ಮನೆ Latest News ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿನ್ನಲೆ; ಪಂಚಮಸಾಲಿ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳಿಂದ...

ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿನ್ನಲೆ; ಪಂಚಮಸಾಲಿ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

0

ಬೆಂಗಳೂರು; ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿನ್ನಲೆ ಪಂಚಮಸಾಲಿ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು.

ಬಿಜೆಪಿ ಹೈಕಮಾಂಡ್ ನಿರ್ಧಾರ ಬದಲಿಸಬೇಕು. ಯಡಿಯೂರಪ್ಪ ಕುಟುಂಬ ರಾಜಕಾರಣ ಬಿಡ್ಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಮ್ಮ ಬಲ ಪ್ರದರ್ಶನ ಮಾಡಲಿದ್ದೇವೆ. ನಿರ್ಧಾರ ಬದಲಿಸಿ ಯತ್ನಾಳ್ ಮರಳಿ ಗೂಡಿಗೆ ತರುವ ಕೆಲಸ ಆಗ್ಬೇಕು. ಮೋದಿ, ಅಮಿತ್ ಷಾ ಮಧ್ಯಪ್ರವೇಶಿಸಿ ಯತ್ನಾಳ್ ವಾಪಾಸ್ ಕರೆತರ್ಬೇಕು. ಯತ್ನಾಳ್ ಇಲ್ಲದಿದ್ದರೆ ಬಿಜೆಪಿ ಪಕ್ಷವೇ ಇಲ್ಲ ಎಂದು ಪ್ರತಿಭಟನೆ ಮೂಲಕ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮಾತನಾಡಿ  ಮಲ್ಲನಗೌಡ ಪಾಟೀಲ ಉತ್ತರ ಕರ್ನಾಟಕ ಭಾಗದ ಹಿಂದೂ ಸಮಾಜದ ವತಿಯಿಂದ ಪ್ರತಿಭಟನೆ ಮಾಡ್ತಿದ್ದೇವೆ. ಯತ್ನಾಳ ಅವರನ್ನು ಬಿಜೆಪಿಯಿಂದ ಆರು ವರ್ಷ ಕಾಲ ಉಚ್ಚಾಟನೆ ಮಾಡಿದ್ದಾರೆ. ಅವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಳ್ಳಬೇಕು. ಬಿಜೆಪಿ ಪಕ್ಷ ಒಂದು ಕುಟುಂಬ, ಯಡಿಯೂರಪ್ಪ ವಿಜಯೇಂದ್ರ ಯತ್ನಾಳ ಒಂದೇ ಕುಟುಂಬ ಇದ್ದಂತೆ. ಅಣ್ಣ ತಮ್ಮಂದಿರ ನಡುವಿನ ಜಗಳ ಬೀದಿಗೆ ಬಂದಿದೆ.ಪಕ್ಷದ ವಿಚಾರಕ್ಕೆ ಯತ್ನಾಳ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಯತ್ನಾಳ್ ಅವರನ್ನು ಮತ್ತೆ ವಾಪಸ್ ಬಿಜೆಪಿಗೆ ತರಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖ ನಾಯಕರಾದ ಬಸವರಾಜ್ ದಿಂಡೂರ್, ಬಸನಗೌಡ ಪಾಟೀಲ್ ಬಿರಾದಾರ್ ( ನಾಗರಾಳ ಹುಲಿ) ಮಲ್ಲನಗೌಡ ಪಾಟೀಲ್, ಅಮ್ಮನಪುರ ಮಲ್ಲೇಶ್, ಆನಂದ್ ಪಾಟೀಲ್ ಬಿರಾದಾರ್, ನಾಗರಾಜ್ ಛಬ್ಬಿ, ಆರ್ ಬಿ ಪಾಟೀಲ್ ಹೈಕೋರ್ಟ್ ವಕೀಲರು, ರಾಜ್ಯ ದಲಿತ ಮುಖಂಡರಾದ ಪ್ರತಾಪ್ ಚಿಂಚಲಿ, ಮೋಹನ್ ಗೌಡ,ಪುಟ್ಟರಾಜು ಹಳ್ಳದ ಸೇರಿದಂತೆ ಎಲ್ಲ ಹಿಂದೂಪರ ಸಂಘಟನೆ ಮುಖಂಡರು, ವೀರಶೈವ ಲಿಂಗಾಯತ ಮುಖಂಡರು ಮತ್ತು ಉತ್ತರ ಕರ್ನಾಟಕ ಭಾಗದ ಎಲ್ಲ ಸಮುದಾಯದ ಮುಖಂಡರು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅಭಿಮಾನಿ ಬಳಗದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಯತ್ನಾಳ್ ಪರ ಘೋಷಣೆ ಕೂಗಿ ಅವರ ಪೋಸ್ಟರ್ ಗೆ ಹಾಲಿನ ಅಭಿಷೇಕ್ ಮಾಡಿ ತಮ್ಮ ಅಭಿಮಾನ ಮೆರೆದು ಬಿಜೆಪಿ ಪಕ್ಷದ ಹೈಕಮಾಂಡ್ ಗೆ ಕೂಡಲೇ ಪಕ್ಷಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.