ಮನೆ Latest News ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

0

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವನ್ನು ವಿಭಿನ್ನವಾಗಿ ಆಚರಿಸಲಾಯಿತು. ರಾಜ್ಯ ಬಿಜೆಪಿ ನಾಯಕರು ಭಿನ್ನವಾಗಿ ಗಣ ರಾಜ್ಯೋತ್ಸವವನ್ನು ಆಚರಿಸಿದರು.  ಪೌರ ಕಾರ್ಮಿಕರು ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈ ವೇಳೆ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.ಇದೇ ವೇಳೆ ರಾಜ್ಯ ಬಿಜೆಪಿ ನಾಯಕರು ಪೌರಕಾರ್ಮಿಕರ ಜೊತೆಗೆ ಉಪಹಾರ ಸವಿದರು.

ಬಳಿಕ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಂಬೇಡ್ಕರ್ ಬರೆದ ಸಂವಿಧಾನ ಅರ್ಪಿಸಿಕೊಂಡು 75 ವರ್ಷ ಆಗಿದೆ.ಇಂದು 76 ವರ್ಷಕ್ಕೆ ಕಾಲಿಟ್ಟಿದ್ದೇವೆ.ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಗಟ್ಟಿಯಾದ ಸಂವಿಧಾನ ಕೊಟ್ಟ ದಿನ ಗಣರಾಜ್ಯೋತ್ಸವ.ದೇಶ ಯಾವ ರೀತಿ ನಡೆಸಬೇಕು ಎಂಬುದು ಸಂವಿಧಾನದಲ್ಲಿದೆ.ಬ್ರಿಟಿಷ್‌ ಜೊತೆಗೆ ಹೋರಾಟ ಮಾಡಿದ ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದ್ದು ಆಯ್ತು.ಬ್ರಿಟಿಷ್‌ ಎದುರಿಸಿದ್ದರೋ ಅಂತರವನ್ನು ನಾಪತ್ತೆ ಮಾಡಿದ್ದಾರೆ. ಅನ್ನಕ್ಕಾಗಿ ಹೋರಾಟ ಮಾಡಿದವರನ್ನು ಸಮಾಜ ಮರೆತು ಬಿಟ್ಟಿದೆ.ಸಂವಿಧಾನ ನಿರ್ಮಾಣ ಮಾಡಿದ ದಿನವನ್ನು ನಕಲಿ ಗಾಂಧಿಗಳ ಹೆಸರಲ್ಲಿ ರಾಜಕಾರಣ ಮಾಡ್ತಾರೆ.ಸ್ವಾತಂತ್ರ್ಯ ಬಂದ ನಂತರವೂ ಅಧಿಕಾರವನ್ನು ಗಾಂಧಿ ಕುಟುಂಬದಲ್ಲೇ ಇಟ್ಟುಕೊಂಡಿದೆ.ಕೇವಲ ಅಧಿಕಾರಕ್ಕಾಗಿ ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಅಂತ ಹೇಳ್ತಾರೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಗಾಂಧಿ ಭಾರತ ನಿರ್ಮಿಸೋಣ ಎಂಬುದಾಗಿ ಪತ್ರಿಕೆಗಳಲ್ಲಿ ಸರ್ಕಾರ ನೀಡಿದ ವಿಚಾರದ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದ್ಯಾ?. ಸರ್ಕಾರದ ಮೂಲಭೂತ ಕರ್ತವ್ಯ ರಾಜ್ಯದ ಸುರಕ್ಷತೆ, ಅಭಿವೃದ್ಧಿ ಮತ್ತು ಜನತೆಯ ಕ್ಷೇಮ.ಇದನ್ನ ಕಾಯುವಂತದ್ದು ಸರ್ಕಾರದ ಕೆಲಸ.ಆದರೆ ಜನಸಾಮಾನ್ಯರ ತೆರಿಗೆಯಿಂದ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ.ಗಣರಾಜ್ಯೋತ್ಸವವನ್ನೂ ಈ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ.ಇಂದು ಸರ್ಕಾರ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ.ಬನ್ನಿ ಗಾಂಧಿ ಭಾರತವನ್ನ ನಿರ್ಮಿಸೋಣ ಅಂತ ಬರೆದುಕೊಂದಿದ್ದಾರೆ.ಯಾವ ಗಾಂಧಿ? ಸೋನಿಯಾ ಗಾಂಧಿನಾ? ರಾಹುಲ್ ಗಾಂಧಿನಾ? ಪ್ರಿಯಾಂಕಾ ಗಾಂಧಿನಾ?.ಮಹಾತ್ಮ ಅನ್ನೋ ಪದ ಬಳಕೆ ಮಾಡುವಷ್ಟೂ ಈ ಸರ್ಕಾರಕ್ಕೆ ಸೌಜನ್ಯ ಇಲ್ಲ.ಅಷ್ಟು ಕೀಳು ಮಟ್ಟಕ್ಕೆ ಈ ಸರ್ಕಾರ ಇಳಿದಿದೆ.ಮಹಾತ್ಮ ಅಂತ ಬಳಸಿದ್ರೆ ಅದು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನ ನೆನಪು ಮಾಡಿಕೊತ್ತೆ ಅನ್ನೋ ಕಾರಣಕ್ಕೆ ಮಹಾತ್ಮ ಅನ್ನೋ ಪದವನ್ನ ಕೈಬಿಟ್ಟು,ಗಾಂಧಿ ಅಂದರೆ ಈಗಿನ‌ ರಾಹುಲ್ ಗಾಂಧಿ ಅಂತ ರಾಹುಲ್ ಗಾಂಧಿ ಭಾರತ ನಿರ್ಮಿಸೋಣ ಅಂತ ಸರ್ಕಾರ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ.ಸರ್ಕಾರದ ಜಾಹೀರಾತಿನಲ್ಲಿ ಕೊಟ್ಟಿರುವ ಪ್ರಿಯಾಂಬಲ್ ತಪ್ಪಾಗಿದೆ.ಸರಿಯಾದ ಅನುಕರಣೆ ಮಾಡೋಕೆ ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಫೇತ್ ಅನ್ನೋ ಪದ ಪ್ರಿಯಾಂಬಲ್ ನಲ್ಲಿ ಇದೆ. ಫೇತ್ ಅಂದರೆ ಕನ್ನಡದಲ್ಲಿ ಅದು ನಂಬಿಕೆ ಆಗುತ್ತೆ.ಮಾತು ಮಾತಿಗೆ ಕೈಯಲ್ಲಿ ಸಂವಿಧಾನವನ್ನ ಕಾಂಗ್ರೆಸ್ ಹಿಡಿದುಕೊಳ್ಳುತ್ತೆ.ನಕಲಿ ಗಾಂಧಿಗಳು ಪ್ರಿಯಾಂಬಲ್ ನ ತಪ್ಪು ಮಾಡಿದ್ದಾರೆ.ನಂಬಿಕೆ ಅನ್ನುವ ಪದವನ್ನೇ ಕೈಬಿಟ್ಟು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ.ಸುಮ್ಮನೇ ಸಂವಿಧಾನ ರಕ್ಷಕರು ಅಂತ ಹೇಳಿಕೊಳ್ತಾರೆ ಎಂದರು.