ಬೆಂಗಳೂರು; ಪೌರಾಡಳಿತ ಸಚಿವ ರಹೀಂಖಾನ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಮುನ್ಸಿಪಲ್ ಆಕ್ಟ್ ಗೆ ತಿದ್ದುಪಡಿ ತರಲಾಗಿದೆ. ಇ ಆಸ್ತಿ ತಂತ್ರಾಂಶವನ್ನ ಜಾರಿಗೆ ತರಲಾಗಿದೆ. ಲೇಔಟ್ ಗಳು ಅಪ್ರೂವಲ್ ಆಗಿರಬೇಕು.ರೆವಿನ್ಯೂ ಲೇಔಟ್ ಗಳು ರಚನೆಯಾಗಿವೆ. ಇವುಗಳಿಗೆ ತೆರಿಗೆಯನ್ನ ಹಾಕಲಾಗುತ್ತದೆ. ಒನ್ ಟೈಮ್ ಸೆಟಲ್ ಮೆಂಟ್ ಮೂಲಕ ಪರಿಹಾರ ನೀಡಲಾಗುತ್ತದೆ. ೧೦/೯/೨೦೨೪ರ ಹಿಂದೆ ಆಗಿರುವುದಕ್ಕೆ ಅನ್ವಯ. ಇವುಗಳಿಗೆ ಬಿ ಖಾತೆಯನ್ನ ನೀಡಲಾಗುತ್ತದೆ. ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಇತ್ತು.ಎ- ಖಾತಾದಲ್ಲಿ ಅಧಿಕೃತ ಖಾತೆಗಳು ಆಗುತ್ತವೆ. ಅನಧಿಕೃತ ನಿವೇಶನ ಬಿ- ಖಾತೆಗಳಿಗೆ ಸೇರಿಸ್ತೇವೆ.೧೦/೯/೨೪ ರ ನಂತರ ಆಗಿದ್ದರೆ , ಲೇಔಟ್ ಗಳು ನಿರ್ಮಾಣ ಆಗಿದ್ದರೆ ಕ್ರಮ ತೆಗೆದುಕೊಳ್ತೇವೆ. ಎ,ಬಿ ಖಾತಾಗೆ ನಾವು ತರ್ತೇವೆ ಎಂದು ಅವರು ಹೇಳಿದ್ದಾರೆ.
ಪೌರಾಡಳಿತ ಸಚಿವ ರಹೀಂಖಾನ್ ಮಾತನಾಡಿ ಮೊದಲು ಲೇಔಟ್ ನಿರ್ಮಾಣಕ್ಕೆ ಅಪ್ರೂವಲ್ ಇರಲಿಲ್ಲ. ಲೇಔಟ್ ಮಾಡೋರು ಪೆಸಿಲಿಟಿ ಸಿಗ್ತಿರಲಿಲ್ಲ. ಅಕ್ರಮವಾಗಿ ಲೇಔಟ್ ನಿರ್ಮಾಣ ಆಗಿದ್ವು. ಇದರಿಂದ ಬಡವರಿಗೆ ತೊಂದರೆಯಾಗಿತ್ತು. ಈಗ ಈ ಆದೇಶ ಅವರಿಗೆ ಅನುಕೂಲವಾಗಲಿದೆ. ಒನ್ ಟೈಮ್ ಸೆಟಲ್ ಮೆಂಟ್ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಸೈಟ್ ಪಡೆದವರು ಪರಿಹಾರ ಕಂಡುಕೊಳ್ಳಬಹುದು. ಅವರ ನಿವೇಶನಕ್ಕೆ ಅವರೇ ವಾರಸುದಾರರಾಗ್ತಾರೆ ಎಂದರು.
1500 ರಿಂದ 1600 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಇತ್ತು. ಈಗ ಒನ್ ಥರ್ಡ್ ಟ್ಯಾಕ್ಸ್ ಹೆಚ್ಚು ಬರಲಿದೆ. ಟ್ಯಾಕ್ಸ್ ಹಾಕುವುದು ಯುಎಲ್ ಬಿಗಳಿಗೆ ಇರಲಿದೆ. ಇ- ಆಸ್ತಿ,ಕಾವೇರಿ ಲಿಂಕ್ ಆಗಲಿದೆ.ಬಿ ಖಾತೆಗಳೂ ಈಗ ಅಧಿಕೃತ ಆಗಲಿವೆ. ಈಗಾಗಲೇ ಮೂಲಸೌಕರ್ಯ ಕೊಡಲಾಗಿದೆ. ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಮಾಡ್ತೇವೆ. ಥ್ರೋಟ್ ಸ್ಟೇಟ್ ನಾವು ಮಾಡ್ತೇವೆ. ಅಕ್ರಮವಾಗಿರೋದು ೪೦,೫೦ ಲಕ್ಷ ಇದೆ. ರಿಜಿಸ್ಟರ್ ಮಾಡೋಕೆ ಆನ್ಲೈನ್ ತರಲಾಗಿದೆ. ಬ್ರೋಕರ್ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದೆ.ಒಂದು ವೇಳೆ ಏನಾದ್ರೂ ಕಂಡು ಬಂದ್ರೆ ಕ್ರಮ. ಬ್ರೋಕರ್ ಹಾವಳಿ ಕಂಡು ಬಂದ್ರೆ ಕ್ರಮ ಎಂದರು. ಜೆಟ್ ನಲ್ಲಿ ಹೊಸ ಸ್ಕೀಂ ಕೇಳಿದ್ದೇವೆ. ಅಮೃತ್ ಸ್ಕೀಂ ಕಂಟಿನ್ಯೂ ಇದೆ. ನೋಡೋಣ ಏನು ಮಾಡ್ತಾರೆ ಎಂದು ತಿಳಿಸಿದ್ರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೈನಾರಿಟಿಯಿಂದ ಆಕಾಂಕ್ಷಿಗಳಿದ್ದಾರಾ ಎಂಬ ಪ್ರಶ್ನೆಯಿದೆ. ಮೈನಾರಿಟಿಯಲ್ಲೂ ಆಕಾಂಕ್ಷಿಗಳಿದ್ದಾರೆ. ಆದರೆ ನಾವು ಎಲ್ಲ ಹೈಕಮಾಂಡ್ ಗೆ ಬಿಟ್ಟಿದ್ದೇವೆ ಎಂದರು.











