ಬೆಂಗಳೂರು; ಸದಾಶಿವ ನಗರದಲ್ಲಿರುವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಿಜೆಪಿ ರೆಬಲ್ಸ್ ನಾಯಕರು ಸಭೆ ನಡೆಸಿದ್ರು. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ ಹರೀಶ್, ಮಾಜಿ ಸಂಸದ ಜಿ.ಎಂ ಸಿದ್ದೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಭೆ ಬಳಿಕ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ನಾವೆಲ್ಲ ಸೇರಿ ಒಂದು ಕಾಫಿ ಕುಡಿದ್ವಿ ಅಷ್ಟೇ ಎಂದಿದ್ದಾರೆ.
ಈಗಾಗಲೇ ನಾವು ವಕ್ಫ್ ಹೋರಾಟ ನಡೆಸಿ ಜೆಪಿಸಿಗೆ ವರದಿ ಕೊಟ್ಟಿದ್ದೇವೆ. ನಾವು ಸಭೆ ಸೇರಿದಾಗಲೆಲ್ಲ ಬಂಡಾಯ ಸಭೆ ಅಂತಿದ್ರು. ಆದ್ರೆ ನಾವು ವಕ್ಫ್ ವಿಚಾರ ಇಟ್ಕೊಂಡು ಸಭೆ ನಡೆಸ್ತಿದ್ವಿ. ವಕ್ಫ್ ಹೋರಾಟಕ್ಕೆ ಕಿಚ್ಚು ಹಚ್ಚಿದ್ದು ಯತ್ನಾಳ್. ಅವರ ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯ ಆಗ್ತಿತ್ತು, ಅಲ್ಲವನ್ನು ಹೋಗಿ ಪರಿಶೀಲಿಸಿದೆವು. ಐದಾರು ತಿಂಗಳಿಂದ ಯಾರಿಗೂ ಕೂಡಾ ಗ್ಯಾರಂಟಿಗಳು ಸರಿಯಾಗಿ ತಲುಪ್ತಿಲ್ಲ. ಆಗಸ್ಟ್ ನೊಳಗೆ ಜಿ.ಪಂ, ತಾ.ಪಂ ಚುನಾವಣೆ ಮಾಡ್ತೀವಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆಗೆ 2 ದಿನದ ಹಿಂದೆ ಸರಿಯಾಗಿ ಗ್ಯಾರಂಟಿ ಬಾಕಿ ಹಣ ಬಿಡುಗಡೆ ಮಾಡ್ತಾರೆ. ಇದು ಸಿದ್ದರಾಮಯ್ಯ ಟ್ಯಾಕ್ಟಿಕ್ ಎಂದಿದ್ದಾರೆ.
ಗ್ಯಾರಂಟಿ ಪ್ರಾಮಿಸ್ ಮಾಡಿದ್ಮೇಲೆ ನಿರಂತರ ಕೊಡಿ ಅದೇ ನಿಮ್ಮ ಬದ್ಧತೆ. ಬಜೆಟ್ ಮಂಡಿಸ್ತಿದ್ದೀರಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸಬೇಕು. ಉದಯಗಿರಿ ಠಾಣೆ ಗಲಭೆ ಪ್ರಕರಣದಲ್ಲಿ ಕೆಲವರ ಬಂಧನ ಅಷ್ಟೇ ಆಗಿದೆ.ಗೃಹ ಸಚಿವರು ಬಂದು ಹೋದ ನಂತರ ಯಾರ ಬಂಧನವೂ ಆಗಿಲ್ಲ. ಆ ಮುಲ್ಲಾ ಬಂಧನ ಮಾಡಿಲ್ಲ ಇನ್ನೂ.ಪೊಲೀಸರಿಗೆ ವರ್ಗಾವಣೆ ಬಳುವಳಿ ಕೊಡ್ತಿದ್ದಾರೆ. ಈ ಸರ್ಕಾರ ಪೊಲೀಸ್ ವ್ಯವಸ್ಥೆ ಹಾಳು ಮಾಡ್ತಿದೆ.ಮುಸಲ್ಮಾನರಿಗೆ ಫ್ರೀ ಪರ್ಮಿಟ್, ಹಿಂದೂಗಳ ಮೇಲೆ ನಿಯಂತ್ರಣ ಹಾಕ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.
ವಕ್ಫ್ ಹೋರಾಟ ಯಶಸ್ವಿಯಾಗಿದೆ, ವರಿಷ್ಠರ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ ನಾವೆಲ್ಲ ಸೇರಿ ಒಂದು ಕಾಫಿ ಕುಡಿದ್ವಿ ಅಷ್ಟೇ.ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡಿದ್ವಿ. ಅಷ್ಟೇ ಇವತ್ತಿನ ಸಭೆಯಲ್ಲಿ ಆಗಿದ್ದು ಬೇರೇನೂ ಇಲ್ಲ ಎಂದ ಅವರು ಮುಡಾ ಕೇಸ್ ನಲ್ಲಿ ಬಿ ರಿಪೋರ್ಟ್ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿ ಇದರಲ್ಲಿ ಅಚ್ಚರಿ ಏನೂ ಇಲ್ಲ, ಇದೇ ನಿರೀಕ್ಷೆ ಇತ್ತು.ಈ ಸರ್ಕಾರಕ್ಕೆ ಲಜ್ಜೆ ಇಲ್ಲ. ಲೋಕಾಯುಕ್ತ ಹತ್ಯೆ ಮಾಡಿದವರೇ ಸಿದ್ದರಾಮಯ್ಯ. 50:50 ಅನುಪಾತ ಸೈಟ್ ಹಂಚಿಕೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಆದ್ರೆ ಸಿದ್ದರಾಮಯ್ಯ ಅವರಿಗೇ ಮಾಫಿ ಮಾಡಿ ಲೋಕಾಯುಕ್ತ ಬಿ ರಿಪೋರ್ಟ್ ಹಾಕಿದೆ. ಸಿದ್ದರಾಮಯ್ಯ ಅವರನ್ನೇ ಮಾಫಿ ಮಾಡಿ ಲೋಕಾಯುಕ್ತ ಪೊಲೀಸರು ತಿಪ್ಪೇ ಸಾರಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.











