ಬೆಂಗಳೂರು: ಡಿ ಕೆ ಶಿ ಕುಂಭ ಮೇಳಕ್ಕೆ ಹೋಗೋ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮಾಡಿರುವ ಪಾಪಗಳನ್ನ ತೊಳೆದುಕೊಳ್ಳಲು ಕುಂಬಕ್ಕೆ ಡಿ ಕೆ ಹೋಗ್ತಿದ್ದಾರೆ ಎಂಬ ಟ್ವೀಟ್ ಗೆ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.ವಿಪಕ್ಷ ನಾಯಕರಾಗಿ ಅವರು ನನ್ನ ಬಗ್ಗೆ ಮಾತನಾಡಿದ್ರೆ ಅವರ ಪಕ್ಷದಲ್ಲಿ ಗೌರವ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ನೂ ಬೇಕಾದರು ಯಾರು ಬೇಕಾದರೂ ಮಾತಾಡಲು ಇದು ನಮ್ಮ ಧರ್ಮ, ಕರ್ಮ , ನಮ್ಮ ಆಚಾರ ನಮ್ಮ ವಿಚಾರ ನಮ್ಮ ನಂಬಿಕೆ, ಅರ್ಥವಾದಿತಾ? ಎಂದು ಪ್ರಶ್ನಿಸಿದ್ದಾರೆ.
ಗಂಗೆ ಆಗಲಿ, ಕಾವೇರಿ ಆಗಲಿ ಕೃಷ್ಣ ಬ್ರಹ್ಮಪುತ್ರ ಯಾರ ಸ್ವತ್ತು ಇಲ್ಲ.ಈ ನೀರಿಗೆ ಆಕಾರ ಬಣ್ಣ ಟೇಸ್ಟ್ ಇಲ್ಲ.ಒಬ್ಬೊಬ್ಬರು ಅಶೋಕ್ ಅಂತ ಯಾಕೆ ಹೆಸರು ಇಟ್ಟುಕೊಂಡಿದ್ದಾರೆ.ಕಲ್ಲು ಅಂತ ಇಟ್ಟುಕೊಳ್ಳಬೇಕಿತ್ತು ಅಲ್ಲವೇ?.ಕಲ್ಲು ಮಣ್ಣು ಅಂತ ಇಟ್ಟುಕೊಳ್ಳಬಹುದಿತ್ತು, ಯಾರ್ಯಾರು ಏನೋನೇ ಹೇಳ್ತಾರೆ.ಅವರಿಗೆ ಏನ್ ಹೆಚ್ಚು ಕಡಿಮೆ ಆಗಿದೆ ಗೊತ್ತಿಲ್ಲ, ಏನೋ ಪ್ರಾಬ್ಲಂ ಆಗಿದೆ ಅನ್ಸುತ್ತೆ.ನನ್ನ ವೈಯಕ್ತಿಕ ನಂಬಿಕೆ ಬಗ್ಗೆ ಮಾತಾಡೋಕೆ ಯಾರಿಗೂ ಹಕ್ಕಿಲ್ಲ ಎಂದಿದ್ದಾರೆ.ಇದು ನನ್ನ ನಂಬಿಕೆ, ಭಕ್ತಿ ಅಂತ ನನಗೆ ಬಿಟ್ಟಿದ್ದು.ಅವರಿಗೆ ಏನ್ ಪ್ರಾಬ್ಲಮಂ ಇದೆ ಗೊತ್ತಿಲ್ಲ, ಟ್ವೀಟ್ ಆದರೂ, ಭಾಷಣ ಆದರೂ ಮಾಡಲಿ ನನಗೆ ಗೊತ್ತಿಲ್ಲ.ಅವರಿಗೆ ಉತ್ತರ ಕೋಡೋಕೆ ನನಗೆ ಇಷ್ಟವಿಲ್ಲ.ನನ್ನ ಹೆಸರು ತೆಗೆದುಕೊಂಡರೆ ಅವರಿಗೆ ಮಾರ್ಕೆಟ್, ಅವರಿಗೆ ನಿದ್ದೆಯೂ ಬರೋದಿಲ್ಲ, ಶಕ್ತಿ, ಉತ್ಸಾಗ ಹುಮ್ಮಸ್ಸು ಬರೋದಿಲ್ಲ.ನಾನು ಕುಂಭಕ್ಕೆ ಹೋಗ್ತೇನೋ ಇಲ್ಲವೋ, ಅದು ನನಗೆ ಬಿಟ್ಟಿದ್ದು .ನನ್ನ ನಂಬಿಕೆ ಅದು, ನನ್ನ ವೈಯಕ್ತಿಕ ವಿಚಾರ. ಒಬ್ಬೊಬ್ಬರಿಗೆ ಇದೊಂದು ಇಷ್ಟ, ಅದನ್ನ ಏನಾದರೂ ಮಾಡೋಕೆ ಆಗುತ್ತಾ?. ಕೆಲವರಿಗೆ ಕೆಲವೊಂದು ಬಣ್ಣ ಇಷ್ಟ ಎಂದಿದ್ದಾರೆ.
ಖರ್ಗೆ ಅವರು ಅವರ ವಿಚಾರ ಹೇಳಿದ್ದಾರೆ.ಅದರಲ್ಲೇ ನೀವು ತಂದಿಕ್ಕೋಕೆ, ಇದರಲ್ಲೇ ಬೆಳೆ ಬೇಯಿಸಿಕೊಳ್ಳೋಕೆ ಟಿಆರ್ ಪಿ ನಡೆಸ್ತಿದ್ದಾರೆ. ಅಶೋಕ್ ಮಾತಾಡಲಿ ಬಿಡಲಿ, ಅವರು ಮಾರ್ಕೆಟ್ ನಲ್ಲಿ ಇರಲಿ ಬಿಡಿ ಎಂದ ಅವರು ಎರಡನೇ ಏರ್ಪೋರ್ಟ್ ವಿಚಾರದ ಬಗ್ಗೆ ಮಾತನಾಡಿ ನಮ್ಮ ಕೈಗಾರಿಕಾ ಸಚುವರು ಎಲ್ಲಾ ಕಡೆ ನೋಡುತ್ತಿದ್ದಾರೆ.ನನ್ನ ಮತ್ತು ಸಿಎಂ ಬಳಿ ಚರ್ಚೆ ಮಾಡಿಲ್ಲ, ಇನ್ನೂ ಡಿಸೈಡ್ ಆಗಿಲ್ಲ.ಗ್ಲೋಬಲ್ ಇನ್ವೆಸ್ಡ್ ಮೆಂಟ್ ಮುಗೀಲಿ, ನೋಡೋಣ ಎಂದ್ರು.
ನೀರಿನ ದರ ಏರಿಕೆ ಕುರಿತು ಪ್ರಸ್ತಾವನೆ ಆಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ ಮಾಡಿದ್ದಾರೆ ಚರ್ಚೆ ಮಾಡಿದ್ದಾರೆ.ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದ್ರು. ಎರಡನೇ ಏರ್ಪೋರ್ಟ್ ವಿಚಾರದ ಬಗ್ಗೆ ಮಾತನಾಡಿ ಬೃಹತ್ ಕೈಗಾರಿಕೆ ಸಚಿವರು ಎಲ್ಲಾ ಕಡೆ ನೋಡುತ್ತಿದ್ದಾರೆ .ನನ್ನ ಬಳಿಯಲ್ಲಿ ಮುಖ್ಯಮಂತ್ರಿ ಬಳಿ ಆಗ್ಲಿ ಚರ್ಚೆ ಮಾಡಿಲ್ಲ.ಪ್ರಾಥಮಿಕ ಸಭೆಗಳು ಆಗಿದೆ, ಅದನ್ನು ಇನ್ನೂ ಅಂತಿಮಗೊಳಿಸಿಲ್ಲ .ಗ್ಲೋಬಲ್ ಇನ್ವೆಸ್ಟರ್ಸ್ ಮೀಟಿಂಗ್ ಮುಗಿದ ಮೇಲೆ ಸಿಎಂ ನಾವು ಎಲ್ಲ ಕೂತು ಚರ್ಚೆ ಮಾಡಿ ಅಂತಿಮ ಗೊಳಿಸುತ್ತೇವೆ ಎಂದ್ರು.











