ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸೈಟ್ ವಾಪಾಸ್ ವಿಚಾರಕ್ಕೆ ಸಂಬಂಧಪಟ್ಟಂತೆ : ಬಿಜೆಪಿ ರಾಜ್ಯ ಕಚೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದ್ರು.
ಈ ವೇಳೆ ಮಾತನಾಡಿದ ಅವರು ಸಿಎಂ ಐಟುಗಳು ಸಾಮಾನ್ಯವಾಗಿ ಅರ್ಧ, ಒಂದು ಎಕರೆ ನೀಡುತ್ತೆ.ಬೆಂಗಳೂರಿನ ಪ್ರದೇಶಗಲ್ಲಿ ಇಷ್ಟೆ ಇದೆ, ಬೇರೆ ಪ್ರದೇಶಗಳಲ್ಲಿ 5 ರಿಂದ 10 ಎಕರೆ ಇದೆ.ಈಗ ಅವರಿಗೆ ಅರಿವಾಗಿದೆ, ನಾನು ರಾಹುಲ್ ಖರ್ಗೆನ ಅಭಿನಂಧಿಸುತ್ತೇನೆ. ಪ್ರಿಯಾಂಕ್ ಖರ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ.ರಾಹುಲ್ ಖರ್ಗೆ ವ್ಯಕ್ತಿಗೆ ಸೌಮ್ಯವಾದುದು ಅಂತಾ. ಆದರೆ ಇದನ್ನ ಪ್ರಿಯಾಂಕ್ ಖರ್ಗೆ ಯಾಕೆ ಮೈಗೂಡಿಸಿಕೊಳ್ಳಬಾರದು?.ನನ್ನ ಮೇಲೆ ಆರೋಪ ಮಾಡಿದ್ರು. ಧಮ್ ಬಿರಿಯಾನಿ ಬಗ್ಗೆ ಮಾತನಾಡಿದ್ರು.ಹೋಗಿ ಅಲ್ಲಿ ತಿಂದು ಬಾ, ಅದನ್ನ ಓಪನ್ ಮಾಡಿದವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಕೆಐಎಡಿಬಿಯಿಂದ ಜಾಗ ತೆಗೆದುಕೊಂಡೆ.ಎಂ.ಬಿ ಪಾಟೀಲ್ ಮುಖಾಂತರ ಭಾರೀ ಒತ್ತಡ ಹಾಕಿದ್ರು.ಏರೋಫೇಸ್ ನಲ್ಲಿ ಕೊಟ್ಟಿರುವ ಸೈಟ್ ಕಾನೂನು ಬಾಹಿರ.ಅದನ್ನೂ ತಕ್ಷಣ ರದ್ದು ಮಾಡ್ಬೇಕು.ಈ ವಿಚಾರವಾಗಿ ನಾವು ಕೋರ್ಟ್ ಗೆ ಹೋಗ್ತೀವಿ ಎಂದಿದ್ದಾರೆ.ಲೀಗಲ್ ಆಗಿಯೇ ಇದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ರಿಯ್ಯಾಕ್ಟ್ ಮಾಡಿದ ಛಲವಾದಿ ನಾರಾಯಣ ಸ್ವಾಮಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗಾಯ್ತು.ಯಾಕೆ ವಾಪಾಸ್ ಕೊಟ್ರು? ಸಿದ್ದರಾಮಯ್ಯ ಕೂಡ ವಾಪಾಸ್ ಕೊಟ್ಟಿದ್ದಾರೆ.ಈಗ ಮನಸ್ಸಿಗೆ ಬಂದು ವಾಪಾಸ್ ಕೊಟ್ರು.ಸಿಎಂಗೂ ಸಹ ವಾಪಾಸ್ ಕೊಡುವ ಅವಶ್ಯಕತೆ ಇರಲಿಲ್ಲ.ವಿಚಾರಣೆ ವೇಳೆ ವಾಪಾಸ್ ಕೊಟ್ಟು ಏನು ಮಾಡುತ್ತಿದ್ದೀರಿ.ಬೆಂಗಳೂರು ಬಿಟ್ಟು ಮೈಸೂರು ಸುತ್ತಲು ಸಿಎಂ ಹೋಗಿದ್ದಾರೆ. ಕ್ಲೀನ್ ಚೀಟ್ ತೆಗೆದುಕೊಳ್ಳಲು ಸಿಎಂ ಸುತ್ತಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಬಿದ್ದರೆ ಸಿಬಿಐ ಎಂಟ್ರಿಯಾಗುತ್ತೆ ಎಂದಿದ್ದಾರೆ.
ಇನ್ನು ತಪ್ಪು ಮಾಡಿ ಮೈ ಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆ ಗೊತ್ತಿದೆ. ಅಪ್ಪರ್ ಚೇಂಬರ್ ವೀಕ್ ಇದೆ.ಎಲ್ಲದಕ್ಕೂ ನನ್ನ ಬಿಟ್ಟು ಪ್ರವೀಣರೇ ಇಲ್ಲ ಅಂದುಕೊಂಡಿದ್ದಾರೆ.ನಾವೆಲ್ಲ ಗ್ರಾಸ್ ರೂಟ್ ನಿಂದ ಬಂದಂತಹವರು.ತೊಡೆ ತಟ್ಟಿದ್ರೆ ಈಗ ಆಗಿರುವ ಪರಿಸ್ಥಿತಿ ಆಗೋದು.ಹಿರಿಯರ ಬಗ್ಗೆ ಮಾತನಾಡುವಾಗ ಹಿರಿಯನ್ನ ಗೌರವಿಸಬೇಕು ಎನ್ನುತ್ತಾ ಪ್ರಿಯಾಂಕ್ ಖರ್ಗೆ ಅವರನ್ನು ಛಲವಾದಿ ನಾರಾಯಣಸ್ವಾಮಿ ನಾಯಿಗೆ ಹೋಲಿಸಿದ್ದಾರೆ.
ಮೋದಿ ಆನೆ, ಆನೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿ ಬೊಗಳಿದ್ರೆ ಆನೆ ಭಯ ಪಡುತ್ತಾ?ಈಗಲೇ ಪ್ರಿಯಾಂಕ್ ಖರ್ಗೆ ಸಿಎಂ ರೀತಿ ಆಡೋದು ಬೇಡ. ಮಾತನಾಡೋದನ್ನ ಮೈಗೂಡಿಸಿಕೊಂಡರೆ ಒಳ್ಳೆಯ ನಾಯಕ ಆಗಬಹುದು ಎಂದಿದ್ದಾರೆ..











