ಮನೆ Latest News ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕರ ಸಭೆ: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮೀಟಿಂಗ್

ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕರ ಸಭೆ: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮೀಟಿಂಗ್

0

 

ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕರು ಸಭೆ ನಡೆಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಬಿಜೆಪಿ ಮಾಜಿ ಶಾಸಕರು ಮೀಟಿಂಗ್ ಮಾಡಿದರು. ಸಭೆಯಲ್ಲಿ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಪಿ. ರೇಣುಕಾಚಾರ್ಯ, ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಬಸವರಾಜ ದಡೇಸೂಗೂರು, ಎಂ. ನಾರಾಯಣಸ್ವಾಮಿ, ಎಂ.ಡಿ. ಲಕ್ಷ್ಮೀನಾರಾಯಣ, ಬಸವರಾಜ ನಾಯ್ಕ್ ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಹರ್ಷವರ್ಧನ್, ವೈ.ಸಂಪಂಗಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ಇಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಶಾಸಕರ ಸಭೆ ಕರೆದಿದ್ದಾರೆ. ಈ ವಿಷಯ ಕೇಳಿ ಶಾಕ್ ಆಯ್ತು. ಸೋತವರ ಸಭೆಯನ್ನು ಕೂಡಾ ಕರೆಯಬೇಕಿತ್ತು. ಕೇವಲ 66 ಶಾಸಕರಿಂದ ಸರ್ಕಾರ ಮಾಡಲು ಆಗಲ್ಲ. ಮಾಜಿ ಶಾಸಕರನ್ನು ಬಿಟ್ಟು ಸಭೆ ಮಾಡುತ್ತಿರುವುದು ನಮಗೆ ಅವಮಾನ . ನಾನು ರಾಧಾ ಮೋಹನ್ ದಾಸ್ ಅಗರವಾಲ್ ಅವರ ಭೇಟಿಗೆ ಸಮಯ ಕೇಳಿದ್ದೇವೆ. ಸಮಯ ಸಿಕ್ಕಿದ ಬಳಿಕ ಭೇಟಿ ಮಾಡುತ್ತೇವೆ. ಇದು ಹೀಗೆಯೇ ಮುಂದುವರಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಬೇಸರ ಹೊರ ಹಾಕಿದ್ರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ ರಾಜ್ಯ ಉಸ್ತುವಾರಿ ಭೇಟಿಗೆ ಸಮಯ ಕೇಳಿದ್ದೇವೆ. ನಮಗೂ ಉಸ್ತುವಾರಿಯವರನ್ನು ಭೇಟಿ ಮಾಡಿಸುವಂತೆ ರಾಜ್ಯಾಧ್ಯಕ್ಷರಿಗೆ ಕೇಳಿದ್ದೇವೆ. ರಾಜ್ಯಾಧ್ಯಕ್ಷರ ಬಗ್ಗೆ ನಮ್ಮ ಪಕ್ಷದ ಕೆಲವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈ ಹಿಂದೆ ಮಾತಾಡದೇ ಈಗ ಯಾಕೆ ಮಾತಾಡುತ್ತಿದ್ದಾರೆ. ಅವರೆಲ್ಲಾ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಈಗ ಅವರು ಬಾಯಿಗೆ ಬೀಗ ಹಾಕಿಕೊಂಡು ಇರುವುದು ಒಳ್ಳೆಯದು . ಈಗ ಅವರು ಮಾತಾಡಿರುವುದಕ್ಕೆ ಏನು ಶಿಕ್ಷೆ?. ಈಗಿರುವ ಅಧ್ಯಕ್ಷರನ್ನು ಮುಂದುವರಿಸಲೇಬೇಕು ಅಂತಾ ನಾವು ಹೇಳಬೇಕಾಗಿದೆ. ಇವರಿಗೆ ಅಧ್ಯಕ್ಷರ ಬಗ್ಗೆ ಸಮಸ್ಯೆ ಇದ್ದರೆ ಎಲ್ಲಿ ಹೇಳಬೇಕೋ ಅಲ್ಲಿ ಹೇಳಲಿ. ಅಭ್ಯರ್ಥಿ ಹಾಕುತ್ತೇವೆ ಅಂತಾ ಚುನಾವಣಾಧಿಕಾರಿಗೆ ಹೇಳಬೇಕು. ಇದನ್ನು ಮಾಧ್ಯಮಕ್ಕೆ ಯಾಕೆ ಹೇಳುತ್ತಾರೆ?. ಇದಕ್ಕೆ ಪಕ್ಷ ಏನು ಹೇಳುತ್ತದೆ?. ಇದನ್ನು ನಾವು ಹೋಗಿ ರಾಜ್ಯ ಉಸ್ತುವಾರಿಗೆ ಕೇಳುತ್ತೇವೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ಮುಂದಿನ ಯಾವುದೇ ಚುನಾವಣೆ ನಡೆದರೂ ನಮ್ಮ ಪಾತ್ರ ಬಹಳ ಮುಖ್ಯ. ಕೇವಲ ಶಾಸಕರು, ಸಂಸದರ ಅಭಿಪ್ರಾಯ ಪಡೆದರೆ ಸಾಲದು. ವಿಜಯೇಂದ್ರ‌ ರಾಜ್ಯಾಧ್ಯಕ್ಷ ಆದ ಮೇಲೆ ಯಡಿಯೂರಪ್ಪ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ತಿರುಗಿ ಪಕ್ಷ ಕಟ್ಟಿದ್ದಾರೆ. ರಾಜ್ಯಾಧ್ಯಕ್ಷ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೆ ರಾಷ್ಟ್ರೀಯ ನಾಯಕರನ್ನು ಟೀಕಿಸಿದಂತೆ. ವಿಜಯೇಂದ್ರ‌ ಅವರೇ ಮುಂದಿನ ಚುನಾವಣೆಗೂ ಕೂಡಾ ನಮ್ಮ ಅಧ್ಯಕ್ಷರು. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡದೇ ಯಾವಾಗಲೂ ವಿಜಯೇಂದ್ರ‌ ವಿರುದ್ಧ ಹೋರಾಟ. ಇವರೇನೂ ಒರಿಜಿನಲ್ ಬಿಜೆಪಿ ನಾ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಪಕ್ಷ ಸಂಘಟನೆ ದೃಷ್ಟಿಯಿಂದ ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಎಂಎಲ್ಸಿಗಳ ಅಭಿಪ್ರಾಯ ಪಡೆಯಬೇಕು. ನಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು,ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ ನಾವೆಲ್ಲರೂ ಒಂದೇ ಮನಸ್ಥಿತಿಯಲ್ಲಿದ್ದೇವೆ.ಬಿಜೆಪಿ ಗೆಲ್ಲಬೇಕು. ಮಾಜಿ ಶಾಸಕರ ಪೈಕಿ 60-70 ಗೆಲ್ಲುವ ಸಾಮರ್ಥ್ಯ ಇದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಮಾತಾಡುವವರ ಬಾಯಿ ಒಂದು ವಾರದಲ್ಲಿ ಬಂದ್  ಆಗುತ್ತದೆ. ಅವರು ಏನೇನು ಮಾತಾಡಬೇಕೋ ಮಾತಾಡಿಕೊಳ್ಳಲಿ. ವಿಜಯೇಂದ್ರ‌ ನೇತೃತ್ವದಲ್ಲೇ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಯಾರೋ ಫಟಿಂಗರು ಮಾತಾಡುವ ಮಾತಿಗೆ ಬೆಲೆ ಕೊಡಬಾರದು ಅಂತಾ ನಾವು ಸೇರಿದ್ದೇವೆ.ನಾವು ಯಾರದೋ ಸ್ವಾರ್ಥಕ್ಕೆ ಸಭೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ರು,

ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಮಾತನಾಡಿ ಮಹಿಳೆಯರಿಗೆ ಸುರಕ್ಷತೆ‌ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಜನ‌ನಿಬಿಡ ಸ್ಥಳದಲ್ಲಿ ‌ಈ ರೀತಿ ಆಗಿದೆ. ಈ‌ ಘಟನೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಸಿಎಂ, ಡಿಸಿಎಂ,‌ ಹೋಮ್ ಮಿನಿಸ್ಟರ್ ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಅಂತಾರೆ. ಹೊಯ್ಸಳ ವಾಹನಕ್ಕೆ ಕೇವಲ 100 ಲೀಟರ್ ಮಾತ್ರ ಇಂಧನ ಹಾಕಿಸುತ್ತಾರೆ. ಅಷ್ಟರೊಳಗೆ‌ ಮಾತ್ರ ಸುತ್ತಾಡಬೇಕು ಅಂತಾ‌ ಹೇಳಿದ್ದಾರಾ?. ಜಮೀರ್ ಅಹಮದ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಘಟನೆ ಆಗಿದೆ. ದೂರು ತೆಗೆದುಕೊಂಡು ಹೋದರೆ ತೆಗೆದುಕೊಂಡಿರಲಿಲ್ಲ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಸರ್ಕಾರ ಭಂಡತನ ಮಾಡುತ್ತಿದೆ. ಸಿಎಂ ತಮ್ಮ ಕುರ್ಚಿ,‌ ಡಿಸಿಎಂ ತಮ್ಮ ಅಧಿಕಾರ ಉಳಿಸಿಕೊಳ್ಳಲು ಬ್ಯುಸಿ. ಆಂತರಿಕ ಪೊಲೀಸ್ ಇಲಾಖೆ ಕೂಡ ಪರಿಶೀಲನಾ ಸಭೆ ಕೂಡ ಮಾಡುತ್ತಿಲ್ಲ ಎಂದರು.