ಬೆಂಗಳೂರು; ನವರಾತ್ರಿ ಬಳಿಕ ಸಿಎಂ ರಾಜೀನಾಮೆ ಬಗ್ಗೆ ಬಿಜೆಪಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.ಗಡುವು ಕೊಡುವುದು ಸ್ಟುಪಿಡ್.ವಿಜಯೇಂದ್ರ ಹೇಳೋಕೆ ಯಾರು?ಅವರ ಅಧ್ಯಕ್ಷ ಸ್ಥಾನ 5 ನಿಮಿಷದಲ್ಲಿ ಎಲ್ಲಿ ಹೋಗುತ್ತೆ ಅನ್ನೋ ಆತಂಕ ಅವರಿಗಿದೆ.ಅವರ ಗಡುವುಗಳನ್ನ ಕಸದ ಬುಟ್ಟಿಗೆ ಹಾಕಿ ಎಂದಿದ್ದಾರೆ.
ಇನ್ನು ಮೊನ್ನೆ ಮಂಡ್ಯದಲ್ಲಿ ದಲಿತ ಸಚಿವರ ಸಭೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಸತೀಶ್ ಜಾರಕಿಹೊಳಿ ಒಬ್ಬ ಲೀಡರ್.ನಾನು ಅವರ ಮನೆಗೆ ಹೋಗ್ತೀನಿ, ಅದಕ್ಕೆ ಏನೋ ಅರ್ಥ ಕಲ್ಪಿಸಬಾರದು.ನಾವು ಮೊನ್ನೆ ಹಿಂದುಳಿದ ವರ್ಗದವರೆಲ್ಲ ಸಿಎಂ ಭೇಟಿ ಮಾಡಿ, ಭೇಟಿ ಮಾಡಿ ಜಾತಿಜನಗಣತಿ ಜಾರಿಗೆ ಮನವಿ ಮಾಡಿದ್ದೇವೆ ಎಂದರು.
ಜಾತಿಜನಗಣತಿಗೆ ಸ್ವಪಕ್ಷದಲ್ಲೇ ವಿರೋಧ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅವರಿಗೆ ಗೊತ್ತಾ ವರದಿಯಲ್ಲೇನಿದೆ ಅಂತ? ಸಿದ್ದರಾಮಯ್ಯ ನವರಿಗೆ ಗೊತ್ತಿಲ್ಲ. ಅವರ ಭಾವನೆಗಳಿಗೆ ಅವಕಾಶವಿದೆ.ಆಯೋಗದ ಮೂಲಕ ನಾವು ನಮ್ಮ ಭಾವನೆ ಕೇಳಿದ್ದೇವೆ ಎಂದರು.ಇನ್ನು ಇದೇ ವೇಳೆ ಒಳಮೀಸಲಾತಿ ಕುರಿತು ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅವರ ಅವಧಿಯಲ್ಲೇ ಆಗಿದ್ದು ಅಲ್ವಾ ? .ಅವರು ಅವರ ಪಕ್ಷದಲ್ಲಿ ನೋಡಿಕೊಳ್ಳಲಿ.ಅವರಿಗೆ ನಾನು ಉತ್ತರ ಕೊಡೊಲ್ಲ ಎಂದಿದ್ದಾರೆ.
ತುಮಕೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ಗುಬ್ಬಿ ಶಾಸಕ, ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ವಿರೋಧ
ತುಮಕೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕನಿಂದಲೇ ವಿರೋಧ ಕೇಳಿ ಬಂದಿದೆ. ಗುಬ್ಬಿ ಶಾಸಕ, ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ರಿಂದ ಜಾತಿಗಣತಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ವರದಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಂತರ ಕ್ಯಾಬಿನೆಟ್ ಗೆ ತರಲಿ ಎಂದಿದ್ದಾರೆ.ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ.ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು.ಆ ರೀತಿಯಲ್ಲಿ ವರದಿಯನ್ನ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದು ತುಮಕೂರಿನಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ನಾನು ಹಿಂದೆ ಇದರ ಬಗ್ಗೆ ಒಂದು ಸಾರಿ ಪ್ರಸ್ತಾಪ ಮಾಡಿದ್ದೆ.ನಮ್ಮ ಒಕ್ಕಲಿಗರಲ್ಲಿ ಒಳ ಪಂಗಡಗಳು ಇವೆ.ಲಿಂಗಾಯತರಲ್ಲೂ ಒಳಪಂಗಡಗಳು ಇವೆ. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರ್ತಾರೆ.ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ. ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರಿತಾರೆ. ಅದ್ಯಾವುದು ಕೂಡಾ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ.ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರ್ತಾರೆ.ನಮ್ಮಲ್ಲಿ ವಿರೋಧ ಯಾಕೆ ಅಂದ್ರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ.ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು .ಅವರಲ್ಲಿಯೂ ಅನೇಕ ಒಳಪಂಗಡಗಳು ಇವೆ.ಆದ್ದರಿಂದ ಅದನ್ನ ಸರಿಯಾದ ರೀತಿಯಲ್ಲಿ ಮಾಡಿದ್ದಾರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ.
ಜಾತಿಗಣತಿ ಸರಿಯಾಗಿ ಮಾಡದೇ ಇದ್ದಾಗ ಜನಾಂಗಕ್ಕೆ ಅನ್ಯಾಯ ಆಗುತ್ತೆ ಅನ್ನುವ ಕಳಕಳಿ ಎಲ್ಲರಲ್ಲಿ ಇದೆ.ಆ ದೃಷ್ಟಿ ಇಟ್ಟುಕೊಂಡು ಈ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ನನಗೆ ಅನ್ಸುತ್ತೆ.ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.ಇದುವರೆಗೂ ಯಾರಿಗೂ ಗೊತ್ತಿಲ್ಲ.ಆ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಆ ರೀತಿಯಾದರೇ ಅನ್ಯಾಯ ಆಗುತ್ತಲ್ಲ ಎಂದಿದ್ದಾರೆ.
ಇನ್ನುಸಿಎಲ್ ಪಿ ಸಭೆಯಲ್ಲಿ ವರದಿ ಬಗ್ಗೆ ಚರ್ಚೆ ಆಗಲಿ ಎಂದು ಶಾಸಕರ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಮ್ಮಲ್ಲಿ ಎಲ್ಲರಿಗೂ ಕೂಡಾ ಅದೊಂದು ದುಗುಡ ಇದೆ.ಯಾವ ರೀತಿಯಾಗಿ ಅವರು ತಯಾರು ಮಾಡಿದ್ದಾರೆ ಅನ್ನೊದು ನಮಗ್ಯಾರಿಗೂ ಸ್ಪಷ್ಟತೆ ಇಲ್ಲ.ಹಾಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡಿ, ಅದರ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಬೇಕಾಗುತ್ತೆ ಎಂದ ಅವರು ಎಲ್ಲೋ ಒಂದು ಕಡೆ ಕುಳಿತು ವರದಿ ತಯಾರಿಸಿದ್ದಾರೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ್ರು. ಇರಬಹುದು, ಅದನ್ನೆಲ್ಲಾ ನೋಡಿದಾಗ ಗೊತ್ತಾಗುತ್ತೆ.ನಮ್ಮ ಊರು ನಮ್ಮ ತಾಲ್ಲೂಕು ತಗೊಂಡ್ರೆ,ನಮಗೆ ಸಂಪೂರ್ಣ ಮಾಹಿತಿ ಇರುತ್ತೆ .ಅದನ್ನ ನಾವು ನೋಡಿದ್ರೆ ಗೊತ್ತಾಗುತ್ತೆ.ನಮ್ಮ ಹತ್ರ ಎಲ್ಲಾ ಮಾಹಿತಿ ಇರುತ್ತೆ.ಹೀಗಾಗಿ ವರದಿಯನ್ನ ನೋಡಿದ ತಕ್ಷಣ ಗೊತ್ತಾಗುತ್ತೆ.ಇದು ಸರಿನೋ ತಪ್ಪೋ ಅಂತಾ ಎಂದು ತುಮಕೂರಿನಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.