ಮನೆ Latest News ಜಾತಿಗಣತಿಯಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಸರ್ಕಾರ ಹೇಳುತ್ತಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

ಜಾತಿಗಣತಿಯಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಸರ್ಕಾರ ಹೇಳುತ್ತಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

0

ಬೆಂಗಳೂರು : ಜಾತಿಗಣತಿಯಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಸರ್ಕಾರ ಹೇಳುತ್ತಿದೆ ಎಂದು
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ಯಾವುದೋ ಒತ್ತಡಕ್ಕೆ ಆತುರಾತುರವಾಗಿ ಮಾಡುತ್ತಿರುವಂತಿದೆ.
ಸಮೀಕ್ಷೆಯಲ್ಲಿ ಅಸಂಬದ್ಧವಾಗಿ ಅನೇಕ ಪ್ರಶ್ನೆಗಳೂ ಇವೆ.ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಇದರ ಬಗ್ಗೆ ಹೇಳಿದ್ದಾರೆ ಎಂದಿದ್ದಾರೆ.

ಶಿಕ್ಷಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ, ವಿಕಲ ಚೇತನರನ್ನು ಹಾಕಿದ್ದಾರೆ, ಗಣತಿಗೆ ಹೋದವರಿಗೆ ನಾಯಿ ಕಡಿದಿದೆ. ನಾವೇನಾದರೂ ಹೆಚ್ಚು ಮಾತಾಡಿದರೆ ಬಿಜೆಪಿಯವರು ವಿರೋಧಿಗಳು ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯನವರೇ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಕಾಂಗ್ರೆಸ್ ಗಿಂತ ಹೆಚ್ಚು ಬದ್ಧತೆ ಬಿಜೆಪಿ ಇದೆ.ಕಾಂತರಾಜ್ ಆಯೋಗದ ಅವಧಿಯಲ್ಲಿನ ಗೊಂದಲ ಈಗಲೂ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.