ಮನೆ Latest News ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ; ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ; ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

0

ಬೆಂಗಳೂರು; ಟಾಕ್ಸಿಕ್ ಹಾಗೂ ಕಾಂತಾಂರ-೨ ಸಿನಿಮಾ ಗಳ ಶೂಟಿಂಗ್ ವೇಳೆ ನಡೆದಿರುವ ಘಟನೆಗಳ ಬಳಿಕ ಎಚ್ಚೆತ್ತಿಕೊಂಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಇನ್ಮೇಲೆ ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ ಎಂದಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ.ಇದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ.ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸಬೇಕು.ಸರ್ಕಾರದ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.

ಹಾಸನದ ಅರಣ್ಯದಲ್ಲಿ ಕಾಂತಾರ 2 ಚಿತ್ರೀಕರಣ ನಿಯಮ ಉಲ್ಲಂಘನೆ ವಿಚಾರ; ತನಿಖೆ ಮಾಡಿ ವರದಿ ತರಿಸಿಕೊಳ್ತೀನಿ ಎಂದ ಈಶ್ವರ್ ಖಂಡ್ರೆ

ಬೆಂಗಳೂರು: ಹಾಸನದ ಅರಣ್ಯದಲ್ಲಿ ಕಾಂತಾರ 2 ಚಿತ್ರೀಕರಣ ನಿಯಮ ಉಲ್ಲಂಘನೆಕ್ಕೆ ಸಂಬಂಧಪಟ್ಟಂತೆ ಅರಣ್ಯ ಸಚಿವ ಈಸ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು ತನಿಖೆ ಮಾಡಿ ವರದಿ ತರಿಸಿಕೊಳ್ತೀನಿ ಎಂದಿದ್ದಾರೆ.ಕಾಂತಾರ 2 ಚಿತ್ರೀಕರಣಕ್ಕೆ ಅನುಮತಿ ಕೊಡಲಾಗಿತ್ತು. ಕೆಲವು ನಿಯಮ ಉಲ್ಲಂಘಟನೆ ಮಾಡಿದ್ದಾರೆ. ದೂರವಾಣಿ ಮೂಲಕ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ನಮ್ಮ‌ ಅರಣ್ಯ ಭೂಮಿಯಲ್ಲಿ ಏನೂ ಮಾಡಿಲ್ಲ. ತನಿಖೆ ಮಾಡಿ ವರದಿ ತರಿಸಿಕೊಳ್ತೀನಿ ಎಂದಿದ್ದಾರೆ.

ಇನ್ನು ನಿನ್ನೆ ಆನ್ ಲೈನ್ ಮೀಟಿಂಗ್ ಮಾಡ್ಯೂಲ್ ತಂತ್ರಾಂಶದ ಸಾಫ್ಟ್ ವೇರ್ ಅನ್ನು ವಿಧಾನಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆಗೊಳಿಸಿದ್ರು.  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳು ಒಂದೇ ಸೂರಿನಡಿ ನೀಡುವ ನಿಟ್ಟಿನಲ್ಲಿ ತಂತ್ರಾಂಶ ತಯಾರಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು  ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಸರ ಕಾಯ್ದೆ, ಜಲ ಮಾಲಿನ್ಯ ವಾಯು ಮಾಲಿನ್ಯ ಕಾಯ್ದೆ ಅನುಷ್ಠಾನ ಆಗ್ಬೇಕು. ಈ ನಿಟ್ಟಿನಲ್ಲಿ ಈ ಯೋಜನೆ ಜಾರಿ ಮಾಡ್ತಿದ್ದೇವೆ. IIT ನಿರ್ದೇಶಕ, NIC ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ನ್ಯಾಷನಲ್ ಇನ್ಫಾರ್ಮೇಷನ್ ಸೆಂಟರ್ ಮೂಲಕ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ರಾಜ್ಯಕ್ಕೆ ನಿರುದ್ಯೋಗ ಸಮಸ್ಯೆ, ಹೆಚ್ಚಿನ ಹೂಡಿಕೆ ಆಕರ್ಷಣೆ ತಂತ್ರಾಂಶ ಉಪಯುಕ್ತ ಆಗುತ್ತೆ. ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಲಿದೆ. ಬೇರೆ ದೇಶ ಅಥವಾ ರಾಜ್ಯದಲ್ಲಿ ಈ ಯೋಜನೆ ಇರುವ ಬಗ್ಗೆ ಮಾಹಿತಿ ಇಲ್ಲ. ನಾವು ಪರಿಣಾಮಕಾರಿಗಿ ಈ ಉಪಯುಕ್ತ ಯೋಜನೆ ಜಾರಿ ಮಾಡ್ತಿದ್ದೇವೆ ಎಂದರು.

ಕೈಗಾರಿಕೆಗಳ ಪ್ರಾರಂಭಕ್ಕೆ ಅನುಮತಿ ಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಬೇಕು. ಅದಕ್ಕೆ ಸುಲಭ ಅನುಮತಿಗೆ ಇದು ಅವಶ್ಯಕ. ಈ ಸೇವೆಯ ಮೂಲಕ ಪಡೆಯಬಹುದು. ಹೆಚ್ಚಿನ ಅಭಿವೃದ್ಧಿಗೆ ಕೈಗಾರಿಕೆಗಳು ಮುಖ್ಯ. ನಿಯಮಗಳನ್ನ ಸರಳೀಕರಣ ಮಾಡಬೇಕು. ಹಾಗಾಗಿ ಈ ತಂತ್ರಾಶ ಅನುಕೂಲವಾಗಲಿದೆ. ಒಂದೇ ಸೂರಿನಡಿ ಅನುಮತಿ ಪಡೆಯಬಹುದು. ಅನ್ಲೈನ್‌ಮೂಲಕವೇ ಅರ್ಜಿ‌ ಸಲ್ಲಿಸಬಹುದು. ಕಾಯ್ದೆಗಳ ಅನುಷ್ಠಾನ ಸರಿಯಾಗಿ ಆಗಬೇಕು. ಮಧ್ಯವರ್ತಿಗಳ ಕಾಟವಿಲ್ಲದೆ ಅನುಮತಿ ಪಡೆಯಬಹುದು. ಎಕ್ಸ್ ಜಿಎನ್ ತಂತ್ರಾಶ ಈಗಾಗಲೇ ಇತ್ತು. ಬೇಕಾದ ಕಾಗದಪತ್ರಗಳನ್ನ ಇದರಲ್ಲಿ ಪಡೆಯಬಹುದು. ಕೈಗಾರಿಕೆ, ಉದ್ಯಮ ನಡೆಸಲು ಪಡೆಯಬಹುದು ಎಂದು ತಿಳಿಸಿದರು.

ಹುತಾತ್ಮ ಅರ್ಜುನ್ ಸ್ಮಾರಕ ಹಾಸನಲ್ಲಿ  ತಯಾರಾಗಿದೆ. ಡಿ.4ಕ್ಕೆ ಉದ್ಘಾಟನೆ ಇತ್ತು, ಫೆ.1ಕ್ಕೆ ಅಥವಾ ಫೆಬ್ರವರಿ ಮೊದಲ ವಾರ ಕಾರ್ಯಕ್ರಮ ನಡೆಯಲಿದೆ. 443 ಎಕರೆ ಎಚ್ ಎಂಟಿ ಗೆ ಕೊಟ್ಟಿದ್ದೇವೆ. ನಮ್ಮ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದೆ ನಡೆದುಕೊಂಡಿದ್ದರು. ಎಚ್ ಎಂಟಿ‌ ಭೂಮಿ ಬೆಲೆ ಕಟ್ಟಲಾಗದು. ಅದನ್ನ ವಾಪಾಸ್ ಪಡೆಯಬೇಕು ಶಿಫಾರಸ್ಸು ಮಾಡಿದೆ. ಅದಕ್ಕೆ‌ ಸಚಿವೆ ಸಂಪುಟ ಒಪ್ಪಿಗೆ ನೀಡಿದೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಇದೆ. ಖಾಸಗಿ ಕಂಪನಿಗಳಿಗೆ ಎಚ್ ಎಎಲ್ ಕೊಟ್ಟಿದೆ. ಕೆಲವು ಜಮೀನು ಮಾರಾಟ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಗಮನಕ್ಕೆ ಅವರು ತಂದಿಲ್ಲ. ನಮ್ಮ‌ ಉದ್ದೇಶ ಸರ್ಕಾರದ ಆಸ್ತಿ ರಕ್ಷಿಸಬೇಕು .ನಾವು ರಾಜಕೀಯ ಬೆರೆಸುತ್ತಿಲ್ಲ. ಲಾಲ್ ಬಾಗ್ ರೀತಿ ಇಲ್ಲಿ ಕೆಲವು ಅಭಿವೃದ್ಧಿ ಕೆಲಸ ಮಾಡ್ತೀವಿ. 4 ಜನ ಅಧಿಕಾರಿಗಳ ತಲೆತಂಡ ಆಗುತ್ತೆ. ಶೋಕಾಸ್ ನೋಟಿಸ್ ನೀಡಿದ್ದೇನೆ. 160 ಎಕರೆ ಮಾರಾಟ ಮಾಡಿದ್ದಾರೆ. ಬಾಗಮನೆ, ಪ್ರೆಸ್ಟೀಜ್ ಕಂಪನಿಗಳಿಗೆ ಮಾರಾಟ ಮಾಡಿದ್ದಾರೆ. 280 ಎಕರೆ ಸಂಪೂರ್ಣವಾಗಿ ಖಾಲಿಯಾಗಿದೆ, ದಟ್ಟವಾದ ಅರಣ್ಯ ಇದೆ ಎಂದರು.