ಬೆಂಗಳೂರು: ದೆಹಲಿ ಪ್ರವಾಸ ಬಹಳ ಚೆನ್ನಾಗಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ದೆಹಲಿ ಪ್ರವಾಸ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ದೆಹಲಿ ಪ್ರವಾಸ ಬಹಳ ಚೆನ್ನಾಗಿತ್ತು. ನಾನು ಸಿಎಂ ಇಬ್ಬರು ಸಿಆರ್ ಪಾಟೀಲ್ ಭೇಟಿ ಮಾಡಿದ್ದೆವು. ನಮ್ಮ ಸಮಸ್ಯೆಗಳ ಬಗ್ಗೆ ಹೇಳಿದ್ದೇವೆ. ಅವರಿಗೂ ಎಲ್ಲಾ ಅರ್ಥವಾಗಿದೆ ಎಂದರು.
ಮೇಕೆದಾಟು, ಅಪ್ಪರ್ ಭದ್ರಾ, ಮಹದಾಯಿ,ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ್ದೇವೆ. ಅವರಿಗೆ ಎಲ್ಲವೂ ಅರ್ಥವಾಗಿದೆ. ಪ್ರಯಾರಿಟಿ ಇದೆ ಅನ್ನೋದು ಅವರಿಗೆ ಗೊತ್ತಾಗಿದೆ. ಎಲ್ಲರನ್ನ ಕರೆಸಿ ಮಾತನಾಡ್ತೇವೆ ಅಂದಿದ್ದಾರೆ. ಅಪ್ಪರ್ ಭದ್ರಾ ೫೩೦೦ ಕೋಟಿ ಬಿಡುಗಡೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಕ್ಯಾಬಿನೆಟ್ ಗೆ ಕಳಿಸಿದ್ದೇವೆ ಅಂದಿದ್ದಾರೆ. ನೋಡೋಣ ಏನು ಮಾಡ್ತಾರೆ. ಎತ್ತಿನಹೊಳೆ ಯೋಜನೆಗೆ ಅಪ್ಲೈ ಮಾಡಿದ್ದೇವೆ.ಅನುಮತಿ ಕೊಡಿಸ್ತಾರಾ ಅನ್ನೋದು ಏನು ಕೊಡಲೇಬೇಕು ಅದಕ್ಕೆ ಅವಕಾಶ ಎಂದಿದ್ದಾರೆ.
ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಹೋರಾಟ ಮಾಡಲಿ.. ಬೆಲೆ ಏರಿಕೆ ಪ್ರಾರಂಭ ಮಾಡಿದ್ದೇ ಅವರು. ಅವರು ಬೆಲೆ ಏರಿಕೆ ತಂದಿದ್ದರಿಂದಲೇ ಗ್ಯಾರೆಂಟಿ ಕೊಟ್ಟಿದ್ದು. ಬೆಲೆ ಏರಿಕೆಯಿಂದಾಗಿ ಜನ ತತ್ತರಿಸ್ತಿದ್ದಾರೆ. ಅದರಿಂದಾಗಿಯೇ ನಾವು ಗ್ಯಾರೆಂಟಿ ಕೊಟ್ಟಿದ್ದು. ರೈತರಿಗೆ ಸಹಾಯ ಮಾಡೋಕೆ ಹಾಲಿನ ದರ ಹೆಚ್ಚಳ ಮಾಡಿದ್ದೇವೆ ಎಂದಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಪೊನ್ನಣ್ಣವರಿಗೂ ಒಂದೇ ಮಂಥರ್ ಅವರಿಗೂ ಒಂದೇ; ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಕಾನೂನು ಎಲ್ಲರಿಗೂ ಒಂದೇ ಪೊನ್ನಣ್ಣವರಿಗೂ ಒಂದೇ ಮಂಥರ್ ಅವರಿಗೂ ಒಂದೇ ಎಂದಿದ್ದಾರೆ.
ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಪೊಲೀಸ್ ಇಲಾಖೆಯವರು ತೆಗೆದುಕೊಳ್ಳುತ್ತಾರೆ. ಇದು ಫೆಬ್ರವರಿಯಲ್ಲಿ ಆಗಿರುವ ಘಟನೆ . ಈಗಾಗಲೇ ಇಲಾಖೆಯಿಂದ ತನಿಖೆ ಮಾಡ್ತಿದ್ದಾರೆ. ಫೆಬ್ರವರಿಯಲ್ಲಿ ಆಗಿರುವ ಘಟನೆ ಬಗ್ಗೆ ಏನು ಮಾಹಿತಿ ಸಿಗುತ್ತೋ ನೋಡೋಣ ಎಂದಿದ್ದಾರೆ.
ಅವರು ಈಗ ಸೂಸೈಡ್ ಮಾಡಿಕೊಂಡಿದ್ದಾರೆ. ಆದರೆ ಘಟನೆಗಳು ಆಗಿರೋದು ಫೆಬ್ರವರಿಯಲ್ಲಿ. ಜೊತೆಗೆ ವಾಟ್ಸಾಪ್ ನಲ್ಲಿ ಸುದೀರ್ಘವಾದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಗತ್ಯ ಬಿದ್ರೆ ಸಿಐಡಿ ಗೆ ವಹಿಸಬಹುದು ಈಗ ಸದ್ಯಕ್ಕೆ ಆ ರೀತಿ ಏನು ಕಾಣ್ತಾ ಇಲ್ಲ. ಯಾರು ದೂರು ಕೊಟ್ಟಿದ್ದಾರೆ ಅದರಲ್ಲಿ ಏನಿದೆ ಅದೆಲ್ಲವನ್ನು ನೋಡ್ತಾರೆ ಎಂದಿದ್ದಾರೆ.











