ಮನೆ Latest News ಉದಯಗಿರಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲಾ ಸಿಸಿಟಿವಿಯಲ್ಲಿ ನೋಡಿ ಅರೆಸ್ಟ್ ಮಾಡಲಾಗುತ್ತಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

ಉದಯಗಿರಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲಾ ಸಿಸಿಟಿವಿಯಲ್ಲಿ ನೋಡಿ ಅರೆಸ್ಟ್ ಮಾಡಲಾಗುತ್ತಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಉದಯಗಿರಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲಾ ಸಿಸಿಟಿವಿಯಲ್ಲಿ ನೋಡಿ ಅರೆಸ್ಟ್ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಉದಯಗಿರಿ ಗಲಭೆ ಪ್ರಕರಣದಲ್ಲಿ ಕೆಲವರ ಬಂಧನ ಮಾತ್ರ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ರು ಅಂತ ಸಿಸಿಟಿವಿಯಲ್ಲಿ ನೋಡಿಕೊಂಡು ಪೊಲೀಸರು ಬಂಧಿಸ್ತಿದ್ದಾರೆ. ಮೌಲ್ವಿಯನ್ನೂ ಬಂಧಿಸಲಾಗಿದೆ. ಪ್ರಕರಣದಲ್ಲಿ ಕೆಲವರನ್ನ ಒಂದೆರಡು ದಿನಗಳಲ್ಲೇ ಬಂಧಿಸಲಾಯ್ತು. ಮೌಲ್ವಿ ಮಾತಾಡಿರೋದು ವೈರಲ್ ಆಗಿತ್ತು, ಅವರನ್ನೂ ಬಂಧಿಸಲಾಗಿದೆ. ಇನ್ಯಾರ್ಯಾರು ಭಾಗವಹಿಸಿದ್ದಾರೋ ಸಿಸಿಟಿವಿಯಲ್ಲಿ ನೋಡಿ ಬಂಧಿಸ್ತಾರೆ. ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವ್ರು ರಾಜಕೀಯ ಮಾಡೋಕ್ಕೇ ಇರೋದು. ಇದರಲ್ಲೂ ರಾಜಕೀಯ ಮಾಡ್ತಿದ್ದಾರೆ, ಅವರು ಮಾಡಲಿ ಎಂದಿದ್ದಾರೆ.

ಮುಂದಿನ ಚುನಾವಣೆಗೆ ನನ್ನ ನಾಯಕತ್ವ ಎಂಬ ಡಿಕೆಶಿ ಹೇಳಿಕೆ  ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಡಿಕೆಶಿಯವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.ಈ ಥರದ ಹೇಳಿಕೆ ಯಾರು ಕೊಟ್ಟಿದ್ದಾರೋ ಅವರ ಬಳಿಯೇ ನೀವು ಕೇಳಿ ಎಂದಿದ್ದಾರೆ.

ರಂಜಾನ್ ವೇಳೆ ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ಮುಂಚೆ ಕಳಿಸಲು ಮನವಿ ವಿಚಾರದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರಕ್ಕೆ ಮನವಿ ಕೊಟ್ಟಿರಬಹುದು. ಆಥರ ಇದ್ರೆ ಚರ್ಚೆ ಮಾಡಿ ಸರ್ಕಾರ ತೀರ್ಮಾನ ಮಾಡುತ್ತೆ. ಇದರಲ್ಲಿ ನನ್ನ ಅಭಿಪ್ರಾಯ ನಿಮ್ಮ ಮುಂದೆ ಯಾಕೆ ಹೇಳಲಿ?. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದರೆ ನನ್ನ ಅಭಿಪ್ರಾಯ ಹೇಳ್ತೇನೆ. ತೆಲಂಗಾಣದಲ್ಲಿ ಇದು ಜಾರಿಯಾಗಿರುವ ವಿಚಾರ ಗೊತ್ತಿಲ್ಲ. ಎನ್ ಆರ್ ಸಂತೋಷ್ ವಿರುದ್ಧ ಅಟ್ರಾಸಿಟಿ ಕೇಸ್, ಅರಸೀಕೆರೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ಹಾಸನ ಎಸ್‌ಪಿ ಜತೆ ಚರ್ಚೆ ಮಾಡ್ತೇನೆ.ಕೆ ಎನ್ ರಾಜಣ್ಣಗೆ ಖರ್ಗೆ ಎಚ್ಚರಿಕೆ ಕೊಟ್ಟಿರೋ ಬಗ್ಗೆ ನನಗೆ ಗೊತ್ತಿಲ್ಲ.  ನಾನೂ ಮಾಧ್ಯಮಗಳಲ್ಲೇ ನೋಡಿದ್ದು. ನಾನು ಅಂಥ ಹೇಳಿಕೆ ಏನೂ ಮಾಡಿಲ್ಲ. ಹಾಗಾಗಿ‌ ನನಗೆ ಎಚ್ಚರಿಕೆ ಕೊಡೋ ಪ್ರಶ್ನೆಯೇ ಇಲ್ಲ. ಸಂಪುಟ ವಿಸ್ತರಣೆ ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ.ಸಿಎಂ ವಿಸ್ತರಣೆ ಮಾಡಬಹುದು, ಮಾಡದೇ ಇರಬಹುದು, ಅದು ಅವರ ನಿರ್ಧಾರ ಎಂದರು.