ಮನೆ Latest News ಕೊಪ್ಪಳ: ಪ್ರವಾಸಿಗರ ಮೇಲೆ ಗ್ಯಾಂಗರೇಪ್ ಪ್ರಕರಣ; ಆರೋಪಿ ಗಳಿಗೆ ಕಠೀಣ ಶಿಕ್ಷೆ ಕೊಡಿಸೋ ಕೆಲಸ ಮಾಡುತ್ತೇವೆಂದ...

ಕೊಪ್ಪಳ: ಪ್ರವಾಸಿಗರ ಮೇಲೆ ಗ್ಯಾಂಗರೇಪ್ ಪ್ರಕರಣ; ಆರೋಪಿ ಗಳಿಗೆ ಕಠೀಣ ಶಿಕ್ಷೆ ಕೊಡಿಸೋ ಕೆಲಸ ಮಾಡುತ್ತೇವೆಂದ ಸಚಿವ ಶಿವರಾಜ್ ತಂಗಡಗಿ

0

ಕೊಪ್ಪಳ: ಪ್ರವಾಸಿಗರ ಮೇಲೆ ಗ್ಯಾಂಗರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಗಳಿಗೆ ಕಠೀಣ ಶಿಕ್ಷೆ ಕೊಡಿಸೋ ಕೆಲಸ ಮಾಡುತ್ತೇವೆಂದು ಸಚಿವ ಶಿವರಾಜ್ ತಂಗಡಗಿ  ಹೇಳಿದ್ದಾರೆ.

ಕೊಪ್ಪಳ ನಗರದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ರೀತಿಯ ಕೃತ್ಯ ಆಗಬಾರದಿತ್ತು. ಈ ಘಟನೆ ನನ್ನ ಮನಸಿಗೆ ನೋವು ತಂದಿದೆ. ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು. ಇಂದು ಮತ್ತೊಬ್ಬರನ್ನು ಬಂಧಿಸಲಾಗಿದೆ. ಪ್ರವಾಸಿಗರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗೋದು ಎಂದಿದ್ದಾರೆ.

ಕ್ಷುಲಕ ವಿಚಾರಕ್ಕೆ ಈ ರೀತಿಯ ಘಟನೆ ಆಗಿದೆ. ಆರೋಪಿ ಗಳಿಗೆ ಕಠೀಣ ಶಿಕ್ಷೆ ಕೊಡಿಸೋ ಕೆಲಸ ಮಾಡುತ್ತೇವೆ.ನಿರ್ಜನ ಪ್ರದೇಶದಲ್ಲಿ ರಾತ್ರಿ ಅಡ್ಡಾಡಲು ಹೋಗಬಾರದಿತ್ತು. ಅಲ್ಲಿ ಚಿರತೆ, ಕರಡಿ ಸೇರಿ ಕಾಡು ಪ್ರಾಣಿಗಳ ಉಪಟಳವಿದೆ .ಈ ಬಗ್ಗೆ ಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಅನಧಿಕೃತ ರೆಸಾರ್ಟ್ ಗಳ ವಿರುದ್ಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದ್ರು.

ಸಿಎಂ ಅಲ್ಪಸಂಖ್ಯಾತರ ಬಜೆಟ್ ಮಂಡಿಸಿದ್ದಾರೆ; ದಾವಣಗೆರೆಯಲ್ಲಿ ಹರಿಹರ ಶಾಸಕ ಬಿಪಿ ಹರೀಶ್ ಹೇಳಿಕೆ..

ದಾವಣಗೆರೆ; ಸಿಎಂ ಅಲ್ಪಸಂಖ್ಯಾತರ ಬಜೆಟ್ ಮಂಡಿಸಿದ್ದಾರೆ ಎಂದು ದಾವಣಗೆರೆಯಲ್ಲಿ ಹರಿಹರ ಶಾಸಕ ಬಿಪಿ ಹರೀಶ್ ಹೇಳಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ದಿಯಾದರೆ ರಾಜ್ಯ ಅಭಿವೃದ್ದಿ ಅಂತ ತಿಳಿದಿದ್ದಾರೆ. ಸಿದ್ದರಾಮಯ್ಯರದ್ದು ಮಾನಸಿಲ ಅಸಮತೋಲನ ಕಂಡು ಬರುತ್ತಿದೆ. ದಾವಣಗೆರೆಯಲ್ಲಿ ಹರಿಹರ ಶಾಸಕ ಬಿಪಿ ಹರೀಶ್ ಹೇಳಿದ್ದಾರೆ. ಅಭಿವೃದ್ದಿ ಬಿಟ್ಟು ಅಲ್ಪಸಂಖ್ಯಾತರಿಗಾಗಿ ಬಜೆಟ್ ಮಂಡಿಸಿದ್ದಾರೆ.ಸರಳ ಮದುವೆಗೆ 50 ಸಾವಿರ, ವಕ್ಫ್ ಗೆ ಹಣ, ಐಟಿಐ ಕಾಲೇಜ್, ವಸತಿ ಕಾಲೇಜ್ ಹೀಗೆ ಅಲ್ಪಸಂಖ್ಯಾತರ ಬಜೆಟ್ ಇದಾಗಿದೆ. ಬಜೆಟ್ ನಲ್ಲಿ ದಾವಣಗೆರೆಗೆ ಏನೂ ಕೊಡುಗೆ ಇಲ್ಲ.ದಾವಣಗೆರೆ ಜಿಲ್ಲಾ ಸಚಿವರು. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕ್ರಷರ್ ಗಳ ರಿನಿವಲ್ ಮಾಡಿದ್ದಾರೆ ಎಂದ್ದಿದ್ದಾರೆ.

ಹೊಸ ಕ್ವಾರಿ, ಹಳೇ ಲೀಸ್ ಕೊಡಲು ಭ್ರಷ್ಟಾಚಾರ. ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹಿಸದೇ ಭ್ರಷ್ಟಾಚಾರ ಮಾಡಿಕೊಂಡಿದ್ದಾರೆ. ಹೊಸ ಹೊಸ ಸಕ್ಕರೆ ಕಾರ್ನಾನೆ ತೆಗೆಯಲು ಮುಂದಾಗಿದ್ದಾರೆ.ಬಡವರ ಬಗ್ಗೆ ಕಾಳಜಿ‌ ಇಲ್ಲ. ನಮ್ಮ ತಂದೆ ಸಮಾಧಿ ನಾನು ತೋರಿಸಿದ್ದೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ನಮ್ಮ ತಂದೆ ನಿಧನರಾದಗ ಇವರಿಗೆ ಹತ್ತೂವರೆ ವರ್ಷ..ಇಲ್ಲಸಲ್ಲದ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.