ಬೆಂಗಳೂರು; ವಿಧಾನಸೌಧದಲ್ಲಿ ನಾಳೆಯಿಂದ ಪುಸ್ತಕ ಮೇಳ ಆಯೋಜನೆ ಮಾಡಲಾಗಿದೆ. ಪುಸ್ತಕ ಮೇಳದ ಸಿದ್ಧತೆಗಳನ್ನು ಸ್ಪೀಕರ್ ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲಿಸಿದರು. ನಾಳೆಯಿಂದ 5 ದಿನಗಳ ಕಾಲ ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಪುಸ್ತಕ ಮೇಳ ಆಯೋಜನೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ಆಯೋಜನೆ ಮಾಡಲಾಗಿದ್ದು, ಪುಸ್ತಕ ಮಾರಾಟ ಸ್ಟಾಲ್ ಗಳು, ಕಾರ್ಯಕ್ರಮದ ವೇದಿಕೆಯನ್ನು ಸ್ಪೀಕರ್ ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲಿಸಿದ್ರು.ನಾಳೆ ಸಂಜೆ 5 ಗಂಟೆಗೆ ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಡಲಿದ್ದಾರೆ.
ಇದೇ ವೇಳೆ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಪುಸ್ತಕ ಮೇಳದಿಂದ ಪ್ರಕಾಶಕರಿಗೆ ನೆರವಾಗಲಿದೆ. ಸಾರ್ವಜನಿಕರಿಗಾಗಿಯೇ ಈ ಪುಸ್ತಕ ಮೇಳ ಆಯೋಜಿಸಲಾಗಿದೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. ಪುಸ್ತಕ ಮೇಳೆದ ಕೊನೆಯ ದಿನ ಅಧಿವೇಶನ ಆರಂಭವಾಗಲಿದೆ. ಅಂದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.ಶಾಸಕರೂ ಪುಸ್ತಕಗಳನ್ನು ಖರೀದಿಸಿ ಅವರ ಕ್ಷೇತ್ರಗಳ ಶಾಲೆ, ಲೈಬ್ರರಿಗಳಿಗೆ ಕೊಡಬಹುದು.ಇದೇ ಮೊದಲ ಬಾರಿಗೆ ಇಲ್ಲಿ ಪುಸ್ತಕ ಮೇಳ ಆಯೋಜನೆ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಬರೇ ರಾಜಕೀಯ ನಡೆಯೋ ವಿಧಾನಸೌಧದಲ್ಲಿ ಕಲೆ, ಸಾಹಿತ್ಯದ ಸ್ಪರ್ಶ. ವಿಧಾನಸೌಧದಲ್ಲಿ ಪುಸ್ತಕ ಮೇಳ ಒಂದು ಹೊಸ ಪ್ರಯತ್ನ. ಈ ಐಡಿಯಾ ಯಾರ ತಲೆಗೂ ಬಂದಿರಲಿಲ್ಲ. ಸ್ಪೀಕರ್ ಯು.ಟಿ ಖಾದರ್ ತಲೆಗೆ ಬಂದಿದೆ. ಇದರ ಸಂಪೂರ್ಣ ಕ್ರೆಡಿಟ್ ಅವರಿಗೆ ಹೋಗ್ಬೇಕು. ಬೇರೆ ರಾಜ್ಯಗಳಲ್ಲೆಲ್ಲೂ ಈ ಪ್ರಯತ್ನ ಆದಂಗಿಲ್ಲ. ಕೇರಳದಲ್ಲಾಗಿದೆ ಅಂತ ಕೇಳಿದ್ದೇನೆ ಎಂದರು.
ಇದೇ ವೇಳೆ ವಿಧಾನಸೌಧದಲ್ಲಿನ ಶ್ವಾನಗಳಿಗೆ ಶೆಲ್ಟರ್ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿದ ಯು ಟಿ ಖಾದರ್ DPAR ನವರು ಸ್ಥಳ ನಿಗದಿ ಮಾಡುತ್ತಾರೆ. PWD ನವರು ಅದರ ಖರ್ಚನ್ನ ಅಂದಾಜು ಮಾಡುತ್ತಾರೆ. ಯಾವ ಸ್ಥಳದಲ್ಲಿ ನಿರ್ಮಾಣ ಮಾಡ್ಬೇಕು ಅಂತ ಎಕ್ಸರ್ಟ್ ಕಮಿಟಿ ತೀರ್ಮಾನ ಮಾಡುತ್ತೆ. ವಿಧಾನಸೌಧದಲ್ಲಿ ತೊಂದರೆಯಾಗದ ಸ್ಥಳ ಗುರುತಿಸಿಕೊಂಡು ನಿರ್ಮಾಣ ಮಾಡುತ್ತಾರೆ. DPAR ಮತ್ತು PWD ಜೊತೆಗೂಡಿ NGO ಸಂಸ್ಥೆಗೆ ನಿರ್ವಹಣೆಗೆ ನೀಡುತ್ತೆ. ಇದರ ಕಾರ್ಯಾಚರಣೆಯೂ ನಡೆಯುತ್ತಿದೆ ಎಂದರು.











