ಮನೆ Latest News ಶಿರಾಡಿ ಘಾಟ್ ಗೆ ಸಿಎಂ ಸಿದ್ದರಾಮಯ್ಯ ಭೇಟಿ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದು

ಶಿರಾಡಿ ಘಾಟ್ ಗೆ ಸಿಎಂ ಸಿದ್ದರಾಮಯ್ಯ ಭೇಟಿ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದು

0

ಹಾಸನ; ಸಿಎಂ ಸಿದ್ದರಾಮಯ್ಯ ಅವರು ಇಂದು ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಈ ವೇಳೆ ಗುಡ್ಡ ಕುಸಿತದ ಭೀಕರತೆ ಹಾಗೂ  ನ್ಯಾಷನಲ್ ಹೈವೇಯ ಪರಿಸ್ಥಿತಿ ನೀಡಿ ಸಿಎಂ ಸಿದ್ದರಾಮಯ್ಯ ಅವರು ಶಾಕ್ ಗೆ ಒಳಗಾದ್ರು.  ಅಲ್ಲದೇ ಇದಕ್ಕೆಲ್ಲಾ ಅವೈಜ್ಞಾನಿಕ  ರಸ್ತೆ  ಕಾಮಗಾರಿಯೇ ಕಾರಣ ಎಂದ ಸಿಎಂ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರನ್ನು  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ಅಲ್ಲದೇ ಅವರಿಗೆ ಪ್ರಶ್ನೆಗಳ ಸುರಿ ಮಳೆಯನ್ನೇ ಸುರಿಸಿದ್ರು. ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 9೦ ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಅಂತಾ ಗರಂ ಆದ್ರು.

ಹಣ ಉಳಿಸುವ ಉದ್ದೇಶದಿಂದ ನೀವು ಕಡಿಮೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದೀರಿ. ಖರ್ಚು ಕಡಿಮೆ ಡಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಅಗೆದಿದ್ದೀರಿ. 30 ರಿಂದ 45  ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ಆಗುತ್ತಿರಲಿಲ್ಲ ಎಂದ ಸಿಎಂ, ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ ಎಂದು ಸಿಎಂ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರನ್ನು ಪ್ರಶ್ನಿಸಿದ್ರು.

ಈ ವೇಳೆ ವಿಲಾಸ್ ಅವರಿಂದ ಸೂಕ್ತ ಉತ್ತರ ಸಿಗದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂಗೆ ರಸ್ತೆ ಕಾಮಗಾರಿ ಬಗ್ಗೆ ವಿವರಿಸಿದ್ರು. ಒಟ್ಟು 45 ಕಿಮೀ ನಲ್ಲಿ 35 ಕಿಮೀ ಕಾಮಗಾರಿ ಮುಗಿದಿದೆ. 10 ಕಿಮೀ ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆ ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಎಂದು ತಿಳಿಸಿದ್ರು.

ಶಿರಾಡಿ ಘಾಟ್ ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ

ಶಿರಾಡಿಘಾಟ್ ನ ದೊಡ್ಡತಪ್ಲು ಬಳಿ ಗುಡ್ಡ ಕುಸಿತವಾದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಡಿಸಿ, ಎಸ್ಪಿ ಹಾಗು ಅದಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ನಲ್ಲಿ ನಿನ್ನೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತವಾಗಿತ್ತು.ಇಂದು ಸ್ಥಳಕ್ಕೆ ಆಗಮಿಸಿದ ಸಚಿವರು ಪರಿಶೀಲನೆ ನಡೆಸಿದ್ದಾರೆ.ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ‌ಹಾಸನ ನೆನ್ನೆ ಗುಡ್ಸ ಕುಸಿತ ಆಗಿದೆ.ನಮ್ಮ ಅದೃಷ್ಟ ಯಾರಿಗೆ ಏನೂ ತೊಂದರೆ ಆಗಿಲ್ಲ.ಗುಡ್ಡ ಕುಸಿದು ಮಣ್ಣಿನ ಅಡಿ ಸಿಲುಕಿದ್ದ ವಾಹನಗಳನ್ನ ನಮ್ಮ ಸಿಬ್ಬಂದಿ ಹೊರ ತೆಗೆದಿದ್ದಾರೆ.ಶಿರಾಡಿಘಾಟ್ ಸಮಸ್ಯೆ ಇಂದು ನಿನ್ನೆಯದಲ್ಲ.ಇದು ಹಲವು ವರ್ಷಗಳಿಂದ ಸಮಸ್ಯೆ ಇದೆ.ಗುಡ್ಡಗಳನ್ನು ನೇರವಾಗಿ ಕಡಿದಿದ್ದರಿಂದ ಸಮಸ್ಯೆ ಆಗಿದೆ.ಇಲ್ಲಿನ ಸಮಸ್ಯೆ ಬಗ್ಗೆ ನಾವು ಸಿಎಂ ಇಂದನು ಕೂಡ ಪತ್ರ ಬರೆಸುತ್ತೇವೆ.ಸೂಕ್ತ ಬಂದೊ ಬಸ್ತ್ ಮಾಡದೆ ರಸ್ತೆ ಮಾಡಿ ಸಮಸ್ಯೆ ಆಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಯೊಲಜಿಕಲ್ ಸರ್ವೆ ಆಫ್ ಇಂಡಿಯಾ ದಿಂದ ವರದಿ ಪಡೆಯುತ್ತೇವೆ ಈಗ ಏನಾಗಿದೆ, ಯಾವ ರೀತಿ ಆಗಬೇಕು ಎಂದು ವರದಿ ಪಡೆಯುತ್ತೇವೆ ಎಂದರು.

ಸಿಎಂ ಮೂಲಕ ಎನ್ ಎಚ್ ಎ ಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ತಾಕೀತು ಮಾಡುತ್ತೇವೆ.ನಮ್ಮ ರಾಜ್ಯದ ಹಲವು ಕಡೆ ಗುಡ್ಡ ಕುಸಿತ ಆಗಿದೆ.ಒಟ್ಟು 300 ಕೋಟಿ ವೆಚ್ಚದಲ್ಲಿ ಭೂ ಕುಸಿತ ಆಗೋ ಸಾದ್ಯತೆ ಕಡೆಗಳಲ್ಲಿ ಕಾಮಗಾರಿ ಮಾಡುತ್ತೇವೆ.ಈ ಬಗ್ಗೆ ಶೀಘ್ರವಾಗಿ ಡಿಸಿಗಳಿಂದ ಪ್ರಸ್ತಾವನೆ ಪಡೆದು ತಡೆ ಕ್ರಮಗಳ ನ್ನು ಕೈಗೊಳ್ಳುತ್ತೇವೆ.ನಿನ್ನೆ ವಯನಾಡಿನಲ್ಲಿ ನಡೆದ ಘಟನೆ ನಮಗೆ ಎಚ್ಚರಿಕೆ ಗಂಟೆ.ನಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡಿದ್ರೆ ಏನಾಗುತ್ತೆ ಎಂದು ಅದು ತೋರಿಸಿದೆ.ಅಲ್ಲಿಗೆ ನಮ್ಮ ಸರ್ಕಾರದಿಂದ ಇಬ್ಬರು ಅಧಿಕಾರಿಗಳನ್ನು ಕಳಿಸಲಾಗಿದೆ ಎಂದರು.

ಇನ್ನು ಕೇರಳ ಸರ್ಕಾರ ಕ್ಕೆ ಬೇಕಾದ ನೆರವು ಕೂಡ ನೀಡ್ತೇವೆ.ಇಂದು ಕೇರಳದಲ್ಲಿ ಆಗಿದೆ ನಾಳೆ ಎಲ್ಲಿ ಬೇಕಿದ್ದರು ಆಗಬಹುದು.ಜನರು, ಸರ್ಕಾರ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.