ಬೆಂಗಳೂರು: ಮೆಟ್ರೋ ದರ ಏರಿಕೆಗೂ ರಾಜ್ಯ ಸರ್ಕಾರಕ್ಕೆ ಸಂಬಂಧ ಇಲ್ಲ ಎಂದು ವಿಧಾಸೌಧದಲ್ಲಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ ಬೂಟಾಟಿಕೆಯ ರಾಜಕೀಯ ಮಾಡುತ್ತದೆ.ಮೆಟ್ರೋ ದರ ಏರಿಕೆ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳಿಕೆ ಕೆಲಸ ಮಾಡುತ್ತಿದೆ. ಅದಕ್ಕೆ ನಾನು ಬಿಜೆಪಿ ಬುರುಡೆಯ ಪಕ್ಷದ ಎಂದು ನಾನು ಹೇಳುತ್ತೆನೆ.ಬಿಜೆಪಿ ಯಾವುದೇ ಜ್ಞಾನ ಇಲ್ಲ.ಕೇಂದ್ರ ರೈಲ್ವೆ ಸಚಿವರನ್ನ ರಾಜ್ಯಕ್ಕೆ ಕರೆಸಿ ಮೆಟ್ರೊ ದರ ಏರಿಕೆ ಬಗ್ಗೆ ಸುಳ್ಳು ಹೇಳಿಸಿದ್ದಾರೆ.ಇದನ್ನ ನೋಡಿದ್ರೆ ಕೇಂದ್ರ ಸಚಿವ ಅಶ್ವಿನ್ ಅಜ್ಞಾನಿ ಅನ್ನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಪಾಪ ಪ್ರಚಾರ ಪಡೆಯಲು,ಪ್ರತಿ ಬಾರಿ ಮೆಟ್ರೋ ತಂದಿದ್ದೇ ನಾನು ಎಂದು ಪೋಸ್ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಈಗ ದರ ಏರಿಕೆಯನ್ನು ರಾಜ್ಯ ಸರ್ಕಾರ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಶ್ರೀ ಜಗದೀಶ್ ಶೆಟ್ಟರ್ ದರ ಏರಿಕೆ ಬಗ್ಗೆ ರೀತಿ ಸುಳ್ಳು ಹೇಳುತ್ತಿದ್ದಾರೆ. ಇದನ್ನ ನೋಡಿದ್ರೆ ಅವರ ಕಾಲದಲ್ಲಿ ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಸಿರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಮೆಟ್ರೋ ಕಾಯಿದೆ 2002 ರ ಸೆಕ್ಷನ್ 34 ರ ಪ್ರಕಾರ ದರ ಏರಿಕೆ ಮಾಡಲು ಅವಕಾಶವಿದೆ.ಅದರ ಪ್ರಕಾರ ಮೆಟ್ರೋ ಇರುವ ಎಲ್ಲಾ ರಾಜ್ಯಗಳು ದರ ಏರಿಕೆ ಮಾಡಲು ಕೋರಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಾರೆ.ಈ ಪತ್ರವನ್ನು ಆಧರಿಸಿ ಕೇಂದ್ರ ಸರ್ಕಾರವು ದರ ಏರಿಕೆ ಮಾಡಲು ಸಮಿತಿಯನ್ನು ರಚಿಸುತ್ತದೆ.ಇದೇ ರೀತಿ ಬೆಂಗಳೂರು ನಮ್ಮ ಮೆಟ್ರೋ ರವರು ಸಹ ಪತ್ರ ಬರೆದಿದೆ.ಅದರಂತೆ, ದಿನಾಂಕ 07.09.2024 ಕೇಂದ್ರ ಸರ್ಕಾರದ ಪತ್ರ ಸಂಖ್ಯೆ 26/01/2021-EO-SMII ರಡಿಯಲ್ಲಿ ದರ ಏರಿಕೆ ಕುರಿತು ಸಮಿತಿಯನ್ನು ರಚಿಸಿದೆ ಎಂದರು.
ಕೇಂದ್ರ ಸರ್ಕಾರವು ರಚಿಸಿರುವ ಸಮಿತಿಯ ಅಧ್ಯಕ್ಷರು ಮದ್ರಾಸ್ ಹೈಕೋರ್ಟ್ ನ ಹಿಂದಿನ ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಆರ್ ತಾರಿಣಿರವರು, ಶ್ರೀ ಸತೀಂದರ್ ಪಾಲ್ ಸಿಂಗ್ ಭಾಆಸೇ, ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ಶ್ರೀ ರಮಣ ರೆಡ್ಡಿ. ಸಮಿತಿಯ ಸದಸ್ಯರುಗಳು. ಸಮಿತಿಯು ದರ ಏರಿಕೆ ಮಾಡುವುದರ ಬಗ್ಗೆ ವರದಿ ನೀಡಿರುತ್ತದೆ.ಈ ಸಮಿತಿಯು ರಾಜ್ಯ ಸಕಾರಕ್ಕೆ ಯಾವುದೇ ವರದಿ ಸಲ್ಲಿಸುವುದಿಲ್ಲ.ಮೆಟ್ರೋ ದರ ಏರಿಕೆಗೂ ರಾಜ್ಯ ಸರ್ಕಾರಕ್ಕೆ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.











