ಬೆಂಗಳೂರು; ಪೌರಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಅವಿದ್ಯಾವಂತರಾಗಬಾರದು ಎಂದು ಪೌರ ಕಾರ್ಮಿಕರ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬೃಹತ್ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ನನ್ನ ಆಹ್ವಾನ ಮಾಡಿ ಯಾವುದೇ ಕಾರಣಕ್ಕೂ ತಪ್ಪಿಸಬಾರದು ಎಂದಿದ್ದರು ನಾರಾಯಣಪ್ಪ. ನನಗೆ ಕಾಲು ನೋವಿದ್ರೂ ಕೂಡ ಮಾತಿಗೆ ಬೆಲೆ ಕೊಟ್ಟು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನೀವು ಪುರಸಭೆ, ನಗರ ಸಭೆ ಎಲ್ಲೇ ಕೆಲಸ ಮಾಡಿದರೂ ಕೂಡ ನಿಮ್ಮ ಸಮಸ್ಯೆ ಬಗೆಹರಿಸುವು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು.
ನಾನು 1994ರಿಂದ 99ವರೆಗೆ ಕರ್ನಾಟಕದ ಸಚಿವ ನಾಗಿದ್ದೆ. ನಾರಾಯಣ ಕಾರ್ಪೋರೇಟರ್ ಆಗಿದ್ದರು. ನಾರಾಯಣ ಅವರನ್ನ ಮೇಯರ್ ಮಾಡಿದ್ದೆವು. ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಆಗಿದ್ದರು. ನಾರಾಯಣ ಅವರಿಗೆ ದಸರಾ ಮಹೋತ್ಸವದಲ್ಲಿ ಕುದುರೆ ಮೆರವಣಿಗೆ ಆಗಬೇಕು ಎಂದಿದ್ದೆ. ಆವಾಗಿಂದ ಕುದುರೆ ಮೆರವಣಿಗೆ ಪ್ರಾರಂಭ ಆಯಿತು. ಮೊದಲನೇ ಮೆರವಣಿಗೆ ಆಗಿದ್ದವರು ನಿಮ್ಮ ಸಮಾಜದವರು,ನಿಮ್ಮ ಸಹಪಾಠಿ. ಸುಮಾರು 40ವರ್ಷದಿಂದ ನಾರಾಯಣ ಅವರು ಪೌರಕಾರ್ಮಿಕರ ಸಂಘಟನೆ ಮಾಡ್ಕೊಂಡು ಬಂದಿದ್ದಾರೆ ಎಂದು ತಿಳಿಸಿದ್ರು.
7 ಸಾವಿರ ಮಿನಿಮಮ್ ವೇಜಸ್ ಅನ್ನ 16 ಸಾವಿರ ಮಾಡಿದ್ದು ಸಿದ್ದರಾಮಯ್ಯ. ಗುತ್ತಿಗೆ ಯಿಂದ ಕಾಯಂ ನೌಕರರನ್ನಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮೇ ೧ ರಂದು ಕಾರ್ಮಿಕರ ದಿನಾಚರಣೆ. ಅಂದೇ ಕಾಯಂ ಮಾಡುವಂತಹ ಪತ್ರ ವಿತರಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ರು. ಸ್ವಚ್ಛ ಮಾಡುವ ಕೆಲಸ ಮಾಡುತ್ತೀರಿ. ಇದ್ರಿಂದ ಆರೋಗ್ಯ, ಪರಿಸರ ಸ್ವಚ್ಛ ಆಗುತ್ತದೆ.ನಮ್ಮ ಸಮಾಜ ಉದ್ದಾರ ಮಾಡಬೇಕಾದ್ರೆ ನೀವೇ. ನಾವು ಮಂದಿರ,ಮಸೀದಿ ಗಳಿಗೆ ಪೂಜೆ ಮಾಡೋಕೆ ಹೋಗ್ತೀವೆ. ಆದ್ರೆ ನೀವೂ ಸ್ವಚ್ಛ ಮಾಡೋದೇ ದೇವರ ಕಾಯಕ ಮಾಡಿಕೊಂಡಿದ್ದೀರಿ. ನೀವೂ ಕೂಡ ಮನುಷ್ಯ, ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದರು. ಸಿಎಸ್ ಆದ್ರೂ ಒಂದೇ ನೀವಾದರೂ ಒಂದೇ, ಇಬ್ಬರಲ್ಲಿ ವ್ಯತ್ಯಾಸ ಇಲ್ಲ.ಕೆಲ ಬೇಡಿಕೆ ಈಡೇರಿಸಿದ್ದೇವೆ, ಇನ್ನೂ ಕೆಲ ಬೇಡಿಕೆ ಈಡೇರಿಸುತ್ತೇವೆ ಎಂದ್ರು.
ಇನ್ನೊಂದು ಬೇಡಿಕೆ ಇಟ್ಟಿದ್ದಾರೆ.ಕಸ ಹೊತ್ತಿಕೊಂಡು ಹೋಗೋ ವಾಹನ ಚಾಲಕರು, ಕ್ಲೀನರ್ಸ್ ಗಳನ್ನೂ ಕೂಡ ಕಾಯಂ ಮಾಡುತ್ತೇವೆ.ಗುತ್ತಿಗೆ ರದ್ದು ಮಾಡಿ ನೇರ ಮಾಡಿಕೊಡುತ್ತೇವೆ. ಐಪಿಡಿ ಸಾಲಪ್ಪನವರ ರಿಪೋರ್ಟ್ ಕೂಡ ಇದೆ. ನಿಮ್ಮ ಸಮಸ್ಯೆ ಗಳನ್ನ ಆದ್ಯತೆ ಮೇರೆಗೆ. ಒಳಚರಂಡಿ ಕಾರ್ಮಿಕರಿಗೂ ಕಾಯಂ ಮಾಡುತ್ತೇವೆ. ನಗದು ರಹಿತ ಹೆಲ್ತ್ ಕಾರ್ಡ್ ಕೊಡುತ್ತೇವೆ. ಸಿಂಧುತ್ವದ ಸಮಸ್ಯೆ ಇದೆ, ಅದನ್ನೂ ಬಗೆಹರಿಸೋ ಕೆಲಸ ಮಾಡುತ್ತೇವೆ. ಇನ್ನೂ ಏನಾದರೂ ಇದ್ಯಾ ಎಂದು ಪ್ರಶ್ನೆ ಮಾಡಿ ಸಿಎಂ ನಗೆಚಟಾಕಿ ಹಾರಿಸಿದ್ದಾರೆ.
ಅನುಕಂಪದ ಆಧಾರದ ಮೇಲೆ ಕೆಲಸ ಕೊಡಬೇಕು. ಅದಕ್ಕೆ ಪರಮ್ನೆಂಟ್ ಮಾಡೋ ಕೆಲಸ ಮಾಡುತ್ತೇವೆ. ಎಲ್ಲರೂ ವಿದ್ಯಾವಂತರು ಆಗ್ಬೇಕು. ನಿಮ್ಮ ಮಕ್ಕಳು IAS, ಡಾಕ್ಟರ್ ಆಗಬೇಕು. ನಿಮ್ಮ ಮಕ್ಕಳನ್ನ ತಪ್ಪದೇ ಓದಿಸಿ.ವಿದ್ಯೆ ಇಲ್ಲದಿದ್ರೆ ಗುಲಾಮಗಿರಿ ಮನಸ್ಥಿತಿ ಬರುತ್ತೆ. ಪೌರಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಅವಿದ್ಯಾವಂತರಾಗಬಾರದು. ನಮ್ಮಪ್ಪ ರಾಜಕಾರಣದಲ್ಲಿ ಇರಲಿಲ್ಲ. ವಿದ್ಯಾವಂತರಲ್ಲ ನಮ್ಮ ಅಪ್ಪ ಅಮ್ಮ. ನಾನು ಲಾ ಓದಿದ್ದರಿಂದ ಸಿಎಂ ಆಗುವ ಹಾಗೆ ಆಯಿತು. ಸ್ವಾಭಿಮಾನದಿಂದ ಕೆಲಸ ಮಾಡಬೇಕು. ವಿದ್ಯೆ ಬಹಳ ಮುಖ್ಯ ,ಮಕ್ಕಳನ್ನ ವಿದ್ಯೆ ಯಿಂದ ತಪ್ಪಿಸುವ ಕೆಲಸ ಮಾಡಬೇಡಿ.ನಿಮ್ಮ ಮಕ್ಕಳು ಇದೆ ಕೆಲಸ ಮಾಡಬೇಕು ಎನ್ನೊತರ ಮಾಡಬೇಡಿ. ಬೇರೆಯವರು ಬಂದು ಕೆಲಸ ಮಾಡಲಿ. ನೀವೇ ಇರಬೇಕೆ ,ಬೇರೆಯವರು ಬಂದು ಮಾಡಲಿ. ಒಂದು ಸಾವಿರ ಪೌರಕಾರ್ಮಿಕರು ವಿದೇಶಕ್ಕೆ ಹೋಗಬೇಕಂದು ಯೋಜನೆ ಮಾಡಿದ್ದೆವು.ಅಲ್ಲಿಯ ಪೌರಕಾರ್ಮಿಕರ ಬಗ್ಗೆ ಇವರಿಗೆ ಗೊತ್ತಾಗಬೇಕು.ಅವರ ಜೀವನ ಹೇಗಿದೆ,ಅವರು ಹೇಗೆ ಮುಂದೆ ಬಂದಿದ್ದಾರೆ ಎನ್ನೋದು ಗೊತ್ತಾಗಬೇಕು ಎಂದರು.











