ಮನೆ Latest News ಚಿನ್ನಸ್ವಾಮಿ ಕ್ರೀಡಾಂಗಣದ ದುರಂತಕ್ಕೆ ಏನೇನೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇವೆ; : ಸಿಎಂ ಸಿದ್ದರಾಮಯ್ಯ ಹೇಳಿಕೆ

ಚಿನ್ನಸ್ವಾಮಿ ಕ್ರೀಡಾಂಗಣದ ದುರಂತಕ್ಕೆ ಏನೇನೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇವೆ; : ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದ ದುರಂತಕ್ಕೆ ಏನೇನೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇವೆ ಎಂದು  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಎಚ್‌ಬಿ ಸೂರ್ಯನಗರದ 4ನೇ ಹಂತದ ನಿವೇಶನಗಳ ಹಂಚಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ನಾನು ಅತ್ಯಂತ ಸಂತೋಷದಿಂದ ಭಾಗಿಯಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ಇವತ್ತು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಶಂಕುಸ್ಥಾಪನೆ ಆಗಿದೆ. ಬೆಂಗಳೂರು ರಾಜ್ಯದಲ್ಲಿ  ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇರಲಿಲ್ಲ. ಇವತ್ತು ಸುಮಾರು943  ಕೋಟಿ ವೆಚ್ಚದಲ್ಲಿ ಗೃಹ ಮಂಡಳಿ ಆನೇಕಲ್ ತಾಲ್ಲೂಕಿನ ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದ್ದಾರೆ. ಜಮೀರ್ ಅಹಮದ್ ಮತ್ತು ಶಿವಲಿಂಗೇಗೌಡ ಗೆ ಧನ್ಯವಾದ ತಿಳಿಸುತ್ತೇನೆ. ಗೃಹ ಮಂಡಳಿ ಮನೆ ನಿರ್ಮಾಣ ಮಾಡುತ್ತಿತ್ತು. ಈಗ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ದುರಂತ ಆಯ್ತು. ನಾನು ಆಗ ಆಲೋಚನೆ ಮಾಡಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದ್ದೇವೆ.ಚಿನ್ನಸ್ವಾಮಿ ಕ್ರೀಡಾಂಗಣದ ದುರಂತಕ್ಕೆ ಏನೇನೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಗುಜರಾತ್ ನಲ್ಲಿ 90 ಸಾವಿರ ಆಸನಗಳ ಕ್ರೀಡಾಂಗಣ ಇದೆ. ಈಗ ಆನೇಕಲ್ ನಲ್ಲಿ80 ಸಾವಿರ ಆಸನಗಳನ್ನ ನಿರ್ಮಾಣ ಮಾಡುತ್ತಿದ್ದೇವೆ.ಬಿಜೆಪಿಯವ್ರು ಏನೇನು ಮಾಡಿದ್ದಾರೆ ಈಗ ನಾನು ಪ್ರಸ್ತಾಪ ಮಾಡಲ್ಲ. ಸ್ವಲ್ಪ ರಾಜಕೀಯ ಭಾಷಣ ಮಾಡೋಣ ಅಂದುಕೊಂಡಿದ್ದೆ. ಕೃಷ್ಣಪ್ಪ ನೀನು ಇರುವುದರಿಂದ‌ ರಾಜಕೀಯ ಮಾತನಾಡಲ್ಲ ಎಂದು ಸಿಎಂ ಹೇಳಿದ್ದಾರೆ. ಹಿಂದೆ ನಾನು ಮೊದಲ ಬಾರಿಗೆ 14500 ಮನೆಗಳನ್ನ ಕಟ್ಟಿಕೊಟ್ಟೆವು. ಅದೊಂದು ಸುವರ್ಣ ಯುಗ . ಸೂರ್ಯಸಿಟಿಯಲ್ಲಿ ಕ್ರೀಡಾಂಗಣದ ಜೊತೆಗೆ ಕ್ರೀಡಾ ಗ್ರಾಮವೂ ಆಗುತ್ತೆ ಎಂದು ಸೂರ್ಯ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಪ್ರವಾಸೋದ್ಯಮವೂ ಬೆಳೆಯುತ್ತೆ, ಆರ್ಥಿಕತೆಯೂ ಬೆಳವಣಿಗೆ ಆಗುತ್ತೆ. ಜೊತೆಗ ಉದ್ಯೋಗವೂ ಸೃಷ್ಟಿಯಾಗುತ್ತೆಯ ಹೀಗಾಗಿ ಅತ್ಯಂತ ಸಂತೋಷದಿಂದ ಶಂಕುಸ್ಥಾಪನೆ ಮಾಡಿದ್ದೇನೆ ಎಂದಿದ್ದಾರೆ.