ಮನೆ Latest News ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಎಂ ರೇವಣ್ಣ ಹಾಗೂ ಮಾಜಿ ಸಂಸದ ಉಗ್ರಪ್ಪ ಜಂಟಿ ಸುದ್ದಿಗೋಷ್ಠಿ

ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಎಂ ರೇವಣ್ಣ ಹಾಗೂ ಮಾಜಿ ಸಂಸದ ಉಗ್ರಪ್ಪ ಜಂಟಿ ಸುದ್ದಿಗೋಷ್ಠಿ

0

ಬೆಂಗಳೂರು; ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಎಂ ರೇವಣ್ಣ ಹಾಗೂ ಮಾಜಿ ಸಂಸದ ಉಗ್ರಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮೈಕ್ರೋ ಫೈನಾನ್ಸ್ ಬಿಲ್ ವಿಚಾರದಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ಹೆಚ್.ಎಂ ರೇವಣ್ಣ ಅಸಮಾಧಾನ ಹೊರ ಹಾಕಿದ್ರು.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಹೆಚ್.ಎಂ ರೇವಣ್ಣ ರಿಸರ್ವ್ ಬ್ಯಾಂಕ್ ಕಾನೂನು ಅಡಿಯಲ್ಲಿ ಸುಗ್ರೀವಾಜ್ಞೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಸುಗ್ರಿವಾಜ್ಞೆ ವಾಪಸ್ ಕಳುಹಿಸಿದ್ದಾರೆ. ಮೈಕ್ರೋ ಫೈನಾನ್ಸ್ ನಿಂದ ಸಾವು ನೋವುಗಳು ಜಾಸ್ತಿ ಆಗಿದೆ. ಈ ಹಾವಳಿಯನ್ನು ತಡೆಯಲು ಸುಗ್ರೀವಾಜ್ಞೆ ಬಹಳ ಮುಖ್ಯ ಆಗಿತ್ತು.ಆದರೆ ಸುಗ್ರಿವಾಜ್ಞೆ ಬಿಲ್ ವಾಪಸ್ ಮಾಡಿದ್ದು ಸರಿಯಲ್ಲ ಎಂದರು.

ಮಾಜಿ ಸಂಸದ ಉಗ್ರಪ್ಪ ಮಾತನಾಡಿ 2022ರಲ್ಲಿ RBI ಮೈಕ್ರೋ ಫೈನಾನ್ಸ್ ನಿರ್ದೇಶನ ಬಿಡುಗಡೆ ಮಾಡಿದ್ದಾರೆ.ವರ್ಷಕ್ಕೆ 3 ಲಕ್ಷ ಆದಾಯ, ತಿಂಗಳಿಗೆ 25 ಸಾವಿರ ಇರುವವರು ಮೈಕ್ರೋ ಫೈನಾನ್ಸ್ ಗೆ ಅರ್ಹರು.ಯಾರಿಗೂ ತೊಂದರೆ ಕೊಡಬಾರದು ಅಂತ ಉಲ್ಲೇಖ ಮಾಡಲಾಗಿದೆ.ಹಲವು ಷರತ್ತುಗಳನ್ನ ವಿಧಿಸಿದ್ರೂ, ಕಿರುಕುಳ ನೀಡಲಾಗುತ್ತಿದೆ.RBI ಪ್ರಕಾರ ನೋಂದಣಿಯಾಗಿರುವುದು ಅಂದಾಜು 200 ಏಜೆನ್ಸಿ ಮಾತ್ರ ಇವೆ.ಮನಿ ಲ್ಯಾಂಡರಿಂಗ್ ಆಗುವ ಪರಿಸ್ಥಿತಿ ರಾಜ್ಯದಲ್ಲಿ ನೋಡ್ತಾ ಇದ್ದೀವಿ.1 ಸಾವಿರ ಸಹಕಾರಿ ಸೊಸೈಟಿ, 2 ಸಾವಿರಕ್ಕೂ ಹೆಚ್ಚು ಸ್ವಯಂ ಸಾಲ ಕೊಡಲು ಸಂಸ್ಥೆಗಳಿವೆ. 39% ವರೆಗೆ ಬಡ್ಡಿ ವಸೂಲಿ ಮಾಡುತ್ತಿವೆ.ಅಧಿಕೃತ ಮತ್ತು ಅನಧಿಕೃತವಾಗಿ ಎರಡೂ ರೀತಿಯಲ್ಲೂ ಹಣ ನೀಡುತ್ತಿದ್ದಾರೆ.1 ಲಕ್ಷ 10 ಸಾವಿರ ಕೋಟಿ ರೂಮ ಹಣ ಸಾಲ ವಹಿವಾಟಿದೆ.60 ಸಾವಿರ ಕೋಟಿಯಷ್ಟು ನೋಂದಣಿ ಏಜೆನ್ಸಿಗಳು ಸಾಲ ಕೊಟ್ಟಿವೆ.ಕಾನೂನು ನಿಯಮ ಪಾಲಿಸದೆ ಬಾಕಿ 60 ಸಾವಿರ ಕೋಟಿ ರೂ. ಸಾಲ ನೀಡಿದ್ದಾರೆ ಎಂದರು.

ಜನರ ಜೀವವನ್ನ ರಕ್ಷಣೆ ಮಾಡುವುದು ಕೇಂದ್ರ, ರಾಜ್ಯ ಸರ್ಕಾರದ ಕೆಲಸ. ರಾಜ್ಯಪಾಲರು ಆರ್ಟಿಕಲ್ 58ರ ಪ್ರಕಾರ ಪ್ರಮಾಣವಚನ ತೆಗೆದುಕೊಳ್ತಾರೆ. ಈ‌ ಆರ್ಟಿಕಲ್ ಬಗ್ಗೆ ರಾಜ್ಯಪಾಲರ ಗಮನಕ್ಕೆ ಇಲ್ವಾ ?.ಸಂವಿಧಾನದ ಆಶಯಗಳ ಮೇಲೆ‌ ಸರ್ಕಾರ ಕೆಲಸ ಮಾಡುತ್ತಿದೆ. 1975ರಲ್ಲಿ ದೇವರಾಜು ಅರಸು ಕಾಲದಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತಂದ್ರು.ಅದೇ ವರ್ಷ ತಿದ್ದುಪಡಿಗಳನ್ನ‌ ತರಲಾಗುತ್ತದೆ.ಆಗ ರಾಜ್ಯಪಾಲರ ಅದಕ್ಕೆ ಅಂಕಿತ ಹಾಕುತ್ತಾರೆ.ಸಣ್ಣ, ಭೂಮಿ‌ ಇಲ್ಲದ ಸಾಮಾನ್ಯ ಜನರಿಗೆ ಋಣಮುಕ್ತ ಕಾಯ್ದೆ ಜಾರಿಗೆ ತಂದ್ರು.1976ರಲ್ಲಿ ಅಂತಿಮವಾಗಿ ತಿದ್ದುಪಡಿಯ ಮೂಲಕ ಜಾರಿ ಮಾಡಲಾಗುತ್ತದೆ ಎಂದರು.

ಬಿಜೆಪಿಯವರು ರಾಜ್ಯಪಾಲರ ಮೇಲೆ ಒತ್ತಡ ತಂದಿದ್ದಾರೆ. ತಾಕತ್ತು, ಧಮ್ಮು ಬಿಜೆಪಿಯವರಿಗೆ ಇಲ್ವಾ ?.ಬಡವರ ಜೀವ ತೆಗೆಯುವವರ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದಿದೆ.ಅನಧಿಕೃತವಾಗಿ ಸಾಲ ಕೊಟ್ಟಿರುವವರಿಗೆ ವಾಪಾಸ್ ನೀಡುವಂತಿಲ್ಲ ಅಂತ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಗರಿಷ್ಠ ಅಂದರೆ 2 ಲಕ್ಷದವರೆಗೆ ಸಾಲ ಕೊಡಬಹುದು.ಆದರೆ ಕಾನೂನುಬಾಹಿರವಾಗಿ 3-4 ಲಕ್ಷ ರೂವರೆಗೆ ಕೊಡುತ್ತಿದ್ದಾರೆ.ಅಧಿವೇಶನ ನಡೆಯದ ಸಂದರ್ಭದಲ್ಲಿ ಸರ್ಕಾರಕ್ಕೆ ಸುಗ್ರೀವಾಜ್ಞೆ ಜಾರಿಗೆ ಅವಕಾಶ ಇದೆ.ಸಲಹೆಗಳ ಆಧಾರದ ಮೇಲೆ ರಾಜ್ಯಪಾಲರ ಸಹಿ ಹಾಕುತ್ತಾರೆ.ಜನಪರ ಸುಗ್ರೀವಾಜ್ಞೆ ವಾಪಾಸ್ ಕಳುಹಿಸಿದ್ದಾರೆ. ರಾಜ್ಯಪಾಲರ ಒತ್ತಡಕ್ಕೆ ಮಣಿದಿದ್ದಾರೆ. ಫೈನಾನ್ಸ್ ಕಂಪನಿಗಳ ಮೇಲೆ ರಾಜ್ಯಪಾಲರ ಒಡಂಬಡಿಕೆ ಇದೆ.ರಾಜ್ಯಪಾಲರ ಮೇಲೆ ಗೌರವ ಇದೆ, ಈ ರೀತಿ ಯಾಕೆ ಮಾಡಿದ್ರಿ.ನಿಮಗೆ ಮನುಷ್ಯತ್ವಾ ಇದ್ಯಾ? ಸಂವಿಧಾನ ಆಶಯಗಳ ಮೇಲೆ ನಂಬಿಕೆ ಇದ್ಯಾ?.ಇದು ನಿಮ್ಮ ಜವಾಬ್ದಾರಿ ಬಡ ಜನರ ರಕ್ಷಣೆ ನಿಮ್ಮ ಕೆಲಸ.ಸಂವಿಧಾನ ವಿರೋಧಿ, ಬಡವರ ವಿರೋಧಿ ಅಕ್ಷಮ್ಯ ಅಪರಾಧ ಎಂದು ತಿಳಿಸಿದ್ರು.

ಕೂಡಲೇ ರಾಜ್ಯಪಾಲರ ಸುಗ್ರೀವಾಜ್ಞೆ ಸಹಿ ಹಾಕಬೇಕು.ಮಾನ ಮರ್ಯಾದೆ ಉಳಿಸುವ ಕೆಲಸ ಮಾಡ್ಬೇಕು.ಇಲ್ಲವಾದ್ರೆ ಸಾವು ನೋವುಗಳಿಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಕಾರಣವಾಗುತ್ತದೆ.ರೈತರು, ಬಡವರ ಬಗ್ಗೆ ಬದ್ದತೆ ಇದ್ದರೆ ರಾಜ್ಯಪಾಲರಿಗೆ ಸಲಹೆ ನೀಡಿ.ಕೂಡಲೇ ಸುಗ್ರೀವಾಜ್ಞೆ ಜಾರಿಗೆ ಬಿಜೆಪಿಯವರು ಮನವಿ ಮಾಡಲಿ.ಅಧಿಕೃತ ಹಾಗೂ ಅನಧಿಕೃತವಾಗಿ 69 ಲಕ್ಷ ಜನ ಸಾಲ ತೆಗೆದುಕೊಂಡಿದ್ದಾರೆ.ಬಡ್ಡಿ, ಮೀಟರ್ ಬಡ್ಡಿ, ಚಕ್ರ ಬಡ್ಡಿ‌ ವಿಧಿಸುತ್ತಿದ್ದಾರೆ.ಇದನ್ನ ತಡೆಯುವ ಜವಾಬ್ದಾರಿ ರಾಜ್ಯಪಾಲರ ಮೇಲಿದೆ.ಕಾನೂನು, ಸಂವಿಧಾನದ ಚೌಕಟ್ಟಿನ ಕೆಲಸ ಮಾಡ್ಬೇಕು ಎಂದ್ರು.

ರಾಜ್ಯಪಾಲರ ಸ್ಪಷ್ಟನೆ ಕೇಳಲಿ, ಬೇಡ ಅನ್ನೊಲ್ಲ. ಆದರೆ ಜನಪರವಾದ ಕಾನೂನನ್ನ ಜಾರಿ ಮಾಡ್ಬೇಕು. ಆಸ್ತಿ ಪಾಸ್ತಿ ರಕ್ಷಣೆ ರಾಜ್ಯಪಾಲರು ಸರ್ಕಾರದ ಜವಾಬ್ದಾರಿ ಅಲ್ವಾ ?.ಸಂವಿಧಾನ ಬಾಹಿರವಾಗಿ ಸರ್ಕಾರ ಕೇಳಿದ್ಯಾ?.ಉದ್ಯಮಿಗಳ ಸಾಲ ಮನ್ನಾ ಮಾಡ್ತಾರೆ.50 ಲಕ್ಷ 66 ಸಾವಿರ ಕೋಟಿ ಬಜೆಟ್ ಮಂಡನೆ ಮಾಡ್ತಾರೆ.ಅದರಲ್ಲಿ ಏನಾದ್ರೂ ಘೋಷಣೆ ಮಾಡಿದ್ರಾ?.ಕಾಲಹರದ ಪ್ರವೃತ್ತಿಯನ್ನ ರಾಜ್ಯಪಾಲರು ತೋರಿದ್ದಾರೆ.ಪೂರ್ವಾಶ್ರಮದ ರಾಜಕೀಯ ಬೆಳವಣಿಗೆಯಿಂದ ಹೀಗೆ ಮಾಡಿದ್ದಾರೆ.ಬಡವರ ವಿಚಾರದಲ್ಲಿ ರಾಜಕಾರಣ ಮಾಡ್ಬೇಕು ಎಂದು ತಿಳಿಸಿದ್ರು.

69 ಲಕ್ಷ ಕುಟುಂಬಗಳು ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದಾರೆ.ಸಂವಿಧಾನದ ಬಗ್ಗೆ ಗೌರವ ಇದ್ರೆ ವರ್ಚಸ್ಸು ಬಳಸಿ ಜಾರಿ ಮಾಡಿ. ಮೂರು ಬಗೆಯ ಏಜೆನ್ಸಿಗಳಿವೆ.ಅನಧಿಕೃತವಾಗಿ ಸಾಲ ಕೊಟ್ಟವನಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡ್ಬೇಕಾ?. ಅಂತವರಿಗೆ ಶಿಕ್ಷೆ ಕೊಡುವುದರಲ್ಲಿ ತಪ್ಪೇನಿದೆ?.ಸಂವಿಧಾನ ಮೀರಿ‌ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಬಿಜೆಪಿ, ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಇದ್ದಿದಿದ್ರೆ ಸುಗ್ರೀವಾಜ್ಞೆ ಜಾರಿಗೆ ಅನುಮತಿ ನೀಡ್ತಾ ಇದ್ರು ಎಂದ್ರು.