ಮನೆ Latest News ತಮ್ಮ ಮನೆ ಮೇಲೆ ಇಡಿ ದಾಳಿ ಮಾಡಿರೋದು ರಾಜಕೀಯ ‌ಷಡ್ಯಂತರ; ವಿನಯ್ ಕುಲಕರ್ಣಿ ಹೇಳಿಕೆ..

ತಮ್ಮ ಮನೆ ಮೇಲೆ ಇಡಿ ದಾಳಿ ಮಾಡಿರೋದು ರಾಜಕೀಯ ‌ಷಡ್ಯಂತರ; ವಿನಯ್ ಕುಲಕರ್ಣಿ ಹೇಳಿಕೆ..

0

ಬೆಂಗಳೂರು; ತಮ್ಮ ಮನೆ ಮೇಲೆ ಇಡಿ ದಾಳಿ ಮಾಡಿರೋದು ರಾಜಕೀಯ ‌ಷಡ್ಯಂತರ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಇದು ರಾಜಕೀಯ ‌ಷಡ್ಯಂತರ. ಇಡಿ ಯವರು ಬರೋದು ಒಂದಕ್ಕೆ ಚೆಕ್ ಮಾಡೋದು ಇನ್ನೊಂದು. ನಾನು ವ್ಯವಸಾಯ ಮಾಡೋನು, ನನ್ನ ಮೇಲೆ ಏನಿರುತ್ತೆ. ಈಗಾಗಲೇ ನನ್ ಮೇಲೆ ಏನೇನ್ ಕೇಸ್ ಹಾಕಬೇಕು. ಹೇಗೆ ಕಿರುಕುಳ ಕೊಡಬಹುದು ಎಲ್ಲ ಕೊಟ್ಟಿದ್ದಾರೆ. ನಾನು ನನ್ನ ಕ್ಷೇತ್ರ ಕ್ಕೆ ಹೋಗೋಕೆ ಆಗಿಲ್ಲ. ಐಶ್ವರ್ಯ ಕೊಲ್ಲಾಪುರ ಕ್ಕೆ ಹೋಗೋಕೆ ಬಂದ ವೇಳೆ ನಮ್ ಮನೆಯಲ್ಲಿ ಬಿಟ್ಟೋಗಿದ್ರು‌. ಅದಕ್ಕೆ ನನಗೆ ಏನ್ ಸಂಬಂಧ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯ ಗೌಡ ನಡುವೆ ಏನೋ ಸಮಸ್ಯೆ ಇತ್ತು‌. ಆ ವಿಚಾರ ಕ್ಕೆ ಕರೆದು ಮಾತಾಡಿಸಿದ್ದೆ ಅಷ್ಟೇ ‌ಎಂದಿದ್ದಾರೆ.

ನನ್ನ ಬರ್ತಡೇ ಗೆ ಐಶ್ವರ್ಯ ಗೌಡ ಬಂದಿದ್ರು..ನಂತರ ಅವರು ಜಾತ್ರೆ ಮಾಡಿದ್ರು ಆಗ ಹೋಗಿದ್ದೆ. ಜನರಿಗೆ ಯಾರೇ ಮೋಸ ಮಾಡಿದ್ರೂ ತಪ್ಪೇ. ಇಡಿಯವರಿಗೆ ಎಷ್ಟೇ ಹುಡುಕಾಡಿದ್ರೂ ಏನು ಸಿಕ್ಕಿಲ್ಲ. ಇಡಿಯವರ ನಡುವಳಿಕೆ ಯಿಂದ ತುಂಬಾ ನೋವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಯಾರೆಲ್ಲ ಇಲ್ಲಿ ಪಾಕ್ ನವರಿದ್ದಾರೆ ವಾಪಸ್ ಕಳಿಸ್ತೇವೆ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

ಬೆಂಗಳೂರು; ಪಾಕಿಸ್ತಾನ ಪ್ರಜೆಗಳನ್ನ ವಾಪಸ್ ಕಳಿಸುವ ಕೇಂದ್ರ ಸರ್ಕಾರದ ನಿರ್ಧಾರ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ರಾಷ್ಟ್ರದ ಭದ್ರತೆ ಬಗ್ಗೆ ರಾಜತಾಂತ್ರಿಕ ನಿರ್ಧಾರ. ಕೇಂದ್ರ ಸರ್ಕಾರ ಕೆಲ ನಿರ್ಧಾರ ತೆಗೆದುಕೊಂಡಿದೆ.ಇನ್ನು‌ ಕಠಿಣವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಕೇಂದ್ರದ ಬಗ್ಗೆ ನಾನು ಮಾತನಾಡಲಾಗಲ್ಲ. ನಮ್ಮಲ್ಲೂ ವೆರಿಫೈ ಮಾಡ್ತಿದ್ದೇವೆ. ಅನಧಿಕೃತವಾಗಿ ಇರುವವರನ್ನ ನೋಡ್ತಿದ್ದೇವೆ. ಸದನದಲ್ಲಿ ಈ ಬಗ್ಗೆ ಪ್ರಶ್ನೆ ಬಂದಿದ್ದವು. ಯಾರೆಲ್ಲ ಇಲ್ಲಿ ಪಾಕ್ ನವರಿದ್ದಾರೆ ವಾಪಸ್ ಕಳಿಸ್ತೇವೆ. ಅನಧಿಕೃತವಾಗಿ ಇರುವವರನ್ನ ಕಳಿಸ್ತೇವೆ. ಸದ್ಯಕ್ಕೆ ಪಾಕ್ ಪ್ರಜೆಗಳನ್ನ ಕಳಿಸ್ತೇವೆ. ನಮ್ಮಲ್ಲಿ ಇಂಟೆಲಿಜೆನ್ಸ್ ಇದೆ. ಒಂದು ವೇಳೆ ಇಲ್ಲಿ ಸ್ಲೀಪರ್ ಸೆಲ್ಸ್ ಇರಬಹುದು. ನಮ್ಮವರಿಗೆ ಗೊತ್ತಿಲ್ಲದಿದ್ರೂ ಅವರಿಗೆ ಗೊತ್ತಿರುತ್ತೆ.ನಮ್ಮವರಿಗೆ ಗೊತ್ತಾದರೆ ತಿಳಿಸ್ತೇವೆ.ಎನ್ ಐಎನವರಿಗೆ ಕಳಿಸ್ತೇವೆ ಎಂದಿದ್ದಾರೆ.

ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ಇನ್ನೂ ಸರಿಯಾಗಿ‌ ಮಾಹಿತಿ ಇಲ್ಲ. ಆಗಿದೆ ಅನ್ನೋದು ನೋಡ್ತಿದ್ದೇನೆ. ರಾಬರ್ಟ್ ವದ್ರಾರನ್ನ ಗುಂಡಿಕ್ಕಿ ಕೊಲ್ಲಬೇಕೆಂಬ ಶಿವಮೊಗ್ಗ ಬಿಜೆಪಿ ಶಾಸಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನಾನೇನು ಮಾತನಾಡಲ್ಲ. ಕಲಬುರಗಿಯಲ್ಲಿ ಪಾಕ್ ಬಾವುಟ ತೆರವು ವಿಚಾರದ ಬಗ್ಗೆ ಮಾತನಾಡಿ ಅದರ ಬಗ್ಗೆ ಗಮನಕ್ಕೆ ಬಂದಿಲ್ಲವೆಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.