ಮನೆ Latest News ಸಂಗಮೇಶ್ ಪುತ್ರ ಬೆದರಿಕೆ ಹಾಕಿರೋದು ಗೊತ್ತಾದ್ರೆ ಅವರ ಮೇಲೂ ಆ್ಯಕ್ಷನ್ ತಗೋತೇವೆ: ಗೃಹ ಸಚಿವ ಪರಮೇಶ್ವರ್...

ಸಂಗಮೇಶ್ ಪುತ್ರ ಬೆದರಿಕೆ ಹಾಕಿರೋದು ಗೊತ್ತಾದ್ರೆ ಅವರ ಮೇಲೂ ಆ್ಯಕ್ಷನ್ ತಗೋತೇವೆ: ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಸಂಗಮೇಶ್ ಪುತ್ರ ಬೆದರಿಕೆ ಹಾಕಿರೋದು ಗೊತ್ತಾದ್ರೆ ಅವರ ಮೇಲೂ ಆ್ಯಕ್ಷನ್ ತಗೋತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಮಹಿಳಾ ಅಧಿಕಾರಿಗೆ ಶಾಸಕ ಸಂಗಮೇಶ್ ಪುತ್ರ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಂಗಮೇಶ್ ಪುತ್ರ ಬೆದರಿಕೆ ಹಾಕಿರೋದು ಗೊತ್ತಾದ್ರೆ ಅವರ ಮೇಲೂ ಆ್ಯಕ್ಷನ್ ತಗೋತೇವೆ. ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ಆಗಿದೆ.ಆದಷ್ಟು ಬೇಗ ವರದಿ ಬರಲಿದೆ, ಕ್ರಮ ಆಗುತ್ತೆ. ಉದಯಗಿರಿ ಪೊಲೀಸ್ ಠಾಣೆ ಕೇಸ್ ವಿಚಾರವಾಗಿಯೂ ಕಠಿಣ‌ ಕ್ರಮ ತಗೋತೇವೆ‌.ನಮಗೆ ಸಿಕ್ಕಿರೋ ವಿಡಿಯೋ ಫೂಟೇಜ್ ಪ್ರಕಾರ ಆ್ಯಕ್ಷನ್‌ ತಗೋತೇವೆ.ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಕೇಸ್ ಆಗಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಬಾಗಪ್ಪ ಹರಿಜನ ಹತ್ಯೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದರ ಬಗ್ಗೆ ಡೀಟೆಲ್ಸ್ ಗೊತ್ತಿಲ್ಲ.ಅವರ ಮೇಲೆ‌ ಅನೇಕ ಬಾರಿ ಪ್ರಯತ್ನ ವಾಗಿತ್ತು.ಅವರ ಗುಂಪಲ್ಲೇ ಏನೋ ಆಗಿತ್ತು ಎಂದು ಮೇಲ್ನೋಟಕ್ಕೆ ಹೇಳ್ತಾರೆ.ಇನ್ವೆಷ್ಟಿಗೇಷನ್ ಮಾಡ್ತಾರೆ,ಇನ್ನು ಯಾರನ್ನೂ ಅರೆಸ್ಟ್ ಮಾಡಿಲ್ಲ. ಮಾಡ್ತಾರೆ. ಬಹಳ ಸಿರೀಯಸ್ ಆಗಿ ತೆಗೆದಯಕೊಳ್ತೇವೆ.ಹಳೆಯ ವೈಷಮ್ಯ ಇದೆ ಅವನು ರೌಡಿ ಎನ್ನೋದು ಮೋದಲಿನಿಂದಲೂ ಗೊತ್ತಿದೆ ಎಂದರು.

ದಲಿತ ಸಮಾವೇಶ ವಿಚಾರ ರಾಜಣ್ಣ ಅವರನ್ನ ಕೇಳ್ಬೇಕು.ಅವರ ಹೇಳಿಕೆಗೆ ನಾನೇನೆ ಉತ್ತರ ಕೊಡಬೇಕು.ಅವರ ಹೇಳಿಕೆಗೆ ನಮ್ಮ ಸ್ಟೇಟ್ಮೆಂಟ್ ಕೇಳ್ತೀರಿ.. ಅದಕ್ಕೆ‌ ನಿಮ್ಮದು ಒಂದು ಸೇರಿಸ್ತೀರಿ.ಇದನ್ನ ದಯವಿಟ್ಟು ಮಾಡಬೇಡಿ.ದೆಹಲಿಗೆ ಹೋದರೆ ಎಲ್ಲರಿಗೂ ಗೊತ್ತಾಗುತ್ತೆ .ನಾವು ಹೋದಾಗ ಎಐಸಿಸಿಗೆ ಹೋಗೆ ಬರ್ತೇವೆ.ರಾಜಣ್ಣ ದೊಡ್ಡ ನಾಯಕ, ನಾವು ಕಾರ್ಯಕರ್ತರು.ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು ದೊಡ್ಡ ನಾಯಕರು ಸಣ್ಣ ನಾಯಕರು ಅನ್ನೋದು ಬೇರೆ.ನಾವು ಕುಬೇರರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಪೊಲೀಸರು ಕಾರ್ಯವೈಖರಿಗೆ ಬಗ್ಗೆ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿದ ಅದರ ಬಗ್ಗೆ ನಾನು ಆಮೇಲೆ ಮಾತನಾಡ್ತಿನಿ.ನಮ್ಮ ಅಭಿವೃದ್ಧಿ ಕೆಲಸಗಳಗಾಗಿ ಬಂದಿದ್ದೇನೆ.ಸುರ್ಜೆವಾಲ ಅವರನ್ನು ಭೇಟಿ ಮಾಡ್ತಿನಿ.ಯಾರ್ಯಾರನ್ನು ಭೇಟಿ ಮಾಡ್ತಿನಿ ಹೇಳಿ ಹೊಗ್ತೀನಿ ಎಂದಿದ್ದಾರೆ.