ಮನೆ Latest News ರಾಹುಲ್ ಗಾಂಧಿಗೂ ಕೂಡ ಹಿಂದೂತ್ವದ ಬಗ್ಗೆ, ಹಿಂದುಗಳ ಮೇಲೆ ಗೌರವ ಇದೆ; ಕೈಗಾರಿಕಾ ಸಚಿವ ಎಂ...

ರಾಹುಲ್ ಗಾಂಧಿಗೂ ಕೂಡ ಹಿಂದೂತ್ವದ ಬಗ್ಗೆ, ಹಿಂದುಗಳ ಮೇಲೆ ಗೌರವ ಇದೆ; ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿಕೆ

0

 

ಬೆಂಗಳೂರು; ರಾಹುಲ್ ಗಾಂಧಿಗೂ ಕೂಡ ಹಿಂದೂತ್ವದ ಬಗ್ಗೆ, ಹಿಂದುಗಳ ಮೇಲೆ ಗೌರವ ಇದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಹುಲ್ ಗಾಂಧಿಯನ್ನ ಹಿಂದೂ ಧರ್ಮದಿಂದ ಹಿಂದೂ ಸಂಸತ್ ಉಚ್ಚಾಟನೆ ಮಾಡುತ್ತೇವೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿ ಹಿಂದೂ ಅಲ್ವಾ?.ಇದು ರಾಜಕೀಯವಾದದ್ದು.ಇದಕ್ಕೆ ಯಾವುದೇ ಬೆಲೆ ಇಲ್ಲ. ರಾಹುಲ್ ಗಾಂಧಿಗೂ ಕೂಡ ಹಿಂದೂತ್ವದ ಬಗ್ಗೆ, ಹಿಂದುಗಳ ಮೇಲೆ ಗೌರವ ಇದೆ.ಎಲ್ಲಾ ದೇವಸ್ಥಾನಗಳಿಗೆ ಅವರಾಗಲಿ ಪ್ರಿಯಾಂಕಾ ಗಾಂಧಿ ಆಗಲಿ ಹೋಗ್ತಾರೆ. ಕಾಶಿಯಿಂದ ಹಿಡಿದು ಎಲ್ಲಾ ದೇವಸ್ಥಾನಕ್ಕೆ ಹೋಗ್ತಾರೆ.ಪಬ್ಲಿಕ್ ಆಗಿ ತೋರಿಸಿಕೊಳ್ಳೊದಿರುತ್ತಾ?.ಕೆಲವರು ರಾಜಕೀಯಕ್ಕಾಗಿ ತೋರಿಸಿಕೊಳ್ತಾರೆ. ಆ ಧಾರ್ಮಿಕ ಪರಿಷತ್‌ಗೆ ಬೆಲೆ ಇಲ್ಲ ಎಂದರು.

ಮನು ಸ್ಮೃತಿ ಮಾನವೀಯತೆ ವಿರುದ್ಧ ಇದೆ. ಹೀಗಾಗಿ ಎಲ್ಲರೂ ಇದರ ಬಗ್ಗೆ ಮಾತಾಡ್ತಾರೆ. ಅಣ್ಣ ಬಸವಣ್ಣ ಶ್ರೇಷ್ಠ ಬ್ರಾಹ್ಮಣ ರಾಗಿದ್ದವರು.ಹಿಂದೂ ಧರ್ಮದ ಕೆಲವೊಂದು ಅನಿಷ್ಟ ಪದ್ದತಿ ಮೂಡ ನಂಬಿಕೆ ಬಗ್ಗೆ ಹೋರಾಡಿದವರು.ಇದು ತಪ್ಪಾ ,ಮನುಸ್ಮೃತಿಯ ತಪ್ಪನ್ನ ತಿದ್ದಿಕೊಳ್ಳಬೇಕು.ಇದರ ಬಗ್ಗೆ ಮಾತಾಡೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ತೆರಿಗೆ ಹಂಚಿಕೆ ಬಗ್ಗೆ ಪಿಯೂಷ್ ಗೋಯಲ್ ಹೇಳಿಕೆಗೆ ರಿಯ್ಯಾಕ್ಟ್ ಮಾಡಿದ ಅವರು ಅವರು ತಮ್ಮ ಅಭಿಪ್ರಾಯ ಹೇಳಿರಬಹುದು. ಅಭಿವೃದ್ಧಿ ಹೊಂದಿರುವವರು ನಾವು ಕೊಡುಗೆ ಕೊಡ್ತಿದ್ದೇವೆ.ಹೀಗಾಗಿ ನಮ್ನ ಪಾಲಿನ ಹಕ್ಕನ್ನ ಕೇಳೋದು ಸ್ವಾಭಾವಿಕ ಇದೆ.ಅಷ್ಟೇ ಅಲ್ಲಾ ಐಟಿ ಯಲ್ಲಿ ಎಷ್ಟು ಕೊಡುಗೆ ಇದೆ ನಮ್ಮದು. ಐಡಿ ಕೊಡುಗೆಯಲ್ಲಿ ನಮಗೆ ಪಾಲು ಸಿಗುತ್ತಾ .ನಾಲ್ಕುವರೆ ಲಕ್ಷ ಕೋಟಿ ಐಟಿ ಕೊಡುಗೆ ಇದೆ.ದಕ್ಷಿಣದ ರಾಜ್ಯಗಳು ಒಳ್ಳೆಯ ರೀತಿಯ ಬೆಳವಣಿಗೆ ಮಾಡಿದ್ದೇವೆ.ಫ್ಯಾಮಿಲಿ ಪ್ಲಾನಿಂಗ್ ಅಳವಡಿಸಿಕೊಂಡಿದ್ದೇವೆ. ಎಲ್ಲಾವನ್ನ ಅಳವಡಿಸಿಕೊಂಡ ಪ್ರಗತಿ ಪರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಬೇಕು .ಕೆಲವೊಂದು ರಾಜ್ಯ ಇದನ್ನೆಲ್ಲಾ ಫಾಲೋ ಮಾಡಲ್ಲ.ನಮ್ಮ ಹಣ ಅವರಿಗೆ ಕೊಟ್ಟರೆ ಈ ರಾಜ್ಯವೂ ಆ ರೀತಿಯಾಗುತ್ತೆ ಎಂದು ಹೇಳಿದ್ರು.

ದಲಿತ ಸಚಿವರ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದು ಇಲ್ಲ ರೀ.. ಮಾಧ್ಯಮಗಳ ಸೃಷ್ಟಿ ಎಂದಷ್ಟೇ ಎಂದು ಮಾಧ್ಯಮಗಳ ಮೇಲೆ ಎತ್ತಾಕಿದ್ರು.