆ ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಗೆ ಜನರು ದೂರುಗಳ ನೀಡಿದರು. ಅಧಿಕಾರಿಗಳೊಂದಿಗೆ ಪರಿಹಾರಕ್ಕೆ ಜೆಡಿಎಸ್ ನಾಯಕರುದ ಸಮಾಲೋಚನೆ ನಡೆಸಿದ್ರು.
ರೌಂಡ್ಸ್ ಬಳಿಕ ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಪ್ರತಿವರ್ಷ ಮಳೆ ಬಂದಾಹ ಹಳ್ಳಿ ಪರಿಸ್ಥಿತಿ ಒಂದು ತರಹ ಇರತ್ತೆ. ಆದ್ರೆ ಬೆಂಗಳೂರಿನ ಪರಿಸ್ಥಿತಿ ಬೇರೆಯೇ ಆಗಿದೆ. ಸರ್ಕಾರ ಮನಸ್ಸು ಮಾಡಿದ್ರೆ ಶಾಶ್ವತ ಪರಿಹಾರ ಮಾಡಬಹುದು. ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಹಣ ಇದೆ. ಆದ್ರೆ ಯಾಕೆ ಶಾಶ್ವತ ಪರಿಹಾರ ಮಾಡ್ತಿಲ್ಲ ಅನ್ನೋದು ಬೇಸರ ತರ್ತಿದೆ. ಸಾಯಿ ಲೇಔಟ್, ಸಿಲ್ಕ್ ಬೋರ್ಡ್, ಜಯನಗರ ಸೇರಿ ಏಳೆಂಟು ಕಡೆ ಭೇಟಿ ನೀಡಿದ್ವಿ. ಅಲ್ಲಿರೋ ಜನರ ಪರಿಸ್ಥಿತಿ ನೋಡಿದ್ರೆ ಸಾಕಷ್ಟು ಅಭಿವೃದ್ಧಿ ಆಗಿಲ್ಲ. ಶಾಶ್ವತ ಪರಿಹಾರ ನೀಡೋದಕ್ಕೆ ಅವಕಾಶ ಇದೆ. ಅದ್ರೆ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡ್ತಿಲ್ಲ. ನಾವು ಎರಡು ಮೂರು ದಿನ ಮುಂಚೆಯೇ ಸಿಟಿ ರೌಂಡ್ಸ್ ಮಾಡೋಕೆ ಕೇಳಿದ್ವಿ. ಪೊಲೀಸರು ನಮಗೆ ತಡವಾಗಿ ಪರವಾನಗಿ ಕೊಟ್ಟರು. ಬಿಜೆಪಿಯವರು ಮಾಡಿದ್ರು, ಕಾಂಗ್ರೆಸ್ ನವರು ಮಾಡ್ತಿದ್ದಾರೆ ಅಂತ ಹೇಳಿದ್ರು. ನಾವು ಜನರ ಬಳಿ ಹೋಗಿ ಸಮಸ್ಯೆ ಆಲಿಸಿದ್ದೇವೆ ಎಂದರು.
ಎಸಿ ಬಸ್ಸಿನಲ್ಲಿ, ರೆಡ್ ಕಾರ್ಪೇಟ್ ಹಾಕಿಕೊಂಡು ನಾವು ರೌಂಡ್ಸ್ ಮಾಡಿಲ್ಲ. ನಾವು ಜನರ ಸಮಸ್ಯೆಗಳ ನೇರವಾಗಿ ಕೇಳಿದ್ದೇವೆ. ಜನರ ಸಮಸ್ಯೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡ್ತಿಲ್ಲ. ಸಾಯಿ ಲೇಔಟ್ ಸಮಸ್ಯೆಗೆ ರೆಲ್ವೆ ಟ್ರಾಕ್ ಒಂದು ಕಡೆಯಾದ್ರೆ, ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ಸರ್ಕಾರಕ್ಕೆ ನಾವು ಒತ್ತಾಯ ಮಾಡಿದ್ದೇವೆ. ಜನರ ಸಮಸ್ಯೆ ಆಲಿಸಿ, ಅವರಿಗೆ ಶಾಶ್ವತ ಪರಿಹಾರ ಕೊಡಿ ಎಂದು ಆಗ್ರಹ ಮಾಡ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಮಾತನಾಡಿ ಬೆಂಗಳೂರಿನ ಸಮಸ್ಯೆಗಳನ್ನ ಆಲಿಸಿದ್ದೇವೆ. ಬೆಂಗಳೂರಿನ ಜನರು ಸಂಕಷ್ಟದಲ್ಲಿದ್ದಾರೆ.ನೀವು ವಿಜಯನಗರ ಹೋಗಿ ಸಮರ್ಪಣಾ ಸಂಕಲ್ಪ ಮಾಡಿದ್ರಿ. ಬನ್ನಿ ಬೆಂಗಳೂರಿನ ನೀರಿನಲ್ಲಿ ಸಮಾವೇಶ ಮಾಡಿ. ಬಸ್ ನಲ್ಲಿ ಬಂದು ಸಿಟಿ ರೌಂಡ್ಸ್ ಮಾಡಿದ್ರಿ.ಬಸ್ ಕೆಳಗೆ ಇಳಿಯದೇ ರೌಂಡ್ಸ್ ಮಾಡಿದ್ರಿ, ನಿಮಗೆ ರೆಡ್ ಕಾರ್ಪೆಟ್ ಬೇರೆ. ಗ್ರೇಟರ್ ಬೆಂಗಳೂರು ಅಂತೀರಿ, ಬೆಂಗಳೂರು ಹೇಗಾಗಿದೆ ನೋಡಿ. ಬ್ರ್ಯಾಂಡ್ ಬೆಂಗಳೂರು ಅಂತೀರಿ. ಮಳೆ ಹಾನಿಯಿಂದ ನಾಲ್ಕು ಸಾವನ್ನಪ್ಪಿದ್ದಾರೆ.ಅವರು ಮನೆಗೆ ಹೋಗಿದ್ವಿ, ಅವರು ಬೇರೆ ಬೇರೆ ಕಡೆ ಶಿಫ್ಟ್ ಆಗಿದ್ದಾರೆ.ಹೀಗಾಗಿ ಜೆಡಿಎಸ್ ಪಕ್ಷದಿಂದ ಅವರ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿ ನೀಡ್ತೇವೆ ಎಂದರು.
ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲ ದಾಳಿ ವಿಚಾರದ ಬಗ್ಗೆ ಮಾತನಾಡಿದ ಐಟಿ, ಇಡಿ ಸ್ವತಂತ್ರ ಸಂಸ್ಥೆಗಳು.ಮಾಹಿತಿ ಸಂಗ್ರಹ ಆಗಿದ್ದರಿಂದ ದಾಳಿ ಮಾಡಿರುತ್ತಾರೆ. ಅದರ ಬಗ್ಗೆ ತನಿಖೆ ಆಗಲಿ, ಆದ ಬಳಿಕ ಮಾತಾಡುತ್ತೇನೆ. ರಾಮನಗರ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಹೆಸರು ಬದಲಾವಣೆ ಆಗೋದ್ರಿಂದ ಅಭಿವೃದ್ಧಿ ಆಗಲ್ಲ. ಸಚಿವ ಸಂಪುಟದಲ್ಲಿ ಏನಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಈಗ ಮಾತಾಡಲ್ಲ. ಒಂದು ಪ್ರತ್ಯೇಕ ಸುದ್ದಿಗೋಷ್ಠಿ ಕರೆಯುತ್ತೇನೆ. ಬಿಡದಿಯ ಕೆಂಚಗಾರನಳ್ಳಿಯಲ್ಲಿ ಜಮೀನು ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಆ ಭಾಗದ ನಾಲ್ಕು ಜನರು ಶಾಸಕರು ಅಲ್ಲಿರೋ ಜನರ ಜೊತೆಗೆ ಮಾತಾಡಿದ್ದಾರಾ? . ದೇವೇಗೌಡರ ಬಳಿ ಬಂದು ಜನರು ತಮ್ಮ ಅಳಲು ಹೇಳಿಕೊಳ್ತಿದ್ದಾರೆ. ಹೆಸರು ಬದಲಾವಣೆ ಮಾಡೋದ್ರಿಂದ ಅಭಿವೃದ್ಧಿ ಆಗಲ್ಲ ಎಂದರು.











