ಮನೆ Latest News 18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸು ಪಡೆಯಬೇಕು; ವಿಧಾನಸಭೆ ವಿಪಕ್ಷ ನಾಯಕ ಆರ್ ...

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸು ಪಡೆಯಬೇಕು; ವಿಧಾನಸಭೆ ವಿಪಕ್ಷ ನಾಯಕ ಆರ್ ಆಶೋಕ್ ಆಗ್ರಹ

0

ಬೆಂಗಳೂರು; 18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸು ಪಡೆಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್  ಆಶೋಕ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ನಮ್ಮ ಶಾಸಕರನ್ನ ಸಸ್ಪೆಂಡ್ ಮಾಡಿದ್ದಾರೆ. ಸಸ್ಪೆಂಡ್ ಆದೇಶ ವಾಪಸು ಪಡೆಯಬೇಕು. ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಹಬ್ಬ ಮುಗಿಯಲಿ ಮಾತನಾಡೋಣ ಅಂದಿದ್ದಾರೆ. ನಮ್ಮ ಶಾಸಕರ ಮೇಲೆ ನಮಗೆ ಗೌರವವಿದೆ ಎಂದಿದ್ದಾರೆ.

ಇನ್ನು ಎಂದಿನಂತೆ ರಾಜ್ಯಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು ಇದೊಂದು ಕುಲಗೆಟ್ಟ ಸರ್ಕಾರ.ನೀವು ಗ್ಯಾರೆಂಟಿಗಳನ್ನ ಕೊಡಕ್ಕೆ ನಮ್ಮ ಆಕ್ಷೇಪ ಇಲ್ಲ. ನಿಮ್ಮ ಛೇಲಾಗಳಿಗೆ ಕೆಲಸ ಕೊಟ್ಟಿದ್ದೀರಿ. 150 ಕೋಟಿ ಹಣ ಖರ್ಚು ಆಗ್ತಿದೆ.ಇದು ಯಾರ ದುಡ್ಡು.. ಇದಕ್ಕೆ ಏಜೆಂಟ್ ಯಾಕೆ ಬೇಕು. ಡಿಬಿಟಿ ಮೂಲಕ ಹಣ ಹೋಗ್ತಿದೆ. ಈ ಏಜೆಂಟ್ ಗಳ ಕೆಲಸವೇನು..? ಎಂದು ಪ್ರಶ್ನಿಸಿದ್ದಾರೆ. ಕೆಪಿಸಿಸಿಯಲ್ಲಿ ಆಗ್ತಿರುವ ಭ್ರಷ್ಟಾಚಾರವನ್ನ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.ವಿಧಾನ ಸಭೆಯಲ್ಲಿಯೇ ಒಪ್ಪಿಕೊಂಡಿದ್ದಾರೆ

ಕೆಪಿಸಿಸಿ ಸದಸ್ಯರ ಸಂಖ್ಯೆ ಕಡಿಮೆ ಆಗಿದ್ದು ನಮ್ಮ ಹೋರಾಟದಿಂದ.ಈ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ನಿಲುವು ಬದಲಿಸುವಲ್ಲಿ ನಮ್ಮ ಪಾತ್ರ ಹೆಚ್ಚಿದೆ.ಈ ಹೋರಾಟದಲ್ಲಿ ನಾವು ಸಕ್ಸಸ್ ಆಗಿದ್ದೇವೆ ಎಂದ ಅವರು ಫೋನ್ ಕದ್ದಾಲಿಕೆ ಮಾಡ್ತಿರುವುದು ನೂರಕ್ಕೆ ನೂರರಷ್ಟು ನಿಜ. ಇದರಲ್ಲಿ ಯಾವುದೇ ಅನುಮಾನ ಬೇಡ.ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಆಗ್ತಿದೆ.ನನ್ನ ಮತ್ತು ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗ್ತಿದೆ.ರಾಜೇಂದ್ರ ಹಾಗೂ ರಾಜಣ್ಣ ಅವರ ಫೋನ್ ಕದ್ದಾಲಿಕೆ ಆಗಿದೆ.ಹಲವು ಶಾಸಕರ ಫೋನ್ ಕದ್ದಾಲಿಕೆ ಆಗಿದೆ. ಆಡಳಿತ ಪಕ್ಷದವರದ್ದು ಆಗಿದೆ.ವಿಪಕ್ಷದವರದ್ದು ಆಗಿದೆ.. ರಾಜಣ್ಣ ರಾಜೇಂದ್ರ ಟ್ರ್ಯಾಕ್‌ ಮಾಡೋಕೆ ಕದ್ದಾಲಿಕೆ ಮಾಡಿಸಿರುತ್ತಾರೆ..ನಾನು, ಕುಮಾರಸ್ವಾಮಿ ಅವರು ಮೊದಲಿಂದಲೂ ಆರೋಪ ಮಾಡ್ತಿದ್ವಿ .ಎರಡು ವರ್ಷಗಳಿಂದ ನಮ್ಮ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟ ಒಬ್ಬರಿಗೆ ನಾವು ಟಿಕೆಟ್ ಕೊಡಲಿಲ್ಲ ; ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು; ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟ ಒಬ್ಬರಿಗೆ ನಾವು ಟಿಕೆಟ್ ಕೊಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಅವಶ್ಯಕತೆ ಬಿದ್ರೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ.ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟ ಒಬ್ಬರಿಗೆ ನಾವು ಟಿಕೆಟ್ ಕೊಡಲಿಲ್ಲ ಎಂದಿದ್ದಾರೆ.

ಆ ರೀತಿ ನಾವು ಕ್ರಮ ಕೈಗೊಂಡ್ವಿ.ಅನಂತ್ ಕುಮಾರ್ ಹೆಗಡೆ ಗೆ ಟಿಕೆಟ್ ಮಿಸ್ ಆಗೋಕೆ ಸಂವಿಧಾನ ಬದಲಾವಣೆ ಹೇಳಿಕೆಯೇ ಕಾರಣ ಅಂತ ಪರೋಕ್ಷವಾಗಿ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.ಇವರಿಗೆ ಧೈರ್ಯ ಇದ್ರೆ ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.

ಇನ್ನು ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿರುವ ಡಿಕೆಶಿ ನಾನು ಆ ರೀತಿಯಾಗಿ ಹೇಳಿಕೆ ಕೊಟ್ಟಿಲ್ಲ..ನನ್ನ ಹೇಳಿಕೆ ತೆಗೆದು ನೋಡಲಿ. ಸದನದಲ್ಲಿ ಬಿಲ್ ಮಂಡನೆ ಆದಾಗ ನಾನು ಇರಲಿಲ್ಲ. ನಾನು ಸದನಕ್ಕೆ ಬಂದು ೩೬ ವರ್ಷ ಆಯ್ತು. ನನಗೂ ಗೊತ್ತಿದೆ. ನಾನು conclave ನಲ್ಲಿ ಆ ತರಹ ಹೇಳಿಕೆ‌ ಕೊಟ್ಟಿಲ್ಲ.ಈ ವಿಚಾರದಲ್ಲಿ ನಮ್ಮ ಹೈಕಮಾಂಡ್ ಮಾಹಿತಿ ಪಡೆಯುವುದು ಸಹಜ.ಅವರು ಕೇಳಿದ್ದಾರೆ. ನಾನು‌ ಮಾಹಿತಿ ಕೊಟ್ಟಿದ್ದೇನೆ ಎಂದು ಡಿಕೆಶಿ  ಸ್ಪಷ್ಟನೆ ನೀಡಿದ್ದಾರೆ.

ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡಿದ ಅವರು ಮೊದಲು ಪೋನ್ ಟ್ಯಾಪಿಂಗ್ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲಿ.. ಎಂದಿದ್ದಾರೆ.