ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದ ಅವರ ನಿವಾಸದ ಬಳಿ ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ಅದು ನನಗೆ ಗೊತ್ತಿಲ್ಲ.ಒಳಗಡೆ ಏನು ಮಾತನಾಡಿದ್ದಾರೊ ಗೊತ್ತಿಲ್ಲ.ಸಿಎಂ ಆರೋಗ್ಯ ವಿಚಾರಿಸಲು ಹೋಗಿದ್ದಾರೆ.ಮಂಡಿ ಕಾಲು ನೋವಿನ ಹಿನ್ನೆಲೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ ಎಂದಿದ್ದಾರೆ.
ಹನಿಟ್ರ್ಯಾಪ್ ಬೋಗಸ್ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಗೊತ್ತಿಲ್ಲ.ಏನು ಹೇಳಿದ್ದಾರೊ ಗೊತ್ತಿಲ್ಲ. ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಸುಮೊಟೊ ಕೇಸ್ ದಾಖಲಿಗೆ ಬಿಜೆಪಿ ಆಗ್ರಹ ವಿಚಾರಕ್ಕೆ ರಿಯಾಕ್ಟ್ ಮಾಡಿದ ಅವರು FIR ಇಲ್ಲದೆ ಸುಮೊಟೊ ಕೇಸ್ ದಾಖಲಿಸಲು ಸಾಧ್ಯವಿಲ್ಲ. ತಮ್ಮ ಬಳಿ ಸಚಿವ ರಾಜಣ್ಣ ಏನಾದ್ರೂ ಹೇಳಿಕೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ ರಾಜಣ್ಣ ಅವರಿಗೆ ನಾನು ಒಬ್ಬನೇ ಇಲ್ಲ. ಅವರಿಗೆ ತುಂಬಾ ಜನ ಸ್ನೇಹಿತರಿದ್ದಾರೆ ಎಂದಿದ್ದಾರೆ.
ಒಳ ಮೀಸಲಾತಿ ಸಂಬಂಧ ಸಿಎಂ ನೇತೃತ್ವದಲ್ಲಿ ಇಂದು ಸಭೆ ಬಗ್ಗೆ ಪ್ರತಿಕ್ರಿಯಿಸಿ ಸಿಎಂ ಸಭೆ ಕರೆದಿದ್ದಾರೆ, ಹೋಗ್ತಾ ಇದ್ದೀನಿ. ಮೀಟಿಂಗ್ ಕರೆದಿದ್ದಾರೆ, ಹೋಗ್ತಾ ಇದ್ದೀನಿ ಎಂದ್ರು. ಸಂವಿಧಾನ ಬದಲಾವಣೆ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಇಲಾಖೆ, ರಾಜಕೀಯ ವಿಚಾರ ಕೇಳಿ. ಎಲ್ಲಿ ಬಂದಿದೆ? ನಾನು ಗಮನಿಸಿಲ್ಲ. ಶಾಸಕರು, ಸಚಿವರ ಫೋನ್ ಕದ್ದಾಲಿಕೆ ಆರೋಪಕ್ಕೆ ತಿರುಗೇಟು ಕೊಟ್ಟ ಅವರು ಗೊತ್ತಿಲ್ಲ ನನಗೆ, ಯಾರೂ ದೂರು ಕೊಟ್ಟಿಲ್ಲ. ದೂರು ಬಂದರೆ ಅದಕ್ಕೆ ಏನು ಕ್ರಮ ಬೇಕೋ ಅದು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ನನಗೆ ಮಂಪರು ಪರೀಕ್ಷೆ ಅಗತ್ಯವಿಲ್ಲ : ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಹೇಳಿಕೆ
ಬೆಂಗಳೂರು; ಶಾಸಕ ಮುನಿರತ್ನರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂಬ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು ನನಗೆ ಮಂಪರು ಪರೀಕ್ಷೆ ಅಗತ್ಯವಿಲ್ಲ. ರಾಜಣ್ಣನವರು ಎಲ್ಲಾ ವಾಹಿನಿಯ ಒಂದು ಕಡೆ ಕರೆದು ನನ್ನ ಜೊತೆ ಕುಳಿತುಕೊಂಡರೆ ಮುಂಪರು ಪರೀಕ್ಷೆಗೆ ಇಲ್ಲದೇ ಎಲ್ಲವನ್ನ ಹೇಳಲು ಸಿದ್ಧವಾಗಿದ್ದೇನೆ.ರಾಜಣ್ಣನವರು ಬಹಿರಂಗವಾಗಿ 48 ಜನರ ಮಾಹಿತಿಯನ್ನು ಕೊಡುತ್ತೇನೆ ಎಂದು ಹೇಳಿದಾಗ ಅದು ಒಂದು ಸತ್ಯವಾದ ಮಾತಾಗಿರುತ್ತದೆ .ನನಗೂ ಮಂಪರು ಪರೀಕ್ಷೆ ಬೇಡ ಅವರಿಗೂ ಒಬ್ಬರು ಪರೀಕ್ಷೆ ಬೇಡ ಎಂದಿದ್ದಾರೆ.
ಅಶೋಕ್ ಪಟ್ಟಣ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಈ ವೇದಿಕೆಗೆ ಕರೆದರೆ ಮತ್ತಷ್ಟು ಸತ್ಯ ಹೊರಬರುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.











