ಮನೆ Latest News ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ...

ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

0

ಬೆಂಗಳೂರು; ವಿರೋಧ ಪಕ್ಷದ ಕಣ್ಣು ತಪ್ಪಿಸಿ ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ನಿನ್ನೆ ಸದನದಲ್ಲಿ ಕದ್ದು‌ಮುಚ್ಚಿ ಮುಸ್ಲಿಂ ಮೀಸಲಾತಿ ಬಿಲ್‌ ಮಂಡನೆ‌ ಮಾಡಿದ್ದಾರೆ. ವಿರೋಧ ಪಕ್ಷದ ಕಣ್ಣು ತಪ್ಪಿಸಿ ಬಿಲ್ ತಂದಿದ್ದಾರೆ. ಬಿಜೆಪಿ ನಿಲುವು ಸ್ಪಷ್ಟವಾಗಿದೆ. ತುಘಲಕ್ ದರ್ಬಾರ್ ಅನ್ನ ನಾವು ವಿರೋಧಿಸುತ್ತೇವೆ ಎಂದಿದ್ದಾರೆ.

ಸದನದ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ. ಉಚ್ಚ ನ್ಯಾಯಾಲಯ ದಲ್ಲೂ ಪ್ರಶ್ನೆ ಮಾಡುತ್ತೇವೆ. ಕಾಂಗ್ರೆಸ್ ನವರಿಗೆ ನಾವು ಕೇಳುತ್ತೇವೆ. ಅಲ್ಪಸಂಖ್ಯಾತ ರ ಬಗ್ಗೆ ಕಳಕಳಿ ಯಾಗಿದ್ರೆ ಯಾಕೆ ಅವರಿಗೆ ಶಿಕ್ಷಣ ಕ್ಕೆ ಒತ್ತು‌ ಕೊಟ್ಟಿಲ್ಲ. ಅವರಿಗೆ ಸಮಾಜದ ಮುಂಚೂಣಿ ಗೆ ತರಬೇಕಿತ್ತು. ಅವರಿಗೆ ಮುಂದೆ ತರಬೇಕಿತ್ತು. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ತ್ರಿಬಲ್‌ ತಲಾಕ್ ತೆಗೆದುಹಾಕಿದೆ. ಜನಧನ ಅಕೌಂಟ್ ಓಪನ್ ಮಾಡಿದ್ದೇವೆ, ಕೇವಲ ಹಿಂದೂಗಳಿಗೆ ಕೊಟ್ಟಿಲ್ಲ. ಕಾಂಗ್ರೆಸ್ ರೀತಿ ಮುಸ್ಲಿಂ ಅವರಿಗೆ ವೋಟ್ ಬ್ಯಾಂಕ್ ಗೆ ಸೀಮಿತ ಮಾಡಿದ್ದಾರೆ. ನಾನು ಸಿಎಂ ಅವರಿಗೆ ಎಚ್ಚರಿಕೆ ನೀಡುತ್ತೇವೆ. ತುಘಲಕ್ ದರ್ಬಾರ್ ಗೆ ಇತಿಮಿತಿಗಳಿಗೆ  ೪% ಮೀಸಲಾತಿ ಕೋಡೋಕೆ ಹೊರಟಿದ್ದೀರಿ ಅದನ್ನು ವಿರೋಧ ಮಾಡುತ್ತೇವೆ.ನಾವು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಸಚಿವರಿಗೆ ಹನಿಟ್ರ್ಯಾಪ್ ಯತ್ನ ವಿಚಾರದ ಬಗ್ಗೆ ಮಾತನಾಡಿದ ಅವರು  ಯಾರು ಮಾಡೋಕೆ ಹೋಗಿದ್ದಾರೆ, ಅವರನ್ನ ಕೇಳಿ ಎಂದಷ್ಟೇ ಹೇಳಿದೆ ಎಂದ್ರು.

ಕುಮಾರಸ್ವಾಮಿ ಮೇಲೆ ಜಮೀನು ಒತ್ತುವರಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ; ಶಾಸಕ ಎ ಮಂಜು ಹೇಳಿಕೆ

 

ಬೆಂಗಳೂರು: ಕುಮಾರಸ್ವಾಮಿ ಮೇಲೆ ಜಮೀನು ಒತ್ತುವರಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.

ಇದು ‌ಒಳ್ಳೆಯದು ಅಲ್ಲ. ಸೆಲೆಬ್ರಿಟಿ ಗಳ ಜಾಗ ಒತ್ತುವರಿ‌ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಒತ್ತುವರಿ ಮಾಡಬೇಕಿದ್ರೆ ಸಿಎಂ ಆಗಿದ್ದಾಗಲೇ‌ ಮಾಡಿಕೊಳ್ಳಬೇಕಿತ್ತು. ಆದ್ರೆ ಅವರು ಹಾಗೇ‌ ಮಾಡಲಿಲ್ಲ. ಇವತ್ತು ಈ ಸರ್ಕಾರ ದ್ವೇಷದ ರಾಜಕಾರಣ ಬಿಡಬೇಕು. ಆದ್ರೆ ಬೇರೆಯಾದರೂ ಮಾಡಿದ್ರೆ ಕ್ರಮ‌ ತೆಗೆದುಕೊಳ್ಳಬೇಕು. ಆದ್ರೆ ಎಲ್ಲರ ಮನೆಯ ದೋಸೆಯೂ ತೂತೇ. ಎಲ್ಲರೂ ಪಾಲುದಾರಿಕೆ ಆಗಿದ್ದಾರೆ. ಇದಕ್ಕೆ ಕೋರ್ಟ್ ಆದೇಶ ಬೇಕಾಗಿಲ್ಲ. ಸರ್ಕಾರಕ್ಕೆ ಯಾವಾಗ ಬೇಕಾದರೂ ಅಳತೆ ಮಾಡಬಹುದು. ಅದನ್ನ ಬಿಟ್ಟು ಬೇರೆ ಲಾಭ ತೆಗೆದುಕೊಳ್ಳುತ್ತೇನೆ ಅಂದ್ರೆ ತಪ್ಪು ಎಂದಿದ್ದಾರೆ.

ಸೆಲೆಬ್ರಿಟಿ ಗಳು ಯಾರಾದರೂ ಆಗಿರಬಹುದು. ಎಲ್ಲರ‌ ಮೇಲೂ ಕ್ರಮ ಆಗಬೇಕಿದೆ. ಆದ್ರೆ ವೈಯಕ್ತಿಕವಾಗಿ ದ್ವೇಷ ಮಾಡಬಾರದು. ಇದೊಂದಕ್ಕೆ ಮಾತ್ರ ಎಸ್ ಐಟಿ ಯಾಕೆ ಬೇಕು. ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ತಪ್ಪು ಆಗಿದ್ರೆ ಆಗಬೇಕು ಎಂದಿದ್ದಾರೆ. ಯಾರು ಭಯ ಬಿದ್ದಿಲ್ಲ, ಯಾರೂ ಹೇಳಿದ್ದಾರೆ. ಡಿಕೆಗೂ , ಕುಮಾರಸ್ವಾಮಿ ಗೂ ಒಂದೇ ಕಾನೂನು ಎಂದಿದ್ದಾರೆ.

ಸಚಿವರಿಗೆ ಹನಿಟ್ರ್ಯಾಪ್ ಯತ್ನ‌ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಹೆಸರು ಹೇಳದೇ ಪ್ರಭಾವಿ ಅಂದ್ರೆ ಯಾರು?. ನೀವು ಹೆಸರು ಹೇಳಬೇಕು ಅಲ್ಲವೇ. ಯಾರು ಮಾಡಿಸಿದ್ದಾರೆ ಅಂದರೆ ಉತ್ತರ ನೀಡುತ್ತೇವೆ. ಯಾರೂ ಮಾಡಿದರೂ ತಪ್ಪು ಎಂದಿದ್ದಾರೆ.