ಬೆಂಗಳೂರು: ಶಾಸಕ ಮುನಿರತ್ನ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಭೇಟಿ ಮಾಡಿದ್ದಾರೆ. ವೈಯಾಲಿಕಾವಲ್ ನಲ್ಲಿರೋ ಶಾಸಕ ಮುನಿರತ್ನ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಮುನಿರತ್ನ ಅವರು ನಮ್ಮ ಪಕ್ಷದ ಶಾಸಕರು. ಅವರ ಮೇಲೆ ನಡೆದ ಹಲ್ಲೆ ದುರದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ಆಯ್ಕೆ ಯಾಗಿದ್ದ ಶಾಸಕ, ಮಂತ್ರಿಯಾಗಿದ್ದಂತವರು.ಅವರು ಮೇಲೆ ಹಲ್ಲೆ ದುರದೃಷ್ಟಕರ. ಅದು ಎಂತಹ ಸಂದರ್ಭದಲ್ಲಿ ಹಲ್ಲೆಯಾಗಿದೆ ನೋಡಿ.ಗಾಂಧಿಗಿರಿ ನೆನೆಸುಕೊಳ್ಳೊವಾಗ ಕರ್ನಾಟಕದಲ್ಲಿ ಗೂಂಡಾಗಿರಿ ನಡೀತಿದೆ. ಗಾಂಧಿ ರಾಜ್ಯಮಾಡ್ತೇವೆ ಎನ್ನುತ್ತಾರೆ. ಆದರೆ ಗೂಂಡಾರಾಜ್ಯ ಮಾಡ್ತಿದ್ದಾರೆ. ನನ್ನ ಮೇಲೆ ಮತ್ತು ಇವರ ಮೇಲೆ ನಡೆದ ಹಲ್ಲೆ ತಾಜಾ ಉದಾಹರಣೆ . ನನ್ನ ಕೇಸ್‌ನಲ್ಲಿ ಈಗ ಕೇಸ್ ಮಾಡಿದ್ದೇ ತಪ್ಪು ಎನ್ನುತ್ತಾರೆ . ಹಾಗಾದ್ರೆ ನನ್ನ ಬಂದಿಸಿರೋದು ಯಾವ ಕಾರಣಕ್ಕೆ . ಪರಮಾಧಿಕಾರ ಇರೋದು ಸಭಾಪತಿಗಳಿಗೆ. ಸಭಾಪತಿ ರೂಲಿಂಗ್ ಕೊಟ್ಟ ಮೇಲೆಯೂ ಕೇಸ್ ಮಾಡಿದ್ರು. ನೋಟಿಸ್ ಕೊಟ್ಟಿಲ್ಲ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಮೂಲಭೂತ ಹಕ್ಕನ್ನ ಸಂವಿಧಾನ ಕೊಟ್ಟಿದೆ. ಅದನ್ನ ಇವರು ಕಸಿದುಕೊಂಡರು. ಮಾನವ ಹಕ್ಕುಗಳ ಆಯೋಗದ ನಿಯಮವನ್ನು ಮೀರಿದರು. ನಾನು ಹೋರಾಟದ ಹಿನ್ನೆಲೆಯಿಂದ ಬಂದವನು. ಬೆನ್ನು ತೋರಿಸಿ ಓಡೋದು ಇಲ್ಲ. ಕೆಟ್ಟದನ್ನ ಮಾಡಿದ್ದೇ ಇಲ್ಲ ಮಾಡೋದು ಇಲ್ಲ. ಬಹಳ ದಿನ ಗೂಂಡಾಗರಿ ನಡೆಯಲ್ಲ ನೋಡೊಣ. ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿ ಅಧಿಕಾರ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು ಆಮೇಲೆ ಏನಾಯ್ತು ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಟ ಇದು ಜಾಸ್ತಿ ದಿನ ನಡೆಯಲ್ಲ. ಮುನಿರತ್ನ ಅವರನ್ನ ಮಾತನಾಡಿಸಲು ಬಂದಿದ್ದೇನೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡಿರುವದು ಅಂಗೈ ಹುಣ್ಣಾಗಿದೆ ಎಂಬಂತೆ ಕಾಣಿಸುತ್ತದೆ. ನನ್ನ ವಿಚಾರದಲ್ಲಿ ಮೂರು ಆಯಾಮದಲ್ಲಿ ನೋಡಬೇಕು. ಆರ್ಟಿಕಲ್ 194 ಪ್ರಕಾರ ಪರಮಾಧಿಕಾರವನ್ನ ಸಭಾಪತಿಗಳಿಗೆ ಕೊಡಲಾಗಿದೆ. ಸಭಾಪತಿಗಳ ನಿರ್ಣಯವನ್ನ ಅವರಿಗೆ ಬಿಟ್ಟಿದ್ದು. ಆದರೆ ಈ ಸರ್ಕಾರ ಕಾನೂನು ದುರ್ಬಳಕೆ ಮಾಡಿದ್ದಾರೆ. ನನಗೆ ನೋಟಿಸ್ ಕೊಟ್ಟಿರಲಿಲ್ಲ ಅಲ್ಲದೆ ಬಂಧನ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಬಂಧನದ ನಂತರ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದ್ರು. ನನ್ನ ಜೀವನದಲ್ಲಿ ಹೋರಾಟದ ಮೂಲಕ ಬಂದವನು ಬೆನ್ನು ತೋರಿಸಿ ಓಡಿಹೋದವನಲ್ಲ. ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ ಎಂದರು.
ಇದೇ ವೇಳೆ ಮನ ಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು. ದೇಶದಲ್ಲಿ ಅರ್ಥ ಸಚಿವರಾಗಿದ್ದ ಹಿರಿಯ ಮುತ್ಸದ್ದಿ ರಾಜಕಾರಣಿ ಎಂದರೆ ತಪ್ಪಾಗುತ್ತೆ.ಅರ್ಥಶಾಸ್ತ್ರಜ್ಞರಾದ ಮಾಜಿ ಪ್ರಧಾನಿ ಮನಮೋಹನ್‌ರ ನಮ್ಮನ್ನ ಅಗಲಿದ್ದಾರೆ. ದೇಶದ ಆರ್ಥಿಕ ಸ್ಥಿತಿಯನ್ನ ಹಳಿಗೆ ತರಲು ಕಾರಣೀಕಕರ್ತರು. ರಷ್ಯಾ ಮಾದರಿಯ ಅರ್ಥವ್ಯವಸ್ಥೆಯನ್ನ ನಾವು ಅಳವಡಿಕೊಂಡಿದ್ದೆವು. ಅದರಿಂದ ವಿಫಲರಾಗ್ತಿದ್ದೇವೆ ಎನ್ನೋದು ಗೊತ್ತಾದಾಗ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ತಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.











