ಮನೆ Latest News ರಾಜ್ಯದ ಸಾಲು ಸಾಲು ಬೆಲೆ ಏರಿಕೆ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ

ರಾಜ್ಯದ ಸಾಲು ಸಾಲು ಬೆಲೆ ಏರಿಕೆ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ

0

ಬೆಂಗಳೂರು: ರಾಜ್ಯದ ಸಾಲು ಸಾಲು ಬೆಲೆ ಏರಿಕೆ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ  ಹೊರ ಹಾಕಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ವಿದ್ಯತ್ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿ ಇದು ಅಳಿಯ ಅಲ್ಲ ಮಗಳ ಗಂಡ .ನಾವು ಏರಿಸ್ತಾ ಇಲ್ಲ ಕೋರ್ಟ್ ಅದೇಶ ಮಾಡಿದೆ ಅಂತಾರೆ. ಯಾವ ಸ್ಥಿತಿ ಬಂದಿದೆ ಅಂದರೆ ಜನ ಪಿಂಚಿಣಿ ಕೊಡಬೇಕಾದ ಸ್ಥಿತಿಗೆ ಬಂದಿದೆ. ನಿಮ್ ಯೋಗ್ಯತೇ ಬೆಂಕಿ ಇಟ್ರು. ಮಾರೆತೋ ಹಾತಿಕೋ ಮಾರನಾ . ಟೆತೂ ಬಂಢಾರ್ ಕೊ ಲೂಟ್ ನಾ .ಕಾಂಗ್ರೆಸ್ ನವರದ್ದು ಎಲ್ಲಾ ದೊಡ್ ದೊಡ್ ಲೂಟಿಯೇ ಎಂದಿದ್ದಾರೆ.

ದಿನ ನಿತ್ಯದ ವಸ್ತು ಪೆಟ್ರೋಲ್ ಮತ್ತು ಕರೆಂಟ್ ಮೇಲೆ ಅವಲಂಬಿತವಾಗಿದೆ.ದಿನ ನಿತ್ಯದ ವಸ್ತುಗಳ ದರ ಅಟೋಮೆಟಿಕಲಿ‌ ಜಾಸ್ತಿ ಆಗ್ತಾ ಇದೆ. ಸರ್ಕಾರದ 20 ತಿಂಗಳಲ್ಲಿ 20 ಆಟ ಆಡಿದಾರೆ ಎಂದ್ರು. ಜನ ಬೀದಿಪಾಲಗುವಂತ ಪರಿಸ್ಥಿತಿ  ನೋಡ್ತಾ ಇದೀವಿ. ಸಿದ್ದರಾಮಯ್ಯ ಅವರು ಗಾಲಿ ಕುರ್ಚಿಲಿ ಇದಾರೆ ಅಂದುಕೊಂಡಿದ್ವಿ. ಆದರೆ ಸರ್ಕಾರವೇ ಗಾಲಿ ಕುರ್ಚಿಲಿ ತಂದಿದ್ದಾರೆ. ಎರಡು ವರ್ಷ ದ ಸಾಧನೆ ಮಾಡೋಕೆ ಹೋಗ್ತಾ ಇದಾರೆ. ಯಾವ ಮುಖ ಇಟ್ಕೊಂಡು ಮಾಡ್ತಾರೆ. ಬಿಜೆಪಿ 40% ತಡೆ ಹಿಡಿದು ಹಣ ಕೊಡ್ತಿವಿ ಅಂತಿದ್ರು.ಈಗ ಅದು ಎಲ್ಲಿ ಹೊಯ್ತು ಈಗ. ಗುತ್ತಿಗೆದಾರರು ಈಗ 60% ಕಮಿಷನ್ ಅಂತಾ ಈ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ. ಜನಕ್ಕೆ ಬಾಂಡಲಿಯಿಂದ ಬೆಂಕಿಗೆ ಬಿದ್ದಂತೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಲೆ ಏರಿಕೆ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ನಮ್ಮ ನಾಯಕರ ಜತೆ ಮಾತನಾಡಿದ್ದೀವಿ. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ.ಯುಗಾದಿ ಬಳಿಕ ರಾಜ್ಯಾದ್ಯಂತ ಹೋರಾಟ ಮಾಡ್ತಿವಿ.ಹಾಲಿನ ದರ ಏರಿಕೆಯಿಂದ ರೈತರಿಗೆ ಲಾಭ ವಿಚಾರದ ಬಗ್ಗೆ ಮಾತನಾಡಿ ರೈತರಿಗೆ 600 ಕೋಟಿ ಇನ್ನೂ ಬಾಕಿ ಇಟ್ಕೊಂಡಿದಾರೆ. ಹಣ ಇನ್ನೂ ಕೊಟ್ಟಿಲ್ಲ. ರೈತರಿಗೆ ಕೊಡ್ತಿವಿ ಎಂಬುದು ಕಾಂಗ್ರೆಸ್ ವಾದ ಅದು ಅಷ್ಟೇ. ನಾವು ಬಿಟ್ಟು ಹೋಗಿದ್ದನ್ನ ರೈತರಿಗೆ ಕೊಟ್ಟಿದ್ದಿವಿ ಅಂತಾ ಕಾಂಗ್ರೆಸ್ ಹೇಳ್ತಾರೆ.ಅವರು ಬಿಟ್ಟಾಗ ನಾವು ಎಷ್ಟು ಕೊಟ್ಟಿದ್ದೇವೆ ಅನ್ನೋದು ಹೇಳಲಿ ಅವರು ಎಂದಿದ್ದಾರೆ.

ನಾವು ಸ್ಟಾಂಪ್ ಡ್ಯೂಟಿ ಕಡಿಮೆ ಮಾಡಿದ್ವಿ.ನೀರಿನ ದರ ಏರಿಸಿಲ್ಲ. ಬಸ್ ದರ ಏರಿಸಿರಲಿಲ್ಲ.ಈಗ ಕಾಂಗ್ರೆಸ್ ಮಾತನಾಡ್ತಾರೆ. ಏನ್ ಪುಣ್ಯಾತ್ಮರು ಇವರು.ದೇವಲೋಕದಿಂದ ಬಂದು ಬಿಟ್ಟಿದಾರೆನೋ ಅವರು ಬಿಟ್ಟು ಹೋದಾಗ ಒಂದು ಪೈಸೆ ಬಾಕಿ ಇಟ್ಟಿರಲಿಲ್ವಾ. ಏನು ಬಾಕಿನೇ ಇಟ್ಟಿಲ್ಲ ಪಾಪಾ.. 75 ವರ್ಷ ಆಡಳಿತದಲ್ಲಿ ಕಾಂಗ್ರೆಸ್ ಹೆಚ್ಚು ಆವಧಿ ಆಡಳಿತ ಮಾಡಿದ್ದಾರೆ. ಸಿದ್ದರಾಮಯ್ಯ ಸಾಲದಲ್ಲೂ ಚಾಂಪಿಯನ್.ನಾವು ಬಿಟ್ಟು ಹೋದಾಗ ಆಬ್ ಗೋಯಿಂಗ್ ವರ್ಕ್ಸ್ ಸೇರಿಸಿದ್ದಾರೆ. ಅವರ ಅವಧಿಯಲ್ಲಿ ಅದ್ಯಾವುದು ತೋರಿಸೋದೇ ಇಲ್ಲ .ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಒದ್ದು ಕಿತ್ತುಕೊಳ್ಳೋವರೆಗೂ ಇರ್ತಾರೆ .ಯಾವಾಗ ಡಿಕೆ ಒದ್ದು ಕಿತ್ಕೋತಾರೋ ಗೊತ್ತಿಲ್ಲ ಎಂದ್ರು.

ಎಸ್ ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ವಿರುದ್ದ ಉಚ್ಚಾಟನೆ ವಿಚಾರದ ಬಗ್ಗೆ ಮಾತನಾಡಿ ಇದೆಲ್ಲವನ್ನು ಹೈಕಮಾಂಡ್ ನೋಡುತ್ತೆ .ಅವರು ಎಲ್ಲಾ ಕ್ರಮಗಳನ್ನ ಅವರಿ ನಿರ್ಧರಿಸುತ್ತಾರೆ.ನಾವೆಲ್ಲ ಒಟ್ಟಾಗಿ ಹೋದರೆ ಕಾಂಗ್ರೆಸ್ ಬಗ್ಗು ಬಡಿಯಲು ಸಹಾಯ ಆಗುತ್ತೆ ಅಂತಾ ಹೇಳಿದ್ವಿ.ಯತ್ನಾಳ್ ಸೇರಿದಂತೆ ಎಲ್ಲರು ಏನು ಉತ್ತರ ಕೊಡ್ತಾರೋ ಗೊತ್ತಿಲ್ಲ.ನೋಡೋಣ ಮುಂದೆ ಏನಾಗುತ್ತೆ ಅಂತಾ. ಯತ್ನಾಳ್ ಉಚ್ಚಾಟನೆಯಂತಹ ಬೆಳವಣಿಗೆ ಪಕ್ಷ ಕ್ಕೆ ಖಂಡಿತ ಮುಜುಗರ.ಯತ್ನಾಳ್ ಉಚ್ಚಾಟನೆ ವಿರುದ್ದ ಪಂಚಮಸಾಲಿ ಸ್ವಾಮಿಜಿ ಎಚ್ಚರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸ್ವಾಮೀಜಿ ಯಾವ ದೃಷ್ಟಿಯಿಂದ ನೋಡ್ತಾರೋ ಗೊತ್ತಿಲ್ಲ. ಅದರೆ ಅವರದ್ದು ಮಠ ನಮ್ಮದು ಪಾರ್ಟಿ.ಹೀಗಾಗಿ ಜಯ ಮೃತ್ಯುಂಜಯ ಸ್ವಾಮಿಜಿ ತಮ್ಮ ಹೋರಾಟದ ನಿಲುವನ್ನ. ಮರು ಪರಿಶೀಲಿಸಲಿ ಅಂತಾ ಮನವಿ ಮಾಡ್ತಿನಿ ಎಂದರು.