ಮನೆ Latest News ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡೆಕ್ಟರ್ ಮೇಲೆ ಹಲ್ಲೆ‌ ಪ್ರಕರಣ; ಹಲ್ಲೆ ಮಾಡಿದ್ದ ಮತ್ತೊಬ್ಬ ಆರೋಪಿಯನ್ನ ಬಂಧಿಸಿದ...

ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡೆಕ್ಟರ್ ಮೇಲೆ ಹಲ್ಲೆ‌ ಪ್ರಕರಣ; ಹಲ್ಲೆ ಮಾಡಿದ್ದ ಮತ್ತೊಬ್ಬ ಆರೋಪಿಯನ್ನ ಬಂಧಿಸಿದ ಪೊಲೀಸರು.

0

ಬೆಳಗಾವಿಯಲ್ಲಿ ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡೆಕ್ಟರ್ ಮೇಲೆ ಹಲ್ಲೆ‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆ ಮಾಡಿದ್ದ ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಕಂಡೆಕ್ಟರ್ ಮಹಾದೇವಪ್ಪ ಹುಕ್ಕೇರಿ ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡು ಅಪ್ರಾಪ್ತ ಸೇರಿ ನಾಲ್ಕು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಇಂದು ಇನ್ನೋರ್ವ ಆರೋಪಿ ಮೋಹನ್ ಹಂಚಿನಮನಿ(25) ಬಂಧಿಸಲಾಗಿದೆ. ಮೋಹನ್ ಸೇರಿ ಈ ವರೆಗೂ ಐದು ಜನ ಆರೋಪಿಗಳ ಬಂಧನವಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇನ್ನು ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡೆಕ್ಟರ್ ಮೇಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ನಾಳೆ ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ ಕೊಡಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ ಬೆಳಗಾವಿಗೆ ರಾಮಲಿಂಗ ರೆಡ್ಡಿ ಆಗಮಿಸಲಿದ್ದಾರೆ.ಬೆಳಗ್ಗೆ 9.30ಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚರಿಸುವ ಕುರಿತು ಚರ್ಚೆ ಮಾಡಲಿದ್ದಾರೆ. ಕಂಡೆಕ್ಟರ್ ಮೇಲೆ ಹಲ್ಲೆ ಕುರಿತು ಕೂಡ ಅಧಿಕಾರಿಗಳಿಂದ ರಾಮಲಿಂಗ ರೆಡ್ಡಿ ಮಾಹಿತಿ ಪಡೆಯಲಿದ್ದಾರೆ. ಮಂಗಳವಾರ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೂಡ ಬೆಳಗಾವಿಗೆ ಆಗಮಿಸಲಿದ್ದಾರೆ. ಕನ್ನಡಿಗ ಕಂಟೆಕ್ಟರ್ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆಗೆ ನಾರಾಯಣಗೌಡ ಬೆಳಗಾವಿಗೆ ಬರಲಿದ್ದಾರೆ. ಪಂಥಬಾಳೇಕುಂದ್ರಿ ಚಲೋ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪರಿಷತ್ ಸದಸ್ಯ ಸಿ ಟಿ ರವಿ  ಸಾವಿರಾರು ವರ್ಷಗಳಲ್ಲಿ ದೇಶದಲ್ಲಿ ಹೆಣ್ಣಿಗಾಗಿ, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ನಡೆದಿವೆ. ಆದರೆ ಭಾಷೆಗಾಗಿ ಯುದ್ಧ ನಡೆದಿಲ್ಲ. ಚಾಲುಕ್ಯರು, ಚೋಳರು ಭಾಷೆಯನ್ನು ಕನ್ನಡದ ಮೇಲೆ ಹೇರಲಿಲ್ಲ.ಇಲ್ಲಿರುವುದು ಭಾಷಾ ಬಾಂಧವ್ಯ. ಭಾಷೆ ಬೆಂಕಿ‌ ಹಚ್ಚಲು ಕಾರಣ ಆಗಬಾರದು. ಕಿಡಿಗೇಡಿಗಳು ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗಂತ ನಾವು ಇನ್ನೊಂದು ಭಾಷೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಇನ್ನೊಂದು ಭಾಷೆಯನ್ನು ಪ್ರೀತಿಸಿ, ಗೌರವಿಸೋಣ.ಅದು ಕೂಡಾ ಸಹೋದರ ಭಾಷೆ ಎಂದು ಅರ್ಥ ಮಾಡಿಕೊಂಡು ಭಾಷಾ ಬಾಂಧವ್ಯ ಗಟ್ಟಿಗೊಳಿಸೋಣ. ಬಾಂಧವ್ಯ ಕೆಡಿಸಬೇಕು ಅಂತಾನೇ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿದ್ದು, ಬೆಳಗಾವಿ ಹಲ್ಲೆ ಘಟನೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ ಇದು ಯಾರೂ ಕೂಡಾ ಕ್ಷಮಿಸಲು ಸಾಧ್ಯವಿಲ್ಲದ ಘಟನೆ .ಈ ನಾಡಿನಲ್ಲಿದ್ದು, ನೀರನ್ನು ಕುಡಿದು ಈ ರೀತಿ ಮಾಡಿದ್ದಾರೆ. ಕನ್ನಡಿಗರನ್ನು ತೇಜೋವಧೆ ಮಾಡುವುದನ್ನು ಕ್ಷಮಿಸಲು ಸಾಧ್ಯವಿಲ್ಲ .ಕನ್ನಡ ಸಂಘಟನೆಯವರ ಹೇಳಿಕೆ‌ ಗಮನಿಸಿದ್ದೇನೆ, ಅವರೊಂದಿಗೆ ನಾವಿದ್ದೇವೆ. : ಕನ್ನಡದ ವಿರುದ್ದ ಮಾತನಾಡುವದು, ರಾಜ್ಯದ ಬಗ್ಗೆ ಪಿತೂರಿ ಮಾಡುವುದು ಸಹಿಸಲು, ಕ್ಷಮಿಸಲು ಸಾಧ್ಯವಿಲ್ಲ. ನಾವೆಲ್ಲಾ ಕನ್ನಡಿಗರು ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಅಂತಹವರನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ, ನಾವು ಮಾಡಬೇಕಿದೆ ಎಂದರು.