ಮನೆ Latest News ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಅವರು ಬಿಬಿಎಂಪಿ, ಬಿಡಿಎ, BWSSB ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಕಾವೇರಿ ಭವನದಲ್ಲಿ ಅಧಿಕಾರಿಗಳ ಜೊತೆ ಡಿಸಿಎಂ ಸಭೆ ನಡೆಸಿದ್ರು. ಅಧಿಕಾರಿಗಳ ಜೊತೆ ಡಿಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು. ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ, ಎಸಿಎಸ್ ಉಮಾಶಂಕರ್, ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನಿಶ್ ಮೌದ್ಗೀಲ್, ಬಿ ಡಬ್ಲ್ಯೂ ಎಸ್ ಎಸ್ ಬಿ ಚೇರ್ಮನ್ ಡಾ ರಾಮಪ್ರಸಾತ್ ಮನೋಹರ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ಡಿಎ ಕಮಿಷನರ್ ರಾಜೇಂದ್ರ ಚೋಳನ್ ಭಾಗಿಯಾಗಿದ್ರು.

ಸಭೆ ನಂತರ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಬೇಸಿಗೆ ಶುರುವಾಗ್ತಿದೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ.ಕಳೆದ ಬಾರಿ ನೀರಿನ ಅಭಾವದಿಂದ ದೊಡ್ಡ ಮಟ್ಟದಲ್ಲಿ ನೀರಿನ ಸಮಸ್ಯೆ ಆಗಿತ್ತು .ಆದ್ರೆ ಈ ಭಾರಿ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಇನ್ನೂ ಜಲಮಂಡಳಿ ವಾರ್ಷಿಕವಾಗಿ ೧ ಸಾವಿರ ಕೋಟಿ ನಷ್ಷದಲ್ಲಿದೆ.ನಷ್ಟ ಸರಿದೂಗಿಸಲು ಹಾಗೂ ಸಂಸ್ಥೆ ಉಳಿಯಲು ಬೆಲೆ ಏರಿಕೆ ಅನಿವಾರ್ಯ.ಇನ್ನೂ ಕೆಲ ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ನೀರಿನ ಹೊಸ ಕನೆಕ್ಷನ್ ತಗೊಂಡಿಲ್ಲ. ಇದು ವರೆಗೂ ಕೇವಲ 15 ಸಾವಿರ ಹೊಸ ಕನೆಕ್ಷನ್ ಕೊಡಲಾಗಿದೆ.ಅಪಾರ್ಟ್ಮೆಂಟ್ ನವರು ಕೂಡ ಕನೆಕ್ಷನ್ ತಗೋಬೇಕಾಗುತ್ತೆ .ಪ್ರತಿ ಮನೆಗೋಗಿ ಅಪಾರ್ಟ್ಮೆಂಟ್ ಹೋಗಿ ಕನೆಕ್ಷನ್ ಕೊಡುವ ಬಗ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಜಲಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ಲಾಸ್ ಆಗ್ತದೆ.ಬ್ಯಾಂಕ್ ನವರು ಕೂಡ ಇದೀಗ ಲೋನ್ ಕೊಡಲು ಒಪ್ಪುತ್ತಿಲ್ಲ ಎಂದರು.

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು 2014ರ ನಂತರ ನೀರಿನದ ದರ ಏರಿಕೆ‌ ಮಾಡಿಲ್ಲ.ಸಾವಿರಾರು ರೂಪಾಯಿ ಈಗಾಗಲೇ ಜಲಮಂಡಳಿ ಮೇಲೆ ಹೊರೆ ಇದೆ. ಸಂಸ್ಥೆಗೆ ತಿಂಗಳಿಗೆ 85 ಕೋಟಿಯಂತೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟ ಆಗ್ತಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರವೇ ನೀರಿ‌ನ ದರ ಏರಿಕೆ ಮಾಡುತ್ತೇನೆ.ಜಲಮಂಡಳಿ ಉಳಿಬೇಕು ಅಂದ್ರೆ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು?. ಶೀಘ್ರವೇ ಕಾವೇರಿ ನೀರಿನ ದರ ಏರಿಕೆ ಮಾಡೋಕೆ ಸೂಚಿಸಲಾಗಿದೆ.ಬೆಂಗಳೂರಿನ ಹಲವು ಏರಿಯಾಗಳಲ್ಲಿ ನೀರು ಫ್ರೀಯಾಗಿ ಕೊಡ್ತಿದ್ದೇವೆ .ಇನ್ಮೇಲೆ ಫ್ರೀಯಾಗಿ ಕೊಡೋಕೆ ಆಗಲ್ಲ. ಒಂದು ಪೈಸೆಯಾದರು ಬಿಲ್ ಕಟ್ಟಬೇಕು.ಎಲ್ಲಾ ಫ್ರೀ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು!?.ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ.ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್- ಡಿಸೇಲ್ ಬೆಲೆ ಜಾಸ್ತಿ ಆದ ಮೇಲೆ ಎಲ್ಲ ಬೆಲೆ ಜಾಸ್ತಿ ಆಗ್ತಾ ಇದೆ.ಟನಲ್ ಪ್ರೊಜೆಕ್ಟ್ ಗೆ 17,780 ಕೋಟಿ ವೆಚ್ಚದಲ್ಲಿ ಫೆಬ್ರವರಿ ಅಂತ್ಯಕ್ಕೆ ಟೆಂಡರ್ ಕರೆಯಲಾಗುವುದು.ಮೂರು- ಮೂರುವರೆ ವರ್ಷದಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ಕೊಟ್ಟಿರುವೆ.ಕಾಮಗಾರಿಗೆ ಬಿಬಿಎಂಪಿಯವರು ಸ್ವಲ್ಪ ಹಣ ಹಾಕ್ತಾ ಇದಾರೆ.ಸರ್ಕಾರದಿಂದಲೂ ಹಣ ಬಿಡುಗಡೆ ಮಾಡ್ತಾ ಇದೇವಿ

ಸಾಲ ಕೊಡೋಕೆ ಬ್ಯಾಂಕ್ ಗಳಿಗೆ ಕೇಳಿದ್ದೇವೆ. ಕೆಲವರು ಮುಂದೆ ಬಂದಿದ್ದಾರೆ ಎಂದರು. ಕಡಿಮೆ ಬಡ್ಡಿಗೆ ಸಾಲ ಕೊಡುವವರಿಗೆ ಬಿಡ್ ಕರೆದಿದ್ದೇವೆ ಎಂದು ತಿಳಿಸಿದ್ರು.