ಮನೆ Latest News ಇವತ್ತು ಡಿಸಿಎಂ ಅವರು ಸುಮಾರು ೧೦೦ ಕೋಟಿಗೂ ಹೆಚ್ಚು ರೂಪಾಯಿ ಹಣ ವೈಟ್ ಟಾಪಿಂಗ್ ಗೆ...

ಇವತ್ತು ಡಿಸಿಎಂ ಅವರು ಸುಮಾರು ೧೦೦ ಕೋಟಿಗೂ ಹೆಚ್ಚು ರೂಪಾಯಿ ಹಣ ವೈಟ್ ಟಾಪಿಂಗ್ ಗೆ ಕೊಟ್ಟಿದ್ದಾರೆ; ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆ

0

 

ಬೆಂಗಳೂರು; ಇವತ್ತು ಡಿಸಿಎಂ ಅವರು ಸುಮಾರು ೧೦೦ ಕೋಟಿಗೂ ಹೆಚ್ಚು ರೂಪಾಯಿ ಹಣ ವೈಟ್ ಟಾಪಿಂಗ್ ಗೆ ಕೊಟ್ಟಿದ್ದಾರೆ ಎಂದು  ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಡಿಕೆಶಿ ಸಿಟಿ ರೌಂಡ್ಸ್ ವೇಳೆ ಮಾತನಾಡಿದ ಅವರು ಇವತ್ತು ಡಿಸಿಎಂ ಅವರು ಸುಮಾರು ೧೦೦ ಕೋಟಿಗೂ ಹೆಚ್ಚು ರೂಪಾಯಿ ಹಣ ವೈಟ್ ಟಾಪಿಂಗ್ ಗೆ ಕೊಟ್ಟಿದ್ದಾರೆ.೮-೯ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೀತಿದೆ. ಅದರಲ್ಲಿ ೭ ರಸ್ತೆ ತುಂಬಾ ಚೆನ್ನಾಗಿ ಆಗ್ತಿದೆ.ಅಮ್ಮ ಆಶ್ರಮ ರಸ್ತೆ ಕೂಡ ಕಾಮಗಾರಿ ವ್ಯವಸ್ಥಿತವಾಗಿ ಕೆಲಸ ಆಗ್ತಿದೆ.ಇನ್ನೆರಡು ರಸ್ತೆ ಲೇಟ್ ಆಗ್ತಿದೆ.ಅದಲ್ಲದೇ ರಾಜಕಾಲವೆಗಾಗಿ ೧೩೦ ಕೋಟಿ ಹಣ ನೀಡಿದ್ದಾರೆ.ಮೇನ್ ರಸ್ತೆ ಡ್ಯಾಮೇಜ್ ಸರಿಮಾಡೋದಕ್ಕೆ ೭೫ ಕೋಟಿ ಹಣ ನೀಡಿದ್ದಾರೆ.ಅವರಿಗೆ ಡಿಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು

 

ಎಲ್ಲಾ ಅವರಿಗೆ ಮಾಹಿತಿ ಇದೆ, ಹಂತ ಹಂತವಾಗಿ ಅದಕ್ಕೆ ಚಾಲನೆ ನೀಡೋ ಕೆಲಸ ಮಾಡುತ್ತೇವೆಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಿಟಿ ರೌಂಡ್ಸ್

 

ಬೆಂಗಳೂರು; ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಿಟಿ ರೌಂಡ್ಸ್ ನಡೆಯಿತು. ಈ ವೇಳೆ ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿಯನ್ನು ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಪರಿಶೀಲನೆ ನಡೆಸಿದ್ರು.ಬೆಂಗಳೂರಿನ ವಿವಿಧ ಭಾಗದಲ್ಲಿ ನಡೀತಿರೋ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ್ರುಯ

ಬಳಿಕ ಮಾತನಾಡಿದ  ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಲ್ಲಿ ೧೫೦ ಕಿಮೀ ಕಾಮಗಾರಿ ಆಗ್ತಿದೆ. ೩೦ ವರ್ಷ ಏನೂ ಆಗಬಾರದು. ೧೫೦೦ ಕೋಟಿ ಹೂಡಿಕೆ ಮಾಡ್ತಿದ್ದೇವೆ. ಮಳೆ ಬಂದಿದೆ. ಹೀಗಾಗಿ ಲೇಟ್ ಆಗಿದೆ.ಕ್ವಾಲಿಟಿ ಮೇಂಟೇನ್ ಮಾಡ್ತಿದ್ದೀನಿ. ನನಗೂ ಅರಿವಿದೆ, ನಾನು ಚೆಕ್ ಮಾಡಿದ್ದೀನಿ. ಟೆಕ್ನಿಕಲ್ ಟೀಮ್ ಪರಿಶೀಲನೆ ಮಾಡ್ತಿದೆ ಎಂದರು,

ಎಲ್ಲಾ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿ ನಡೀತಿದೆ. ಇದಕ್ಕೆ ಮೆಂಟೆನ್ಸ್ ಇರೋದಿಲ್ಲ. ೧೭೦೦ ಕೋಟಿ ರಸ್ತೆಗೆ ಬಿದ್ದಿದೆ ಅಲ್ಲವಾ?.ಅದು ಎಷ್ಟು ದಪ್ಪ ಆಗಿರಬೇಕು ಎಂದು ನೋಡಬೇಕು ಅಲ್ಲವೇ. ಒಂದೇ ಸಹ ಎಲ್ಲವೂ ಮುಗೀಬೇಕು. Bwssb,ಟ್ರಾಫಿಕ್ ಪೊಲೀಸರು,ಬಿಬಿಎಂಪಿ ಅಧಿಕಾರಿಗಳು ಬಂದಿದ್ದಾರೆ. ನಾನು ಕ್ವಾಲಿಟಿ ಚೆಕ್ ಮಾಡಿದ್ದೀನಿ, ನೋಡಿದ್ದೇವೆ.ರೀ ಚೆಕ್ ಕೂಡ ಮಾಡುತ್ತೇವೆ ಎಂದರು.

ಬೆಂಗಳೂರು ವಾಹನ ದಟ್ಟಣೆಗೆ ಟನೆಲ್ ರಸ್ತೆ ಪರಿಹಾರವಲ್ಲ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಹಾಗಾದ್ರೆ ಮಹಾರಾಷ್ಟ್ರ ದಲ್ಲಿ ಯಾಕೆ ಟನಲ್ ಮಾಡಿಸ್ತಿದ್ದಾರೆ?.ಅಶ್ವಿನಿ ವೈಷ್ಣವ್ಗ ಗೂ ಟನಲ್ ರಸ್ತೆಗೂ ಏನ್ ಸಂಬಂಧ?. ಕೇಂದ್ರದ ನಿತೀನ್ ಗಡ್ಕರಿ ಕೇಳಿದ್ರೆ ನಡೀತಿತ್ತು ಎಂದು ತಿಳಿಸಿದ್ರು.

ಇನ್ನು ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗಿದ್ರು. ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜೈ ಎಂದು ಡಿಕೆ ಶಿವಕುಮಾರ್ ಅಭಿಮಾನಿಗಳಿಂದ ಘೋಷಣೆ ಕೂಗಿದ್ರು. ಮುಂದಿನ ಸಿಎಂ ಡಿಕೆ ಶಿವಕುಮಾರ್ ಗೆ ಜೈ. ಡಿಕೆ ಬಾಸ್ ಗೆ ಜೈ ಎಂದು ಘೋಷಣೆ ಎಂದಾಗ ಅಭಿಮಾನಿಗಳು, ಬೆಂಬಲಿಗರ ಘೋಷಣೆಗೆ ಡಿಸಿಎಂ ಕೈ ಸನ್ನೆ ಮಾಡಿದರು.

ಇನ್ನು  ಉಲ್ಲಾಳಕ್ಕೆ ಬರ್ತಿದ್ದಂತೆ ಇಲ್ಲೂ ಕೂಡ ಡಿಕೆಶಿ ಪರ ಘೋಷಣೆ ಕೂಗಿ ಹೂ ಗುಚ್ಚ ನೀಡಿ ಕಾರ್ಯಕರ್ತರು  ಸ್ವಾಗತಿಸಿದರು. ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜೈ ಎಂದು ಡಿಕೆ ಪರ ಜೈಕಾರ ಕಾರ್ಯಕರ್ತರು ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಶಿವಕುಮಾರ್ ಇವತ್ತು ಬೆಂಗಳೂರಿನ ೧೫೦ ಕಿಮೀ ಕಾಮಗಾರಿ ನಡೀತಿದೆ. ಎಲ್ಲಾ ಕಡೆ ವಿಸಿಟ್ ಮಾಡುತ್ತಿದ್ದೇವೆ. ಕ್ವಾಲಿಟಿ ಚೆಕ್ ಮಾಡ್ತಿದ್ದೇವೆ, ಶಾಸಕರು ಕ್ವಾಲಿಟಿ ಚೆನ್ನಾಗಿದೆ ಎಂದಿದ್ದಾರೆ.೩೦ ವರ್ಷ ಚೆನ್ನಾಗಿ ರಸ್ತೆ ಇರಬೇಕು ಎಂದು ಹೇಳಿದ್ದಾರೆ.ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಕ್ವಾಲಿಟಿ ಕಾಡೋದಕ್ಕೆ ಹೋಗ್ತಿದ್ದೇವೆ.ಈ ಕ್ಷೇತ್ರದಲ್ಲಿ ೪೦ ಕೋಟಿ ಸ್ಟ್ರಾಮ್ ವಾಟರ್ ವ್ಯವಸ್ಥೆ ಆಗ್ತಿದೆ.ಒಂದೇ ದಿನ ಬದಲಾವಣೆ ಆಗಲ್ಲ, ಪ್ಲಾನಿಂಗ್ ಮಾಡುತ್ತಿದ್ದೇವೆ. ಬೇಸಿಗೆ ಶುರುವಾಗ್ತಿದೆ , ನೀರಿನ‌ ಸಮಸ್ಯೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಅದಕ್ಕೆಲ್ಲಾ ನೀರಿನ ತೊಂದ್ರೆ ಆಗಬಾರದು ಅಂತ ಕಾವೇರಿ ೫ನೇ ಸ್ಟೇಜ್ ಮಾಡಿದ್ದೇವೆ. ಎಲ್ಲರೂ ಕನೆಕ್ಷನ್ ತೆಗೆದುಕೊಳ್ಳಬೇಕು ಎಂದರು.