ಬೆಂಗಳೂರು; ರಾಜ್ಯ ಸರ್ಕಾರ ವಿವಿ ಬಂದ್ ಮಾಡಲು ಹೊರಟಿರುವುದು ಖಂಡನೀಯ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.ಬಿಜೆಪಿ ಮಾಡಿರುವುದನ್ನು ಬಂದ್ ಮಾಡೋದು ಅಂತ ಆದರೆ, ಕಾಂಗ್ರೆಸ್ ಮಾಡಿರುವುದನ್ನು ಬಿಜೆಪಿ ಬಂದ್ ಮಾಡಿರುವುದು ಯಾವತ್ತಾದರೂ ನೋಡಿದ್ದೀರಾ?.ಸರ್ಕಾರದ ಮೊದಲ ಆದ್ಯತೆ ಆರೋಗ್ಯ ಮತ್ತು ಶಿಕ್ಷಣ.ಆರೋಗ್ಯ ಮರೆತಿದ್ದೀರಿ, ಶಿಕ್ಷಣವನ್ನೂ ಬಂದ್ ಮಾಡಲು ಹೊರಟಿದ್ದೀರಾ?ವಿವಿ ಮುಚ್ಚಿ ವಿದ್ಯೆ ಹೇಗೆ ಕೊಡುತ್ತೀರಾ?.ರಾಜಕೀಯ ದುರುದ್ದೇಶಕ್ಕಾಗಿ ಮಾಡಬೇಡಿ.ಕೇಂದ್ರ ಸರ್ಕಾರ ಆರೋಗ್ಯ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ.ನೀವು ಇನ್ನಷ್ಟು ಯುನಿವರ್ಸಿಟಿ ಓಪನ್ ಮಾಡಿ ಆದರೆ, ಓಪನ್ ಮಾಡಿರುವ ಯುನಿವರ್ಸಿಟಿ ಮುಚ್ಚುವ ಕೆಲಸ ಮಾಡಬೇಡಿ.4 ಲಕ್ಷ ಕೋಟಿ ಬಜೆಟ್ ಮಂಡಿಸಲು ಮುಂದಾಗಿರುವವರಿಗೆ ಯುನಿವರ್ಸಿಟಿಗೆ ಹಣ ಕೊಡಲು ಆಗಲ್ವಾ?.ನೀವು ಯಾವುದಕ್ಕೆ ಆದ್ಯತೆ ಕೊಡುತ್ತಿದ್ದಿರಾ ಹೇಳಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ನಾಯಕರು ಬಂದು ಉಚಿತ ಅಕ್ಕಿ ಕೊಡಬಾರದು ಅಂತ ಹೇಳಿದ್ದಾರೆ.ನಿಮ್ಮ ಗ್ಯಾರಂಟಿಗೆ ಹೈಕಮಾಂಡ್ ಬೆಲೆ ಕೊಡುತ್ತಿಲ್ಲ.ಇದು ರಿಯಲ್ ಎಸ್ಟೇಟ್ ಸರ್ಕಾರ ಆಗಿದೆ.ಹಣದ ಕೊರತೆ ಇದ್ರೆ ಮಂತ್ರಿ ಮಂಡಲ ಯಾಕೆ?.ಸಿಎಂ ಸಾಕು, ಎಲ್ಲರೂ ರಾಜೀನಾಮೆ ಕೊಡಿ.ಆ ಹಣದಲ್ಲಿ ಶಿಕ್ಷಣ ಕೊಡಿಸೋಣ.ಛಲವಾದಿ ದಲಿತರು ಅವರ ತಲೆ ಮೇಲೆ ಚಡ್ಡಿ ಹೊರೆಸಿದ್ರು ಅಂತ ಹೇಳಿದರು.ಚಡ್ಡಿ ಬೆಲೆ ನಿಮಗೆ ಗೊತ್ತಿಲ್ಲ, ಮನುಷ್ಯನ ಮಾನ ಮಾರ್ಯಾದೆ ಉಳಿಸುವುದು ಚಡ್ಡಿ ಎಂದಿದ್ದಾರೆ.
ಛಲವಾದಿ ದಲಿತರು, ಅವರ ತಲೆ ಮೇಲೆ ಚಡ್ಡಿ ಹೊರೆಸಿದರು ಅಂತ ಕಾಂಗ್ರೆಸ್ ನವರು ಹೇಳಿದರು.ನಾನು ನಿಮಗೆಲ್ಲಾ ಚಡ್ಡಿ ಕೊಡಲು ತಲೆ ಮೇಲೆ ಹೊತ್ತೆ.ದೆಹಲಿಯಲ್ಲಿ ಜನ ಕಾಂಗ್ರೆಸ್ ನವರ ಬಟ್ಟೆ ಕಳಚಿದರು.ನಾನು ಕೊಟ್ಟ ಚಡ್ಡಿ ಒಂದೇ ಆಗ ಅವರ ಬಳಿ ಉಳಿದಿದ್ದು ಎಂದು ಲೇವಡಿ ಮಾಡಿದ್ದಾರೆ.
ಕೈಲಾಗದ ಹೇಡಿಗಳು ಮೈ ಪರಚಿಕೊಂಡಂತೆ ಸರ್ಕಾರದ ಕೆಲಸ ಆಗಿದೆ: ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕ ಡಾ.ಸಿ.ಎನ್. ಅಶ್ವಥ ನಾರಾಯಣ
ಬೆಂಗಳೂರು; ಕೈಲಾಗದ ಹೇಡಿಗಳು ಮೈ ಪರಚಿಕೊಂಡಂತೆ ಸರ್ಕಾರದ ಕೆಲಸ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಶಾಸಕ ಡಾ.ಸಿ.ಎನ್. ಅಶ್ವಥ ನಾರಾಯಣ ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ವಿವಿಗಳನ್ನು ಮುಚ್ಚುತ್ತಿರುವುದು ರಾಜ್ಯದ ಪ್ರಗತಿಗೆ ಮಾರಕ.ಮಲತಾಯಿ ಧೋರಣೆ ಇಟ್ಟುಕೊಂಡು ಸರ್ಕಾರ ಈ ತೀರ್ಮಾನ ಮಾಡಿದೆ.ಶಿಕ್ಷಣ ವಿರೋಧಿ ನಡೆ ಇದು, ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಕ್ಯಾಬಿನೆಟ್ ಸಬ್ ಕಮಿಟಿ 9 ವಿವಿಗಳಲ್ಲಿ 8 ಮುಚ್ಚುತ್ತೇವೆ ಅಂತ ಹೇಳಿದ್ದಾರೆ.ರಾಜ್ಯ ಮತ್ತು ಯುವಕರ ಹಿತಕ್ಕೆ ವಿರುದ್ಧಗಾಗಿ ಸಬ್ ಕಮಿಟಿ ನಿರ್ಣಯ ಇದೆ.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯದಂತೆ ಕರ್ನಾಟಕ ರೂಪಿಸಲು ಹೆಜ್ಜೆ ಇಡುತ್ತೇವೆ ಅಂತ ಬಜೆಟ್ ನಲ್ಲಿ ಹೇಳಿದ್ದರು.ಹಲವಾರು ವಚನ ಹೇಳಿದ್ದರು, ಈಗ ಇವರಿಗೆ ಮನಸ್ಸು ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
21ನೇ ಶತಮಾನ ಜ್ಞಾನ ಆಧಾರಿತ ಸಮಾಜವಾಗಿದೆ.ಜಿಲ್ಲೆಯಲ್ಲಿ ಹೋದ ತಕ್ಷಣ ನೋಡುವುದು ವಿಶ್ವವಿದ್ಯಾನಿಲಯ ಮತ್ತು ವಿದ್ಯಾರ್ಹತೆ ಬಗ್ಗೆ.ಹಣ ಇಲ್ಲ ಅಂತ ಹೇಳಿ ವಿಶ್ವವಿದ್ಯಾನಿಲಯ ಮುಚ್ಚಲು ಹೋಗುತ್ತಿದ್ದಾರೆ. ಹೊಸದಾಗಿ ಹುದ್ದೆ ಮತ್ತು ಹಣ ಕೊಡಬೇಕಾಗಿಲ್ಲ.ಎರಡು ಸಮಿತಿ ಮಾಡಿ ಹುದ್ದೆ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಈಗಾಗಲೇ ನಿರ್ಧಾರ ಮಾಡಿದ್ದಾರೆ.ಕೈಲಾಗದ ಹೇಡಿಗಳು ಮೈ ಪರಚಿಕೊಂಡಂತೆ ಸರ್ಕಾರದ ಕೆಲಸ ಆಗಿದೆ. ಈಗ ಯುನಿವರ್ಸಿಟಿಗೆ ಕೊಡಲು ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ.ವಿದ್ಯಾರ್ಥಿಗಳು ರಾಜ್ಯದಲ್ಲಿ ಸಮಾನತೆ ಮತ್ತು ಹೇಗೆ ಭವಿಷ್ಯ ರೂಪಿಸಿಕೊಳ್ಳುತ್ತಾರೆ?.ವಿಶ್ವವಿದ್ಯಾಲಯಗಳು ಸರ್ಕಾರದ ಅಂಗಡಿಗಳಾ? .ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ.ವಿಶ್ವವಿದ್ಯಾಲಯ ಬಂದ್ ಮಾಡಬೇಕು ಅಂತ ಅಧಿಕಾರಕ್ಕೆ ಬಂದ ಮೊದಲ ದಿನವೇ ಹೇಳಿದ್ದಾರೆ.ಯಾವುದೇ ವರದಿ ಇಲ್ಲದೇ ಈ ನಿಲುವು ತೆಗೆದುಕೊಳ್ಳುತ್ತಿದ್ದಾರೆ.ಹಲವಾರು ಯುನಿವರ್ಸಿಟಿ ಕಾಂಗ್ರೆಸ್ ಅವಧಿಯಲ್ಲೇ ಆಗಿರುವುದು.ಇವರು ದುರುದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.ಸರ್ಕಾರ ಪರಿಶೀಲನಾ ಆಯೋಗ ರಚನೆ ಮಾಡಲಿ ಎಂದಿದ್ದಾರೆ.











