ಮನೆ Latest News ದರೋಡೆಕೋರಿಗೆ ಸ್ವರ್ಗದ ಸರ್ಕಾರ; ವಿಧಾನಸಭೆ ಅಧ್ಯಕ್ಷ ಆರ್ ಅಶೋಕ್ ಹೇಳಿಕೆ

ದರೋಡೆಕೋರಿಗೆ ಸ್ವರ್ಗದ ಸರ್ಕಾರ; ವಿಧಾನಸಭೆ ಅಧ್ಯಕ್ಷ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು; ದರೋಡೆಕೋರಿಗೆ ಸ್ವರ್ಗದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಅಧ್ಯಕ್ಷ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ದರೋಡೆ ರಾಜ್ಯಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಮಾಡ್ತೀನಿ. ಕರ್ನಾಟಕ ಲಲ್ಲು ಪ್ರಸಾದ್ ಯಾದವ್ ಅವರ ಬಿಹಾರದ ರಾಜ್ಯದ ರೀತಿ ಆಗಿದೆ. ಕರ್ನಾಟಕ ಬಿಹಾರದ ರೀತಿಯ ದರೋಡೆ ರಾಜ್ಯವಾಗಿದೆ. ಮಂಗಳೂರಿನಲ್ಲಿ ದರೋಡೆ ನಡೆದಿದೆ. 5 ನಿಮಿಷದಲ್ಲಿ 15 ಕೋಟಿ ಲೂಟಿ ಆಗಿದೆ. ಇದು ಹಾಲಿವುಡ್, ಬಾಲಿವುಡ್ ಅಲ್ಲ, ಸ್ಯಾಂಡಲ್ ವುಡ್ ಸಿನಿಮಾ. ಐದು ನಿಮಿಷದಲ್ಲಿ ಲೂಟಿ‌ ಹೊಡೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಸಿಎಂ‌ ಹೋಗ್ತಾರೆ ಅಂತ ಗೊತ್ತಿದ್ದು, ಲೂಟಿ ಹೊಡೆದಿದ್ದಾರೆ. ಕರ್ನಾಟಕದ ಪೊಲೀಸರ ಮೇಲೆ ಎಷ್ಟು ಭಯ ಇದೆ. ಪಟಾ ಪಟ್ ಅಂತ ನಿಮ್ಮ ಅಕೌಂಟಿಗೆ ಹಣ ಹೋಗುತ್ತೆ ಅಂತ ಹೇಳಿದ್ರು. ಅದೇ ರೀತಿ ಪಟಾ ಪಟ್ ಅಂತ ಲೂಟಿ ಹೊಡೆದಿದ್ದಾರೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇದೆ ಅಂತ ಕೈಗನ್ನಡಿ ಇದೆ. ನನಗೆ ಸಿದ್ದರಾಮಯ್ಯ ಅವರ ಮೇಲೆ ಕರುಣೆ ಇದೆ. ಪೊಲೀಸರನ್ನ ಕರೆಸಿ ನೀವೆಲ್ಲಾ ಇದ್ದು ಹೀಗಾಗಿದೆಯಲ್ಲಪ್ಪಾ ಅಂತ ಕೇಳಿದ್ದಾರೆ. ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಲೇವಡಿ ಮಾಡಿದ ಅವರಪ ಅದೇ ರೀತಿ ಬೀದರ್‌ನಲ್ಲಿ ಹಾಡುಹಗಲೇ ದರೋಡೆ ಆಗಿದೆ. ಎಲ್ಲರೂ ರೋಡಲ್ಲಿ ಬ್ಯುಸಿಯಾಗಿರೋ ಸಂಧರ್ಭದಲ್ಲಿ ಎಟಿಎಂಗೆ ಹಣ ಹಾಕಲು ಹೋಗ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹೊಡೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಕಿಂಚಿತ್ತಾದ್ರೂ ಬೆಲೆ ಇದೆಯಾ.? ಹಾಡು ಹಗಲೇ ದರೋಡೆ ಮಾಡ್ತಾರೆ. ದರೋಡೆಕೋರಿಗೆ ಸ್ವರ್ಗದ ಸರ್ಕಾರ ಎಂದರು. ಈವರೆಗೂ ಕರ್ನಾಟಕದವರು ದರೋಡೆ ಮಾಡ್ತಿದ್ರು. ಈಗ ಹೊರ ರಾಜ್ಯದಿಂದ ಬಂದು ಲೂಟಿ ಮಾಡ್ತಿದ್ದಾರೆ.ಬಂದವರು ವಿಮಾನ, ರೈಲಲ್ಲಿ ವಾಪಸ್ ಹೋಗ್ತಿದ್ದಾರೆ.ಕರ್ನಾಟಕದಲ್ಲಿ ಗೃಹಸಚಿವರು ಇದ್ದಾರಾ ಇಲ್ಲವಾ.? ಹಿಂದೆ ಎಲ್ಲರೂ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡ್ತಿದ್ರು. ಈಗ ಬ್ಯಾಂಕಿಗೆ ಹೋಗಲು ಹೆದರುವಂತಾಗಿದೆ ಎಂದು ತಿಳಿಸಿದ್ರು.

ಕರ್ನಾಟಕದಲ್ಲಿ ದರೋಡೆಕೋರರ ಜಾತ್ರೆ ನಡೆಯುತ್ತಿದೆ. ರೌಡಿಗಳ ಹಟ್ಟಹಾಸ ನಡೆಯುತ್ತಿದೆ. ಪೊಲೀಸರ ಬಳಿ ಸರಿಯಾದ ವೆಪನ್ಸ್ ಇಲ್ಲ. ಆದ್ರೆ ದರೋಡೆಕೋರರ ಬಳಿ ಎಲ್ಲಾ ಹೊಸ ಎಕ್ಯೂಪ್‌ಮೆಂಟ್ಸ್ ಇದೆ. ಪೊಲೀಸರ ಬಳಿ ಗನ್ ಇಲ್ಲ, ಇದ್ರೆ ಬುಲೆಟ್ ಇಲ್ಲ. ಈವರೆಗೂ ಯಾರನ್ನೂ ಬಂದಿಸಿಲ್ಲ. ಟೋಲ್‌ಗಳ ಬಳಿ ಪೊಲೀಸರು ಯಾರೂ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಟೋಲ್ ದಾಟಿಯೇ ಹೋಗಬೇಕು. ಅಲ್ಲಿರೋ ಸಿಸಿ ಕ್ಯಾಮೆರಾ ಇರುತ್ತೆ. ಆದ್ರೆ ಸಿಎಂಗೆ ಯಾವುದೇ ಮಾಹಿತಿ ಇಲ್ಲ ಎಂದ್ರು.

ಹುಬ್ಬಳ್ಳಿಯಲ್ಲಿ ನೇಹಾ ಮರ್ಡರ್ ಆಯ್ತು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದ್ರು ಕ್ರಮ‌ ಇಲ್ಲ. ಮಂಡ್ಯ ಹನುಮಧ್ವಜ ವಿಚಾರದಲ್ಲಿ ಕ್ರಮ ಇಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರತೀ ತಿಂಗಳು ಒಂದು ಗಿಫ್ಟ್ ಕೊಡ್ತಿದ್ದಾರೆ. ಪೊಲೀಸ್ ಇಲಾಖೆ ಟ್ರಾನ್ಸ್ಫಾರ್ ದಂಧೆ ಸರಣಿಯಾಗಿದೆ. ಹಣ ಕೊಟ್ಟು ಬಂದವರ ಬಳಿ ಏನು ಕೇಳೋಕೆ ಸಾಧ್ಯ. ಟ್ರಾನ್ಸ್‌ಫಾರ್ ದಂಧೆಯಿಂದ ಪೊಲೀಸರ ಮೇಲೆ ಬೆಲೆ ಇಲ್ಲದಂತಾಗಿದೆ ಎಂದ ಅವರು ಕಾಂಗ್ರೆಸ್ ನಾಯಕರ ಒಳ ಜಗಳದಿಂದ ಹೇಳೋರು, ಕೇಳೋರು ಇಲ್ಲದಂತಾಗಿದ್ದಾರೆ.

ಎಲ್ಲಾ ಅಧಿಕಾರಿಗಳು ಕೈ ಚೆಲ್ಲಿ ಕೂತಿದ್ದಾರೆ.ಯಾರು ಸಿಎಂ ಆಗ್ತಾರೆ, ಅವರಿಗೆ ಸೆಲ್ಯೂಟ್ ಹೊಡೆಯೋಣ ಅಂತ ಕಾಯ್ತಿದ್ದಾರೆ. ಇದರಿಂದ ರಾಜ್ಯದ ಜನರು ತಬ್ಬಲಿಯಾಗಿದ್ದಾರೆ. ಕರ್ನಾಟಕ ಕಾನೂನು ಸುವ್ಯವಸ್ಥೆ ಪ್ರಪಾತಕ್ಕೆ ದೂಡಿದ್ದಾರೆ. ಸ್ವಜನ ಪಕ್ಷಪಾತ, ಟ್ರಾನ್ಸ್‌ಫರ್ ದಂಧೆ ಆಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ, ಕುರ್ಚಿ ಜಗಳ ಬಿಟ್ಟು, ಅಧಿಕಾರ ಆಸೆ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲಿ. ಇಲ್ಲದಿದ್ರೆ ಎಲ್ಲಾ ಹೂಡಿಕೆದಾರರು ವಾಪಸ್ ಹೋಗ್ತಾರೆ. ಬಿಹಾರಕ್ಕೆ ಮೊದಲು ಯಾಕೆ ಯಾರೂ ಹೂಡಿಕೆ ಹೋಗ್ತಿರಲಿಲ್ಲ.? ಅಲ್ಲಿ ದರೋಡೆ ಹೆಚ್ಚು ಅಂತ. ಕರ್ನಾಟಕ ಹೂಡಿಕೆದಾರರ ಸ್ವರ್ಗ.ಅದನ್ನ ಹಾಳು ಮಾಡುವ ಕೆಲಸ ಮಾಡಬೇಡಿ ಎಂದರು.