ಬೆಂಗಳೂರು; ಸಚಿವ ಸ್ಥಾನ ಸಿಗಲಿಲ್ಲ ಅಂತ ಬೇಜಾರಾಗಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಬೆಳಗ್ಗೆ ಬಂದಿದ್ದು, ಅವರು ಏನು ಕೊಟ್ಟಿದ್ದಾರೆ ಗೊತ್ತಿಲ್ಲ. ಅವರು ಉತ್ತಮ ವ್ಯಕ್ತಿ, ಮುಖ್ಯಮಂತ್ರಿ ಜೊತೆ ಉತ್ತಮ ಆಡಳಿತ ಕೊಟ್ಟವರು. ಸಿಎಲ್ಪಿ ಸಭೆಯಲ್ಲಿ ಮಾತನಾಡಿ ಎಂದಿದ್ದೇನೆ. ಸಿಎಲ್ಪಿ ಕಾರ್ಯದರ್ಶಿ ಆದ್ಮೇಲೆ ಹೇಳಿದ್ದೇನೆ. ಯಾವ ಸಂದೇಶ ಕೊಡಬೇಡಿ ಎಂದು ಖರ್ಗೆ ಹೇಳಿದ್ದಾರೆ. ಅವರು ಸಂಪುಟ ದರ್ಜೆ ಸಚಿವರೇ. ಸಚಿವ ಸ್ಥಾನ ಸಿಗಲಿಲ್ಲ ಅಂತ ಬೇಜಾರಾಗಿಲ್ಲ. ಬಿಜೆಪಿ ವಿರುದ್ಧ ನೇರವಾಗಿ ಮಾತನಾಡೋರು ಅವರು. ಸಿಎಂ ಬಗ್ಗೆ ಹೆಮ್ಮೆ ಪಡುವ ವ್ಯಕ್ತಿ, ಇವತ್ತಿಗೂ ಕಡತಗಳಲ್ಲಿವೆ. ಯಾವ ಆಧಾರದಲ್ಲಿ ಹೇಳಿದ್ದಾರೆ ಗೊತ್ತಿಲ್ಲ, ನಾನೊಮ್ಮ ಅವರನ್ನ ಕೇಳ್ತೇನೆ ಎಂದಿದ್ದಾರೆ.
ಎರಡನೇ ಏರ್ಪೋರ್ಟ್ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿದ ಅವರು ಕನಕಪುರದಲ್ಲಿ ಬೇಡ ಎಂಬ ಕೆಲವು ಶಾಸಕರ ಬೇಸರದ ವ್ಯಕ್ತ ಪಡಿಸಿದ ಬಗ್ಗೆ ಮಾತನಾಡಿ ಇದರ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸ್ತಾರೆ. ಎಲ್ಲಿ ಮಾಡಿದರೆ ಅನುಕೂಲ ನೋಡ್ತಾರೆ. ಉತ್ತರದ ಜನರ ಅಭಿಪ್ರಾಯ ಕೇಳಬೇಕು.ಆ ಕಡೆ ಜನರ ಅಭಿಪ್ರಾಯ ಹೇಳಬೇಕು, ಯಾರಿಗೂ ತೊಂದರೆಯಾಗದಂತೆ ಮಾಡಬೇಕು. ನಮ್ಮ ರಾಜ್ಯ ಬೆಳೆಯುತ್ತಿದೆ, ಸಾಕಷ್ಟು ಇಂಡಸ್ಟ್ರೀಸ್ ಬರ್ತಿವೆ. ಸಿಎಂ, ಸಚಿವರು ಇದರ ನಿರ್ಧಾರ ತೆಗೆದುಕೊಳ್ತಾರೆ.ಎಲ್ಲರಿಗೆ ಅನುಕೂಲ ಆಗಬೇಕು, ಯಾರಿಗೂ ತೊಂದರೆಯಾಗದಂತೆ ನೋಡಬೇಕು ಎಂದಿದ್ದಾರೆ.











