ಬೆಂಗಳೂರು; ಶಾಸಕ ಶಿವರಾಜ್ ಪಾಟೀಲ್ ಎಸ್ಪಿಗೆ ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಈ ಬಗ್ಗೆ ನಾನು ಎಸ್ ಪಿ ಅವರಿಗೆ ಮಾತನಾಡುತ್ತೇನೆ. ಆ ಭಾಗದ ಐಜಿ ಹಾಗೂ ಡಿಜಿ ಅವರಿಗೂ ಮಾತನಾಡುತ್ತೇನೆ. ಅಂಥ ಘಟನೆ ಏನಾದ್ರು ನಡೆದಿದ್ದರೆ ಯಾಕೆ ನಡೆದಿದೆ ಯಾವ ಕಾರಣಕ್ಕೆ ನಡೆದಿದೆ. ಯಾರು ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ವಿಚಾರಣೆ ಮಾಡ್ತೇನೆ. ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ವೇಳೆ ಮಾತನಾಡಿದ ಅವರು ಸಂಬಂಧಪಟ್ಟವರು ತನಿಖೆ ಮಾಡುತ್ತಾರೆ. ಸಂಬಂಧಪಟ್ಟ ಡಿಸಿಪಿ ತನಿಖೆ ಮಾಡುತ್ತಾರೆ. ತನಿಖೆಯ ಬಳಿಕ ವರದಿಯಲ್ಲಿ ಏನು ಬರುತ್ತೋ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ವಾಟ್ಸಪ್ ಅಲ್ಲಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೆಲ್ಲಾ ಸತ್ಯ ಇರೋದಿಲ್ಲ ಅದನ್ನ ಪರಿಶೀಲಿಸಬೇಕು. ಸತ್ಯ ಇದ್ದರೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾರಣ ಏನಾದರೂ ಇರಲಿ ಅಂತದ್ದೇನಾರೂ ಯಾರದ್ದಾದರೂ ಪ್ರಭಾವ ಇದ್ದರೆ ಪರಿಶೀಲನೆ ಮಾಡ್ತೀವಿ. ತನಿಖೆ ವೇಳೆ ಅದೆಲ್ಲ ಗೊತ್ತಾಗತ್ತೆ. FIR ಆದ ತಕ್ಷಣ ತನಿಖೆ ಶುರುಮಾಡ್ತಾರೆ. ತನಿಖೆ ಅಧಾರರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಎಂ ಎಲ್ ಸಿ ಅಭ್ಯರ್ಥಿಗಳ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಹಾಗೂ ಅಧ್ಯಕ್ಷರಿಗೆ ಬಿಟ್ಟ ವಿಚಾರ.ಅವರು ವರಿಷ್ಠರ ಜೊತೆಗೆ ಮಾತಾಡಿದ್ದಾರಾ ಇಲ್ವಾ ನನಗೆ ಗೊತ್ತಿಲ್ಲ ಎಂದ್ರು. ಇನ್ನು ನಿಗಮ ಮಂಡಳಿ ಆಯ್ಕೆಯಲ್ಲಿ ಪರಮೇಶ್ವರ ಅವರನ್ನು ಪರಿಗಣಿಸಿಲ್ಲ ಎಂಬ ಮಾತಿಗೆ ಯಾರ್ ಹೇಳಿದ್ರು. ನಾನೇ ಅಧ್ಯಕ್ಷ. ನನ್ನನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ನನ್ನ ಆಯ್ಕೆ ಪರಿಗಣಿಸಿಲ್ಲ ಅಂದರೆ ಹೇಗೆ..?. ನಾನು ಸಮಾಧಾನವಾಗಿಯೇ ಇದ್ದೇನೆ. ಅನೇಕ ಸಂದರ್ಭಗಳಲ್ಲಿ ಅಧ್ಯಕ್ಷರೇ ತೀರ್ಮಾನ ಮಾಡ್ತಾರೆ. ಪಕ್ಷಕ್ಕಾಗಿ ಅಧ್ಯಕ್ಷರು ಇರ್ತಾರೆ ಅಂದಮೇಲೆ ಅವರೇ ತೀರ್ಮಾನ ಮಾಡ್ತಾರೆ. ಕೆಲವು ಕಠಿಣ ಸಂದರ್ಭದಲ್ಲಿ ತೀರ್ಮಾನ ಮಾಡುವಾಗ ಬೇರೆಯವರ ಅಭಿಪ್ರಾಯ ಕೇಳ್ತಾರೆ. ನಾಲ್ಕು ಜನರ ಸರ್ಕಾರಿ ನಾಮಿನೇಷನ್ ಆಗಿದೆ. ಹೀಗಾಗಿ ಸುಲಭವಾಗಿರುವ ಆಯ್ಕೆ ಸಿಎಂ ಹಾಗೂ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.
ಸ್ವಲ್ಪ ದಿನಗಳ ಹಿಂದೆ ನೋವಲ್ಲಿ ಇದ್ರಿ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ವಲ್ಲ ನಾನು ಯಾವತ್ತೂ ನೋವಲ್ಲಿ ಇಲ್ಲ. ನಂದು ಯಾವತ್ತೂ ಒಂದೇ ಗ್ರಾಫ್. ಕೆಲವೊಮ್ಮೆ ಸ್ವಲ್ಪ ಮೇಲೆ ಕೆಳಗಡೆ ಗ್ರಾಫ್ ಆಗುತ್ತೆ ಎಂದಿದ್ದಾರೆ.











