ಬಿಗ್ ಬಾಸ್ ಸೀಸನ್ 11 ರ ಫಿನಾಲೆಗೆ ಇನ್ನು ಕೇವರ ನಾಲ್ಕು ದಿನಗಳು ಅಷ್ಟೇ ಬಾಕಿ ಉಳಿದಿವೆ. ಈ ಬಾರಿ ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಅನ್ನೋ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ. ಬಹುತೇಕರು ಹನುಮಂತು ಅವರ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರೇ ವಿನ್ನ್ ಆಗ್ಬೇಕು ಅಂತಾ ಹಾರೈಸುತ್ತಿದ್ದಾರೆ.
ಇದರ ಮಧ್ಯೆ ನಿನ್ನೆ ಬಿಗ್ ಬಾಸ್ ಮನೆಗೆ ಕಲರ್ಸ್ ಕನ್ನಡ ವಾಹಿನಿ ಮಹರ್ಷಿ ದರ್ಶನ ಕಾರ್ಯಕ್ರಮ ಜ್ಯೋತಿಷಿ ವಿದ್ಯಾಶಂಕರಾನಂದ ಸರಸ್ವತಿ ಬಂದಿದ್ದರು. ಅವರು ಸದ್ಯ ಫಿನಾಲೆಗೆ ಆಯ್ಕೆಯಾಗಿರುವ ಎಲ್ಲಾ ಸ್ಪರ್ಧಿಗಳ ಭವಿಷ್ಯವನ್ನು ಅವರ ಜಾತಕದ ಆಧಾರದಲ್ಲಿ ಹೇಳುತ್ತಿದ್ದರು. ಅದರಂತೆ ಹನುಮಂತು ಅವರು ಜಾತಕ ತೋರಿಸಲು ಬಂದಾಗ ಗುರೂಜಿ ಏನು ಕೇಳು ಎಂದು ಹನುಮಂತು ಬಳಿ ಹೇಳುತ್ತಾರೆ. ಆಗ ಹನುಮಂತು ನಿಲ್ಲಾರೀ ಎಂದು ನಗುತ್ತಾರೆ. ಹಾಗಾದ್ರೆ ಸುಮ್ನೆ ಬಂದ್ಯಾ ಮನೆಗೆ ಎಂದು ಗುರೂಜಿ ಕೇಳುತ್ತಾರೆ. ಅದಕ್ಕೆ ಹನುಮಂತು ಆರಾಮ ಇದ್ದೀನ್ರಿ. ಮುಂದೆ ಆರಾಮ ಇದ್ರೆ ಸಾಕು ಅಮ್ಮ ಅಪ್ಪನ ನೊಡ್ಕೊಂಡು ಅನ್ನೋ ಮಾತನ್ನು ಹೇಳ್ತಾರೆ. ಅಪ್ಪ ಅಮ್ಮನ ನೀನು ನೋಡ್ಕೊಳ್ತೀಯಾ ಚೆನ್ನಾಗಿ, ನಿಜವಾಗಲೂ ನೋಡ್ಕೊಳ್ತೀಯಾ ಎಂದು ಗುರೂಜಿ ಮರುಪ್ರಶ್ನೆ ಹಾಕಿದಾಗ ನೋಡ್ಕೊಳ್ತೀನಿ ಎನ್ನುತ್ತಾರೆ . ಇಲ್ಲಿಂದ ಹೋಗಿ ಮದುವೆ ಆಗ್ತೀನ್ರಿ ಎಂದು ತನ್ನ ಕಳ್ಳ ನಗೆ ಬೀರುತ್ತಾರೆ.
ಬಳಿಕ ಗುರೂಜಿ ನಿನಗೆ ಸದ್ಯ ರಾಜಯೋಗ ನಡೆಯುತ್ತಿದೆ. ಹನುಮಂತು ನಿನ್ನ ಜಾತಕ ಪ್ರಕಾರ 2026 ಮಾರ್ಚ್ ವರೆಗೂ ನಿನಗೆ ತುಂಬಾ ರಾಜಯೋಗವಿದೆ. ಸದ್ಯ ನಿನಗೆ ಒಳ್ಳೆಯ ಟೈಮ್ ನಡೆಯುತ್ತಿದೆ. ಸರಿಯಾಗಿ ಉಪಯೋಗಿಸಿಕೊಂಡ್ರೆ ನಿನ್ಗೆ ಒಳ್ಳೆದೇ ಆಗುತ್ತೆ. ಇನ್ನು ತಾಂಬೂಲ ಶಾಸ್ತ್ರದ ಪ್ರಕಾರ ಹನುಮಂತು ಭವಿಷ್ಯ ಹೇಳಿದ ಗುರೂಜಿ ತಾಯಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಹೆಚ್ಚು ಕಾಳಜಿ ಮಾಡ್ಬೇಕು ಎನ್ನುತ್ತಾರೆ.ಇದೇ ವೇಳೆ ಗುರೂಜಿ ಈ ವರ್ಷ ನಿನ್ಗೆ ಲಗ್ನ ಆಗುತ್ತೆ ಎನ್ನುತ್ತಾರೆ ಆಗ ಹನುಮಂತು ಫುಲ್ ನಾಚಿ ನೀರಾಗ್ತಾರೆ. ಮದ್ವೆ ಅಂದಾಕ್ಷಣ ಮುಖ ನೋಡು ಕಳೆ ಹೇಗೆ ಬಂತು ಅಂತಾ. ಮುದ್ಕೊಂಡು ಇದ್ದ ತಾವರೆ ಎಂದು ಸ್ವಾಮೀಜಿ ಕಾಲೆಳೆಯುತ್ತಾರೆ.ಮುಖ ಅರಳುತ್ತೆ ಅದಕ್ಕೆ ಗುರೂಜಿ ಮದುವೆ ಅಂತಾಕ್ಷಣ ಎಷ್ಟು ಖುಷಿ ಪಡ್ತಿಯಾ ನೋಡು ಎಂದು ರೇಗಿಸ್ತಾರೆ.ಅಲ್ಲದೇ ಮದುವೆಯಾಗೋಕೆ ಕಾರಣ ಏನು ಸ್ವಾಮೀಜಿ ಕೇಳಿದಾಗ ಮುಂದೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಹಾಗಾದ್ರೆ ಮದುವೆ ಮಾಡಿಕೊಂಡಿಲ್ಲ ಅಂದ್ರೆ ಅಮ್ಮ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಲು ಆಗಲ್ವೇ ಎಂದು ಗುರೂಜಿ ಕೇಳಿದಾಗ ಹನುಮಂತು ಹಾಗಲ್ಲ ನಮ್ದು ಜೀವನ ನಡಿಬೇಕು ಅವ್ವ ಅಪ್ಪ ನಡ್ಕೊಂಡು ಬಂದಿದ್ದಾರೆ ಹಾಗೇ ನಾವು ನಡ್ಕೊಳ್ಬೇಕು ಅಂದಿಕ್ಕೆ ಅಂತಾ ಉತ್ತರಿಸ್ತಾರೆ.
ಸದ್ಯ ಗುರೂಜಿ ಹನುಮಂತು ಅವರ ರಾಜಯೋಗದ ಬಗ್ಗೆ ಭವಿಷ್ಯ ಹೇಳಿದ್ದು ಹನುಮಂತು ಅವರ ಅಭಿಮಾನಿಗಳಿಗೆ ಫುಲ್ ಖುಷಿ ಕೊಟ್ಟಿದೆ. ಹಾಗಾದ್ರೆ ಈ ಬಾರಿ ಹನುಮಂತು ಅವರು ಬಿಗ್ ಬಾಸ್ ಕಪ್ ಎತ್ತಿ ಹಿಡಿಯೋದು ಪಕ್ಕಾ ಎಂದು ಅರ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಗುರೂಜಿ 2026 ಮಾರ್ಚ್ ವರೆಗೆ ನಿನಗೆ ರಾಜ ಯೋಗ ಅಂದ್ರೆ ಮುಟ್ಟಿದೆಲ್ಲವೂ ಕೂಡ ಚಿನ್ನ ಅಂದಿರೋದು ಕೇಳಿದ್ರೆ ಹನುಮಂತು ವಿನ್ನರ್ ಆಗೋದು ಫಿಕ್ಸ್ ಅಂತಾ ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಆಗುತ್ತೆ ಆನ್ನೋದಕ್ಕೆ ಭಾನುವಾರ ಉತ್ತರ ಸಿಗಲಿದೆ.











