ಬೆಂಗಳೂರು: ಬಿ.ವೈ ವಿಜಯೇಂದ್ರಗೆ ದುಬೈ ಜೊತೆಗೆ ನಂಟು ಹೆಚ್ಚು ಎಂಬ ಕಾಂಗ್ರೆಸ್ ಸಚಿವರ ಆರೋಪ ವಿಚಾರದ ಬಗ್ಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಏರ್ಪೋರ್ಟ್ ನಿಂದ ಗೋಲ್ಡ್ ಸ್ಮಗ್ಲರ್ ತಪಾಸಣೆ ನಡೆಸದೆಯೇ ಹೇಗೆ ಬರುತ್ತಾರೆ?.ಪೊಲೀಸ್ ಫೋರ್ಸ್ ಯಾಕೆ ಬಳಕೆ ಆಗ್ತಿದೆ. ಸಿಬಿಐ ವಿಚಾರಣೆ ನಡೆಸುತ್ತಿದೆ. ಕಾಂಗ್ರೆಸ್ ಸಚಿವರಿಗೆ ಹೆದರಿಕೆ ಶುರುವಾಗಿದೆ. ನಿನ್ನೆ ಡಲ್ ಆಗಿ ಕೂತಿರುವವರಿಗೆ ಇದು ಅರ್ಥ ಆಗಿರುತ್ತದೆ. ಏರ್ಪೋರ್ಟ್ ನಲ್ಲಿ ತಪಾಸಣೆ ಆಗದೇ ಹೇಗೆ ಬರುತ್ತಾರೆ?.ಪೊಲೀಸ್ ಪ್ರೋಟೊಕಾಲ್ ಸ್ಮಗ್ಲರ್ ಗೆ ಹೇಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಚಿವರು ಎಂದಿದ್ದಾರೆ, ಹೆಸರು ಹೇಳಲಿ: ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಆರೋಪ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಹೆಸರು ಇದ್ರೆ ಹೇಳಲಿ.ಡಿಆರ್ ಐ ಇದೆ, ಸಿಬಿಐ ಇದೆ. ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಚಿವರು ಎಂದಿದ್ದಾರೆ, ಹೆಸರು ಹೇಳಲಿ. ದುಬೈನಲ್ಲಿ ವಿಜಯೇಂದ್ರರದ್ದು ಸಾಕಷ್ಟು ದುಡ್ಡಿದೆ ಅಂತ ಯತ್ನಾಳ್ ಹೇಳ್ತಾರೆ. ವಿಜಯೇಂದ್ರ ದುಬೈಗೆ ಹೋಗೋದು ಬರೋದು ಮಾಡ್ತಾರೆ ಎಂದು ಹೇಳ್ತಾರೆ.ಸಚಿವರ ವಿಚಾರವಾಗಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೋಡಿಯೋದು ಬೇಡ.ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನಕ್ಕೆ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ನೂರು ಕೋಟಿ, ಸಾವಿರ ಕೋಟಿ ಅನುದಾನ ಕೊಟ್ರೂ ಸಾಲಲ್ಲ.ಅವರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳ್ತಾರೆ. ವೈಯಕ್ತಿಕವಾಗಿ ಶಾಸಕರು ಅನುದಾನ ಕೇಳಲ್ಲ ಎಂದಿದ್ದಾರೆ.











