ಮನೆ Latest News ಖರ್ಗೆ ಇಬ್ಬರು ಒಟ್ಟಾಗಿ ಹೋದ್ರೆ ಒಳ್ಳೆಯದಯ ಅಂತ ಸೂಕ್ಷ್ಮವಾಗಿ ಹೇಳಿದ್ದಾರೆ : ಸಚಿವ ಚಲುವರಾಯಸ್ವಾಮಿ ಹೇಳಿಕೆ

ಖರ್ಗೆ ಇಬ್ಬರು ಒಟ್ಟಾಗಿ ಹೋದ್ರೆ ಒಳ್ಳೆಯದಯ ಅಂತ ಸೂಕ್ಷ್ಮವಾಗಿ ಹೇಳಿದ್ದಾರೆ : ಸಚಿವ ಚಲುವರಾಯಸ್ವಾಮಿ ಹೇಳಿಕೆ

0

ಬೆಂಗಳೂರು; ಒಟ್ಟಾಗಿ ಹೋಗುವಂತೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಸಚಿವ ಚೆಲುವರಾಯ ಸ್ವಾಮಿ ಪ್ರತಿಕ್ರಿಯಿಸಿದ್ದು ಅಧ್ಯಕ್ಷರು, ಹಿರಿಯರು ಮಾರ್ಗದರ್ಶಕರು. ಸ್ವಲ್ಪ ಮಾರ್ಮಿಕವಾಗಿದ್ದಾರೆ ಇಬ್ಬರು ಒಟ್ಟಿಗೆ ಇದ್ದಾರೆ. ಅನುಮಾನ ಬರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಇಬ್ಬರು ಒಟ್ಟಾಗಿ ಹೋದ್ರೆ ಒಳ್ಳೆಯದಯ ಅಂತ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದಿದ್ದಾರೆ.

100 ಪರ್ಸೆಂಟ್ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದ ಅವರು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರ ಕೈವಾಡ ಆರೋಪ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಯವರು ಜನಕ್ಕೆ ಉಪಯೋಗ ಆಗುವ ಕೆಲಸ ಮಾಡಿದ್ದಾರಾ?. ಒಂದೇ ಒಂದು ಸಲಹೆ ಕೊಟ್ಟಿಲ್ಲ. ವಿರೋಧ ಪಕ್ಷದವರಿಗೆ ಸ್ಪಷ್ಟತೆ ಇಲ್ಲ. ಟೀಕೆ ಟಿಪ್ಪ‌ಣೆ ಬಿಟ್ರೆ ಏನ್ ಮಾಡ್ತಾರೆ. ಕೇಸ್ ವಿಚಾರದಲ್ಲಿ ತನಿಖಾ ಸಂಸ್ಥೆ ಇದೆ. ಸಿಬಿಐ ನವರು ತನಿಖೆ ಮಾಡ್ತಿದ್ದಾರೆ. ಈ ಹಿಂದೆ ಯಾವುದ್ಯಾವುದು ಹೇಳಿದ್ರೋ ಅದೆಲ್ಲಾ ಹುಸಿ ಆಗಿದೆ. ಒಂದು ಏನಾದ್ರು ಗಂಭಿರಾವಾಗಿದ್ರೆ ಹೇಳಿ ನೊಡೊಣಾ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮಾಡಲಿ. ಯಾರಾದಾದ್ರು ಹೆಸರಿದ್ರೆ ತನಿಖೆಯಲ್ಲಿ ಗೊತ್ತಾಗಲಿದೆ.ಯಾರದ್ರು ಹೆಸರಿದ್ರೆ ಹೊರಹಾಕಲಿ. ಸುಮ್ಮನೆ ಹೇಳಿದ್ರೆ ಏನು ಪ್ರಯೋಜನ? ಎಂದಿದ್ದಾರೆ.

ಸಿಬಿಐ ತನಿಖೆಯ ಬಳಿಕ ನೋಡೊಣ : ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬಗ್ಗೆ  ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು:  ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು  ತನಿಖೆಗೆ ಆದೇಶ ಆಗಿದೆ, ಸಿಬಿಐ ತನಿಖೆ ಮಾಡ್ತಿದೆ. ನಮಗೆ, ಪೊಲೀಸರಿಗೆ ಯಾವುದೇ ಮಾಹಿತಿ ಕೊಡಲ್ಲ. ತನಿಖೆ ಆಗಲಿ ನೋಡೊಣ. ತನಿಖೆಯಲ್ಲಿ ಹೊರಬರಲೇ ಬೇಕಲ್ವಾ. ಯಾರಾದರೂ ಇದ್ದರೆ ತನಿಖೆಯಲ್ಲಿ ಗೊತ್ತಾಗಲಿದೆ. ರಾಜ್ಯ ಪೊಲೀಸರಿಗೆ ಏನೂ ಮಾಹಿತಿ ಇಲ್ಲ. ಸಿಬಿಐ ತನಿಖೆಯ ಬಳಿಕ ನೋಡೊಣ. ತನಿಖೆಯ ನಂತರ ಗೊತ್ತಾಗಬೇಕಲ್ವಾ ಎಂದಿದ್ದಾರೆ.